KN/760707 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬಾಲ್ಟಿಮೋರ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
ಪ್ರಭುಪಾದ: ನೀವು ನಿಜವಾಗಿ ವಿಜ್ಞಾನಿಗಳಾಗಿದ್ದರೆ, ದೇವರು ಇದ್ದಾನೆ ಎಂದು ಸಾಬೀತುಪಡಿಸಿ. ಅದು ನಿಮ್ಮ ಶಿಕ್ಷಣದ ಯಶಸ್ಸು. ಇದಂ ಹಿ ಪುಂಸಸ್ ತಪಸಃ ಶ್ರುತಸ್ಯ ವಾ ಸೂಕ್ತಸ್ಯ ಸ್ವಿಷ್ಟಸ್ಯ ಚ ಬುದ್ಧಿ-ದತ್ತಯೋಃ ಅವಿಚ್ಯುತೋ ಅರ್ಥಃ ಕವಿ (ಶ್ರೀ.ಭಾ 1.5.22). ನಿಮ್ಮ ಶಿಕ್ಷಣದಿಂದ, ನಿಮ್ಮ ವೈಜ್ಞಾನಿಕ ಅರಿವಿನಿಂದ, ದೇವರು ಇದ್ದಾನೆ ಎಂದು ನೀವು ಸಾಬೀತುಪಡಿಸಿರಿ… ಅವನು ಅಷ್ಟು ಕೀರತಿಸಲ್ಪಡುವವನು... ಆಗ ನಿಮ್ಮ ಶಿಕ್ಷಣಕ್ಕೆ ಅರ್ಥ ದೊರಕುತ್ತದೆ. ಆಗ ಒಪ್ಪಿಕೊಳ್ಳಬಹುದು. ಆಗ ನೀವು ನಿಜವಾಗಿಯೂ ವಿಜ್ಞಾನಿಗಳು. ಹಾಗಲ್ಲದೆ ನೀವು ದೂರ್ತರಾಗಿ, “ಓಹ್, ದೇವರ ಅಗತ್ಯವಿಲ್ಲ. ನಾವು ತಯಾರಿಸಲು ಹೊರಟಿದ್ದೇವೆ. ಕೇವಲ ದಶಲಕ್ಷ ವರ್ಷಗಳವರೆಗೆ ಕಾಯಿರಿ, ನಂತರ...' ಇದು ಒಳ್ಳೆಯ ಪ್ರಸ್ತಾಪವೇ? ನಿಮ್ಮ ವೈಜ್ಞಾನಿಕ ಸಂಶೋಧನಾ ಕಾರ್ಯವನ್ನು ನೋಡಲು ನಾನು ದಶಲಕ್ಷ ವರ್ಷಗಳವರೆಗೆ ಕಾಯಬೇಕೇ? ಇಂತ ಮೂರ್ಖರು ಅಭಿವೃದ್ಧಿ ಹೊಂದಲು ನಾವು ಅನುಮತಿಸೋಣವೇ? ಅದು ಸಾಧ್ಯವಿಲ್ಲ.
ರೂಪಾನುಗ: ನಾವು ಇದನ್ನು ತಡೆಯಲು ಸಾಧ್ಯವಾದರೆ, ಅದು ಸಾಮಾನ್ಯ ಜನರಿಗೆ ಬಹಳ ದೊಡ್ಡ ಸೇವೆ ಮಾಡಿದಂತೆ.
ಪ್ರಭುಪಾದ: 'ಇಲ್ಲಿ ಕಳ್ಳರು ಇದ್ದಾರೆ. ನಿಮ್ಮ ಜೇಬಿನ ಕಡೆ ಜಾಗರೂಕರಾಗಿರಿ. ಅವರು ಸುಳ್ಳು ನುಡಿದು ನಿಮ್ಮ ಜೇಬಿನಿಂದ ಹಣವನ್ನು ಕಸಿದುಕೊಳ್ಳುತ್ತಾರೆ', ಎಂದು ಎಚ್ಚರಿಸಿ.
760707 - ಸಂಭಾಷಣೆ B - ಬಾಲ್ಟಿಮೋರ್