KN/760420 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮೆಲ್ಬರ್ನ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಜೀವಾತ್ಮ ತಂದೆಯ ವೀರ್ಯದ ಮೂಲಕ ತಾಯಿಯ ಗರ್ಭದಲ್ಲಿ ಪ್ರವೇಶಿಸುತ್ತದೆ, ಅದೇ ಪ್ರಕ್ರಿಯೆ. ಜೀವಾತ್ಮ ಪ್ರವೇಶಿಸದೆ ದೇಹವು ರೂಪುಗೊಳ್ಳುವುದಿಲ್ಲ. ಅದು ಕೇವಲ ಜಡ. ಜೀವಾತ್ಮ ಪ್ರವೇಶಿಸಿದಾಗ ಅದರ ಮನಸ್ಸಿನ ಪ್ರಕಾರ ರಚನೆ ನಡೆಯುತ್ತದೆ. ಇದರ ಬಗ್ಗೆ ಅವರಿಗೆ ಏನು ಗೊತ್ತು? ಹ್ಮ್? ಯಂ ಯಂ ವಾಪಿ ಸ್ಮರನ್ ಭಾವಂ ತ್ಯಜತಿ ಅಂತೇ ಕಲೇವರಮ್ (ಭ.ಗೀ 8.6). ಜಡವನ್ನು ಕೇವಲ ಬಯಕೆಗೆ ಅನುಗುಣವಾಗಿ ಹೊಂದಿಸಲಾಗಿದೆ. ನನ್ನ ಆಸೆಗೆ ಅನುಗುಣವಾಗಿ ನಾವು ಈ ದೊಡ್ಡ ಮನೆಯನ್ನು ನಿರ್ಮಿಸಿದಂತೆ. ಜಡವು ಈ ದೊಡ್ಡ ಮನೆಯಾಗಿ ತಂತಾನೆ ಆಕಾರವನ್ನು ಪಡೆದುಕೊಂಡಿಲ್ಲ. ನಾನು ಮಾಲೀಕ. ʼಕೊಠಡಿಗಳು ಈ ರೀತಿ ಇರಲಿ', ಎಂದು ನಾನು ಬಯಸಿದೆ. ಅಂತೆಯೇ, ಭೌತಿಕ ಅಂಶಗಳಾದ ತಂದೆಯ ವೀರ್ಯ ಮತ್ತು ತಾಯಿಯ ಅಂಡ ಮಿಶ್ರಣವಾಗಿ, ಸಿಮೆಂಟಿನ ಹಾಗೆ, ಜೀವಿಯ ಬಯಕೆಯ ಪ್ರಕಾರ ರೂಪುಗೊಳ್ಳುತ್ತದೆ. ಸಿಮೆಂಟ್ ತಂತಾನೆ ಕೋಣೆ, ಪೈಪ್, ಅಥವಾ ಇತರ ವಸ್ತುಗಳಾಗುವುದಿಲ್ಲ."
760420 - ಸಂಭಾಷಣೆ - ಮೆಲ್ಬರ್ನ್