"ಅವರನ್ನು ದಂಡಿಸಲಾಗುತ್ತಿದೆ, ಆದರೆ ಅವರು ಎಷ್ಟು ಮೂರ್ಖರೆಂದರೆ, ಅವರನ್ನು ದಂಡಿಸಲಾಗುತ್ತಿದೆ ಎಂದು ಅವರಿಗೆ ಅರ್ಥವಾಗುತ್ತಿಲ. ನಾಯಿಯನ್ನು ದಂಡಿಸುವಂತೆ. ಅದಕ್ಕೆ ತಿನ್ನಲು ಆಹಾರವಿಲ್ಲ, ಹಗಲು ರಾತ್ರಿ ಮಲ ತಿನ್ನುತ್ತದೆ. ಯಾರೋ ಕಲ್ಲು ಹೊಡೆಯುತ್ತಾರೆ, ಯಾರೋ ಬಡಿಯುತ್ತಾರೆ, ಆದರೂ, ಅದು ತುಂಬಾ ಖುಷಿಯಾಗಿದೆ: 'ಗೌ, ಗೌ, ಗೌ, ಗೌ. ನಾನು ತುಂಬಾ ಸಂತೋಷವಾಗಿದ್ದೇನೆ'. ಹೀಗೆ ನಡೆಯುತ್ತಿದೆ (ನಗು) (ನಗುತ್ತಾರೆ). ಆದ್ದರಿಂದ, ಈ ನಾಯಿಯ ಸಂಘ, ನಾಯಿ ಸಮಾಜ, ಅವರು ಪ್ರತಿ ಹಂತದಲ್ಲೂ ಬಳಲುತ್ತಿದ್ದಾರೆ; ಆದರೂ, “ನಾವು ಮುಂದುವರಿಯುತ್ತಿದ್ದೇವೆ”, ಎಂದು ಭಾವಿಸುತ್ತಿದ್ದಾರೆ. ಅಷ್ಟೆ. ನಾಯಿ ನಾಗರಿಕತೆ, ಹಂದಿ ನಾಗರಿಕತೆ, ನಾಯಿ ನಾಗರಿಕತೆ. ಇದು ನಾಗರಿಕತೆಯಲ್ಲ. ನಾಯಂ ದೇಹೋ ದೇಹ-ಭಾಜಾಂ ನೃಲೋಕೆ ಕಷ್ಟಾನ್ ಕಾಮನ್ ಅರ್ಹತೇ ವಿದ್-ಭುಜಾಂ ಯೇ (ಶ್ರೀ.ಭಾ 5.5.1)."
|