KN/Prabhupada 0048 - ಅರ್ಯ ನಾಗರಿಕತೆ



Lecture on BG 2.2-6 -- Ahmedabad, December 11, 1972

ಅನಾರ್ಯ – ಜುಷ್ಟಮ್, ಬದುಕಿನ ಪ್ರಗತಿಪರ ಮೌಲ್ಯಗಳನ್ನು ತಿಳಿದ ಮನುಷ್ಯನಿಗೆ ಈ ಕಶ್ಮಲವು ಭೂಷಣವಲ್ಲ. ಆರ್ಯನ್. ಆರ್ಯನ್ ಅಂದರೆ ಪ್ರಗತಿಪರರು. ಆದ್ದರಿಂದ, ರಣರಂಗದಲ್ಲಿ ಅರ್ಜುನನ ವಿಷಣ್ಣತೆಯನ್ನು ಅನಾರ್ಯನಿಗೆ ಅನುರೂಪವೆಂದು ವಿವರಿಸಲಾಗಿದೆ. ಆರ್ಯನ್, ಭಗವದ್ಗೀತೆಯಲ್ಲಿ ವಿವರಿಸಿರುವ ಆರ್ಯನ್ ನಾಗರಿಕತೆಯ ಪ್ರಕಾರ ದೇವೋತ್ತಮ ಪರಮಪುರುಷನು ಪ್ರಾರಂಭಿಸಿದ ನಾಲ್ಕು ವಿಭಜನೆಗಳಿವೆ. ನಾನು ಮೊದಲೆ ವಿವರಿಸಿದ ಹಾಗೆ, ‘ಧರ್ಮಮ್ ತು ಸಾಕ್ಷಾದ್ ಭಗವತ್ ಪ್ರಣೀತಮ್’ (ಶ್ರೀ.ಭಾ 6.2.19). ಯಾವುದೇ ವ್ಯವಸ್ಥಿತ ಧಾರ್ಮಿಕ ಪ್ರಕ್ರಿಯೆಯನ್ನು ಹೀಗೆ ಅರ್ಥಮಾಡಿಕೊಳ್ಳಬೇಕು: "ಇದು ಭಗವಂತನು ನೀಡಿರುವುದು." ಮನುಷ್ಯನು ಯಾವುದೇ ಧಾರ್ಮಿಕ ವ್ಯವಸ್ಥೆಯನ್ನು ಸೃಷ್ಟಿಸಲಾಗುವುದಿಲ್ಲ. ಆದ್ದರಿಂದ, ಈ ಆರ್ಯ ವ್ಯವಸ್ಥೆ, ಪ್ರಗತಿಪರ ವ್ಯವಸ್ಥೆಯು, ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮ ವಿಭಾಗಶಃ (ಭ.ಗೀ 4.13). ಕೃಷ್ಣನು ಹೇಳುತ್ತಾನೆ, “ಸಾಮಾಜಿಕ ವ್ಯವಸ್ಥೆಯ ಉತ್ತಮ ನಿರ್ವಹಣೆಗಾಗಿ ನಾನೇ ಇದನ್ನು ಪ್ರಾರಂಭಿಸಿರುವೆ”. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ. ಅರ್ಜುನನ್ನು ಕ್ಷತ್ರಿಯ ಪರಿವಾರಕ್ಕೆ ಸೇರಿದವನು. ಆದ್ದರಿಂದ, ರಣರಂಗದಲ್ಲಿ ಯುದ್ಧಮಾಡಲು ಆತನು ಹಿಂಜರಿಯುವುದು ಆರ್ಯನಾದವನಿಗೆ ಅನುರೂಪವಲ್ಲ. ರಾಜವಂಶದವರು ಅಹಿಂಸಾವಾದಿಗಳಾಗುವುದು ಒಳ್ಳೆಯದಲ್ಲ. ಕ್ಷತ್ರಿಯರು ರಣರಂಗದಲ್ಲಿ ಹೋರಾಡುತ್ತಿರುವಾಗ ಕೊಲ್ಲುವುದು ಅವರಿಗೆ ಪಾಪವಲ್ಲ. ಅಂತೆಯೇ ಒಬ್ಬ ಬ್ರಾಹ್ಮಣ ಯಜ್ಞಮಾಡುವಾಗ ಕೆಲವೊಮ್ಮೆ ಪ್ರಾಣಿಗಳನ್ನು ಬಲಿಕೊಡಲಾಗುತ್ತದೆ. ಆದರೆ ಅದರ ಅರ್ಥ ಅವನು ಪಾಪಮಾಡುತ್ತಿದ್ದಾನೆ ಅಂತಲ್ಲ. ಪ್ರಾಣಿಬಲಿ ಕೊಡುವುದು ಅದನ್ನು ತಿನ್ನುವುದಕ್ಕಲ್ಲ. ವೈದಿಕ ಮಂತ್ರವನ್ನು ಪರೀಕ್ಷಿಸುವುದಕ್ಕೆ. ಯಜ್ಞದಲ್ಲಿ ತೊಡಗಿರುವ ಬ್ರಾಹ್ಮಣರು ವೈದಿಕ ಮಂತ್ರವನ್ನು ಸರಿಯಾದ ರೀತಿಯಲ್ಲಿ ಜಪಿಸುತ್ತಿದ್ದಾರೆಯೇ ಎಂಬುದನ್ನು ಒಂದು ಪ್ರಾಣಿಯನ್ನು ಬಲಿಕೊಟ್ಟು ಮತ್ತೆ ಅದಕ್ಕೆ ಹೊಸ ಯುವ ಜೀವನವನ್ನು ನೀಡಿ ಪರೀಕ್ಷಿಸುತ್ತಿದ್ದರು. ಅದೇ ಪ್ರಾಣಿಬಲಿಯೆಂದರೆ. ಕೆಲವೊಮ್ಮೆ ಕುದುರೆಯನ್ನು, ಕೆಲವೊಮ್ಮೆ ಹಸುವನ್ನು ಬಲಿಕೊಡುತ್ತಿದ್ದರು. ಆದರೆ ಈ ಯುಗ, ಅಂದರೆ ಕಲಿಯುಗದಲ್ಲಿ, ಇವು ನಿಷೇದಿಸಲಾಗಿದೆ ಏಕೆಂದರೆ ಈಗ ಅಂತಹ ಯಾಜ್ಞಿಕ-ಬ್ರಾಹ್ಮಣರಿಲ್ಲ. ಈ ಯುಗದಲ್ಲಿ ಎಲ್ಲಾ ರೀತಿಯ ಯಜ್ಞಗಳನ್ನು ನಿಷೇದಿಸಲಾಗಿದೆ.

ಅಶ್ವಮೇದಂ ಗವಾಲಂಭಂ
ಸಂನ್ಯಾಸಂ ಪಲ-ಪೈತೃಕಂ
ದೇವರೇಣ ಸುತೋತ್ಪತಿಂ
ಕಲೌ ಪಂಚ ವಿವರ್ಜಯೇತ್
(ಚೈ.ಚ ಆದಿ 17.164)

ಅಶ್ವಮೇದ ಯಜ್ಞ, ಗೋಮೇದ ಯಜ್ಞ, ಸಂನ್ಯಾಸ, ಹಾಗು ‘ದೇವರ’, ಅಂದರೆ ಗಂಡನ ತಮ್ಮನ ಮೂಲಕ ಸಂತಾನ ಪಡೆಯುವುದು, ಈ ಎಲ್ಲವೂ ಕಲಿಯುಗದಲ್ಲಿ ನಿಷೇದಿಸಲಾಗಿದೆ.