ದಯಾನಂದ: ಜನರು ಹಣಕ್ಕಾಗಿ ತುಂಬಾ ಶ್ರಮಿಸುತ್ತಿದ್ದಾರೆ, ಮತ್ತು ಅವರು ಬಹಳ ಭೌತಿಕವಾದಿಗಳಾಗಿದ್ದಾರೆ.
ಪ್ರಭುಪಾದ: ಅದು ವಿಶ್ವದ ಪೂರ್ವ ಭಾಗದಲ್ಲಿ ಎಲ್ಲೆಡೆ ಇದೆ. ಅವರು ಹಣದ ಹಿಂದೆ ಬಿದ್ದಿರುವರು.
ದಯಾನಂದ: ಮತ್ತು ಇಲ್ಲಿಗೆ ಬರುವ ವಿದೇಶಿಯರು ಸಹ ಭೌತಿಕವಾದಿಗಳು.
ಪ್ರಭುಪಾದ: ಎಲ್ಲೆಡೆ ಭೌತಿಕವಾದ. ಮನುಷ್ಯಾಣಾಂ ಸಹಸ್ರೇಷು ಕಸ್ಚಿದ್ ಯತತಿ ಸಿದ್ಧಯೇ (ಭ.ಗೀ 7.3). ಆಧ್ಯಾತ್ಮಿಕ ಎಂದರೆ ಸಿದ್ಧಿ, ಪರಿಪೂರ್ಣತೆ. ಪರಿಪೂರ್ಣತೆ ಯಾರಿಗೆ ಬೇಕಾಗಿದೆ? ಹಣವನ್ನು ತಂದು ಆನಂದಿಸಿ. ಅಷ್ಟೇ. ಯಾರಿಗೆ ಬೇಕಾಗಿದೆ? ಪರಿಪೂರ್ಣತೆ ಏನು ಎಂದು ಅವರಿಗೆ ತಿಳಿದಿಲ್ಲ. ಹಣವನ್ನು ಪಡೆಯಬೇಕು, ಸಾಧ್ಯವಾದಷ್ಟು ಆರಾಮವಾಗಿ ಬದುಕಬೇಕು, ಹಾಗು ಸಾವಿನ ನಂತರ ಎಲ್ಲವೂ ಮುಗಿದು ಹೋಗುತ್ತದೆ ಎಂದು ಅವರು ಭಾವಿಸುತ್ತಾರೆ. ಅಲ್ಲವೇ?
ಆತ್ರೇಯ ರಿಷಿ: ಹೌದು, ಶ್ರೀಲ ಪ್ರಭುಪಾದ.
ಪ್ರಭುಪಾದ: ಇದು ತತ್ವ. ಸಾವಿನ ನಂತರ ಜೀವನವಿದೆ, ಉತ್ತಮ ಜೀವನ, ಉತ್ತಮ ಗ್ರಹ, ಉತ್ತಮ ಜಗತ್ತು ಇದೆ ಎಂದು ತಿಳಿಯಲು ಯಾರಿಗೆ ಕಾಳಜಿಯಿದೆ? ಇದು ಕಂಡಿತವಾಗಿಯೂ ಒಳ್ಳೆಯದಲ್ಲ; ಇದು ದುಃಖಗಳಿಂದ ತುಂಬಿದೆ. ಅವರು ದಿನವಿಡೀ, ಕಾರು ಓಡಿಸುತ್ತಿದ್ದಾರೆ, ಆದರೆ ಇದು ಬೇಸರದ ಸಂಗತಿಯೆಂದು ಅವರು ಭಾವಿಸುವುದಿಲ್ಲ. ಅದು ಸಂತೋಷ ಎಂದು ಅವರು ಭಾವಿಸುತ್ತಾರೆ.