KN/Prabhupada 0009 - ಕಳ್ಳ ಭಕ್ತನಾದದ್ದು



Lecture on SB 1.2.12 -- Los Angeles, August 15, 1972

ಕೃಷ್ಣನು ಭಗವದ್ಗಿತೆಯಲ್ಲಿ ಹೇಳುತ್ತನೆ (ಭ ಗಿ ೭.೨೫) ನಾಹಂ ಪ್ರಕಾಶಃ ಸರ್ವಸ್ಯ ಯೋಗ-ಮಾಯಾ-ಸಮಾವರ್ತಃ "ನಾನು ಯಾರಿಗೂ ಕಾಣಿಸುವುದ್ದಿಲ್ಲ. ಯೋಗಮಾಯ, ಯೋಗಮಾಯ ಆವರಿಸಿದೆ" ಆದರಿಂದ ನೀವು ದೇವರನ್ನು ಹೇಗೆ ಕಾಣಬಹುದು? ಆದರೆ ಈ ಅಯೋಗ್ಯತನ ನಡೆಯುತ್ತಾ ಇರುತ್ತದೆ ಅದು " ನೀವು ನನಗೆ ದೇವರನ್ನು ತೊರಿಸುತ್ತಿರಾ? ನೀವು ದೇವರನ್ನು ನೋಡಿದ್ದಿರಾ?" ದೇವರು ಕೇವಲ ಒಂದು ಆಟದ ವಸ್ತುವಾಗಿದ್ದಾನೆ. "ದೇವರು ಇಲ್ಲಿದ್ದಾನೆ. ಇವನು ದೇವರ ಅವತಾರ." [ಭ ಗೀ ೭.೧೫] ನ ಮಾಮ್ ದುಷ್ಕೃತಿನೊ ಮೂಢಾಃ ಪ್ರಪದ್ಯಂತೆ ನರಾಧಮಃ ಅವರು ಪಾಪತ್ಮರು, ಅಯೋಗ್ಯರು, ಮೂಢರು, ಕೀಳ ಮಟ್ಟದ ಮನುಕುಲುದವರು. ಅವರು ಹೀಗೆ ಕೇಳುತ್ತಾರೆ: "ನೀವು ನನಗೆ ದೇವರನ್ನು ತೊರಿಸುತ್ತಿರಾ?" ನೀವು ಏನು ಅರ್ಹತೆ ಗಳಿಸಿದ್ದಿರಾ, ಅದರಿಂದ ನೀವು ದೇವರನು ಕಾಣಲು? ಇಲ್ಲಿದೆ ಅದಕ್ಕೆ ಅರ್ಹತೆ. ಏನದು? ತಕ್ ಶ್ರದ್ದಧಾನಾ ಮುನಯಃ ಅವರು ಎಲ್ಲದಕ್ಕಿಂತ ಮೊದಲು ನಿಷ್ಠಾವಂತರಾಗಿರ ಬೇಕು. ನಿಷ್ಠಾವಂತ. ಶ್ರದ್ದಧಾನಾಃ ಅವನು ದೇವರನ್ನು ನೋಡಲು ಬಹಳ ಕಾತುರನಾಗಿರ ಬೇಕು, ವಾಸ್ತವವಾಗಿ. ಅದು ಒಂದು ಪ್ರವೃತ್ತಿ, ನಿಷ್ಪ್ರಯೋಜಕ ವಿಷಯದ ರೀತಿ ಅಲ್ಲ, "ನೀವು ನನಗೆ ದೇವರನ್ನು ತೋರಿಸುತ್ತಿರಾ?" ಎಂದು ಮಂತ್ರವಿದ್ಯೆ, ಹೇಗೆ ದೇವರು ಮಂತ್ರವಿದ್ಯೆಯೊ ಹಾಗೆ ಇಲ್ಲ. ಅವನು ಗಂಭೀರ ಪ್ರಯತ್ನ ಮಾಡಬೇಕು: ಹೌದು, ದೇವರು ಇದ್ದರೆ..... ನಾವು ನೋಡಿದ್ದೆವೆ, ನಮ್ಮಗೆ ದೇವರ ಬಗ್ಗೆ ಮಾಹಿತಿ ಇದೆ. ಆದರಿಂದ ನಾನು ನೋಡಬೇಕು." ಈ ಸಂಬಂಧವಾಗಿ ಒಂದು ಕಥೆ ಇದೆ. ಇದು ಬಹಳ ಬೋಧಪ್ರದವಾಗಿದೆ; ಕೇಳಲು ಪ್ರಯತ್ನಿಸಿ. ಒಬ್ಬ ವೃತ್ತಿಪರ ವಾಚಕ, ಭಾಗವತ ಬಗ್ಗೆ ಪ್ರವಚನ ಮಾಡುತ್ತಿದ್ದರು, ಮತ್ತು ಅವರು ಕೃಷ್ಣನ ವಿವರಿಸುತಾ ಹೀಗೆ ಹೇಳಿದರು, ಅತ್ಯಂತ ಹೆಚ್ಚಾಗಿ ಎಲ್ಲಾ ಆಭರಣಗಳಿಂದ ಅಲಂಕರಿಸಿದ್ದರು, ಎಂದು, ಅವನನ್ನು ಹಸುಗಳನ್ನು ಮೇಯಿಸಲು ಕಾಡಿಗೆ ಕಳುಹಿಸಿದರು. ಆ ಸಭೆಯಲ್ಲಿ ಒಬ್ಬ ಕಳ್ಳ ಇದ್ದ. ಆಗ ಅವನು ಯೋಚಿಸಿದ ಏನೆಂದರೆ "ಏಕೆ ನಾನು ವೃಂದಾವನಕ್ಕೆ ಹೋಗಿ ಆ ಹುಡುಗನ ಲೂಟಿ ಮಾಡಬಾರದು? ಎಂದು ಅವನು ಅನೇಕ ಬೆಲೆಬಾಳುವ ಒಡವೆಗಳೊಂದಿಗೆ ಅರಣ್ಯದಲ್ಲಿದ್ದಾನೆ. ನಾನು ಅಲ್ಲಿಗೆ ಹೋಗಿ ಮತ್ತು ಆ ಹುಡುಗನ ಹಿಡಿದುಕೊಂಡು ಮತ್ತು ಅವನ ಎಲ್ಲ ಆಭರಣಗಳನ್ನು ತೆಗೆದುಕೊಳ್ಳುವೆ." ಇದು ಅವನ ಒದ್ದೇಶವಾಗಿತ್ತು. ಆದ್ದರಿಂದ, ಅವನು ಬಹಳ ಗಂಭೀರವಾಗಿ "ನಾನು ಆ ಹುಡುಗನ್ನನು ಹುಡುಕಬೇಕು. ಎಂದು ಆಗ ನಾನು ಒಂದೇ ರಾತ್ರಿಯಲ್ಲಿ ಕೋಟ್ಯದಿಪತಿ ಆಗುತ್ತೆನೆ. ಏಷ್ಟೊಂದು ಆಭರಣಗಳು. ಇಲ್ಲ." ಆದ್ದರಿಂದ ಅವನು ಅಲ್ಲಿಗೆ ಹೋದ, ಆದರೆ ಅವನ ಅರ್ಹತೆ ಏನೆಂದರೆ "ನಾನು ಕೃಷ್ಣನನ್ನು ನೋಡಬೇಕು, ಎಂದು ನಾನು ಕೃಷ್ಣನನ್ನು ನೋಡಬೇಕು." ಆ ಆತಂಕ, ಆ ತವಕದಿಂದ, ಅವನಿಗೆ ವೃಂದಾವನದಲ್ಲಿ ಕೃಷ್ಣನ ನೋಡಲು ಸಾಧ್ಯವಾಯಿತು. ಭಗವತ ಪ್ರವಚಕರು ನೀಡಿದ ಮಾಹಿತಿ ಪ್ರಕಾರ ಅವನು ಕೃಷ್ಣನನ್ನು ನೋಡದ ಆಮೇಲೆ ಅವನು ನೋಡಿದ, " ನೀನು ಎಷ್ಟು ಒಳ್ಳೆಯ ಹುಡುಗ, ಕೃಷ್ಣ." ಆಗ ಅವನು ಹೊಗಳಲು ಶುರುಮಾಡಿದ. ಅವನು ಹೀಗೆ ಯೋಚಿಸಿದ " ಹೊಗಳುವರಿಂದ, ನಾನು ಎಲ್ಲ ಆಭರಣಗಳನ್ನು ತೆಗೆದುಕೊಳ್ಳುವೆ". ಆದ್ದರಿಂದ ಅವನು, ತನ್ನ ನಿಜವಾದ ವ್ಯಾಪಾರ ಪ್ರಸ್ತಾಪಿಸಿದಾಗ "ಆದ್ದರಿಂದ ನಾನು ನಿನ್ನ ಈ ಆಭರಣಗಲ್ಲನ್ನು ತೆಗೆದುಕೊಳ್ಳಲಾ? ನೀನು ಬಹಳ ಶ್ರೀಮಂತ." "ಇಲ್ಲ, ಇಲ್ಲ, ಇಲ್ಲ. ನೀನು..... ನನ್ನ ತಾಯಿ ಕೋಪಗೊಳ್ಳುತ್ತಾಳೆ. ನಾನು ಕೊಡಲಾರೆ...." ಕೃಷ್ಣ ಮಗುವಿನಂತೆ ಆಗ ಅವನು ಕೃಷ್ಣನ ಪಡೆಯಲು ತುಂಬಾ ತುಂಬಾ ಕಾತುರನಾದ. ಮತ್ತು ಆ ವೇಳೆಗೆ..... ಕೃಷ್ಣನ ಸಂಘದಿಂದ, ಅವನು ಈಗಾಗಲೇ ಶುದ್ಧೀಕರಿಸಲಾಗಿದ್ದ. ಆಗ ಕೊನೆಯಲ್ಲಿ, ಕೃಷ್ಣನು ಹೇಳಿದ, " ಆಯಿತು, ನೀನು ತೆಗೆದುಕೊಳ್ಳ ಬಹುದು." ಆಗ ಅವನು ಭಕ್ತನಾದ, ಆ ತಕ್ಷಣವೆ. ಕೃಷ್ಣನ ಸಂಘದ ಕಾರಣವಾಗಿ.... ಆದ್ದರಿಂದ ಒಂದಲ್ಲಾ ಒಂದು ರೀತಿಯಲ್ಲಿ, ನಾವು ಕೃಷ್ಣನ ಸಂಪರ್ಕದಲ್ಲಿ ಬರಬೇಕು. ಒಂದಲ್ಲಾ ಒಂದು ರೀತಿ. ಆಗ ನಾವು ಶುದ್ಧರಾಗುತ್ತೆವೆ.