KN/Prabhupada 0049 - ನಾವು ಪ್ರಕೃತಿಯ ನಿಯಮಗಳಿಂದ ಬಂದಿಯಾಗಿದ್ದೇವೆ



Arrival Talk -- Aligarh, October 9, 1976

ಆದ್ದರಿಂದ ಈ ಸಂಕೀರ್ತನೆ ವೈಭವಯುತ. ಅದುವೇ ಶ್ರೀ ಚೈತನ್ಯ ಮಾಹಾಪ್ರಭುಗಳ ಆಶೀರ್ವಾದ. ಪರಮ್ ವಿಜಯತೇ ಶ್ರೀ ಕೃಷ್ಣ ಸಂಕೀರ್ತನಂ. ಇದುವೆ ಅವನ ಆಶೀರ್ವಾದ - ಈ ಯುಗದಲ್ಲಿ ಕೇವಲ ಸಂಕೀರ್ತನೆಯಿಂದ. ವೈದಿಕ ಸಾಹಿತ್ಯಗಳಲ್ಲಿ, ವೇದಾಂತ ಸೂತ್ರಗಳಲ್ಲಿ ಇದು ದೃಢಪಡಿಸಲಾಗಿದೆ. ಶಬ್ದಾದ್ ಅನಾವೃತ್ತಿ. ಅನಾವೃತ್ತಿ ಅಂದರೆ ಮುಕ್ತಿ. ಬಂಧನವೆ ನಮ್ಮ ಈಗಿನ ಸ್ಥಿತಿ. ನಾವು ಪ್ರಕೃತಿಯ ನಿಯಮಗಳಿಂದ ಬಂದಿಯಾಗಿದ್ದೇವೆ. ನಾವು ಅವಿವೇಕದಿಂದ ಸ್ವತಂತ್ರ ಎಂದು ಘೋಷಿಸಬಹುದು – ಅದು ನಮ್ಮ ಅವಿವೇಕ - ಆದರೆ ವಾಸ್ತವಿಕವಾಗಿ ನಾವು ಪ್ರಕೃತಿಯ ನಿಯಮಗಳಿಂದ ಬಂದಿಯಾಗಿದ್ದೇವೆ.

ಪ್ರಕೃತೇಃ ಕ್ರಿಯಮಾಣಾನಿ
ಗುಣೈಃ ಕರ್ಮಾಣಿ ಸರ್ವಶಃ
ಅಹಂಕಾರ ವಿಮೂಢಾತ್ಮಾ
ಕರ್ತಾಹಮ್…
(ಭ.ಗೀ 3.27)

ನಾವು ಪ್ರಕೃತಿಯ ನಿಯಮಗಳಿಂದ ಬಂದಿಯಾಗಿದ್ದೇವೆ, ಆದರೆ ಯಾರು ಮೂಢನೊ, ವಿಮೂಢಾತ್ಮಾ, ಸುಳ್ಳು ಪ್ರತಿಷ್ಠೆಯಿಂದ ಅಂತವನು ತಾನು ಸ್ವತಂತ್ರನೆಂದು ಭಾವಿಸುತ್ತಾನೆ. ಅಲ್ಲ. ಅದು ನಿಜವಲ್ಲ. ಇದು ನಮ್ಮ ಅಪಗ್ರಹಿಕೆ. ಈ ಅಪಗ್ರಹಿಕೆಯನ್ನು ಸರಿಮಾಡಬೇಕು. ಅದುವೇ ಜೀವನದ ಗುರಿ. ಆದ್ದರಿಂದ ಶ್ರೀ ಚೈತನ್ಯ ಮಹಾಪ್ರಭುಗಳು ಏನು ಶಿಫಾರಸು ಮಾಡುತ್ತಾರೆಂದರೆ ನೀವು ಹರೇ ಕೃಷ್ಣ ಮಹಾಮಂತ್ರವನ್ನು ಜಪಿಸಿದರೆ ಚೇತೋ-ದರ್ಪಣ-ಮಾರ್ಜನಂ (ಚೈ.ಚ ಅಂತ್ಯ 20.12) ನಮ್ಮ ಹಿತದ ಮೊದಲನೆಯ ಕಂತಾಗುತ್ತದೆ. ಏಕೆಂದರೆ ಅಪಗ್ರಹಿಕೆ ಹೃದಯದಲ್ಲಿದೆ. ಹೃದಯವು ನಿರ್ಮಲವಾಗಿದ್ದರೆ, ಪ್ರಜ್ಞೆಯು ನಿರ್ಮಲವಾಗಿದ್ದರೆ, ಅಗ ಅಪಗ್ರಹಿಕೆಯಿರುವುದ್ದಿಲ್ಲ. ಆದ್ದರಿಂದ ಈ ಪ್ರಜ್ಞೆಯನ್ನು ಸ್ವಚ್ಛಗೊಳಿಸಬೇಕು. ಅದುವೇ ಹರೇ ಕೃಷ್ಣ ಜಪದ ಪರಿಣಾಮದ ಮೊದಲನೆಯ ಕಂತು. ಕೀರ್ತನಾದ್ ಏವ ಕೃಷ್ಣಸ್ಯ ಮುಕ್ತ ಸಂಘ: ಪರಮ್ ವ್ರಜೇತ್ (ಶ್ರೀ.ಭಾ 12.3.51). ಕೇವಲ ಕೃಷ್ಣನ, ಕೃಷ್ಣಸ್ಯ, ಕೃಷ್ಣನ ಪಾವನ ನಾಮ, ಹರೇ ಕೃಷ್ಣ ಜಪಿಸುತ್ತ… ಹರೇ ಕೃಷ್ಣ, ಹರೇ ರಾಮ, ಅವು ಒಂದೆ. ರಾಮ ಹಾಗು ಕೃಷ್ಣ ಬೇರೆಯಲ್ಲ. ರಾಮಾದಿ ಮೂರ್ತಿಶು ಕಾಲ ನಿಯಮೇನ ತಿಷ್ಟನ್ (ಬ್ರಹ್ಮ ಸಂಹಿತ 5.39) ಇದು ಬೇಕಾಗಿದೆ. ಈಗಿನ ಸ್ಥಿತಿಯು ಒಂದು ಅಪಗ್ರಹಿಕೆ, “ನಾನು ಈ ಐಹಿಕ ಪ್ರಕೃತಿಯ ಉತ್ಪತ್ತಿ, ನಾನು ಈ ದೇಹ” ಎಂದು. “ನಾನು ಒಬ್ಬ ಭಾರತೀಯ”, “ನಾನು ಅಮೇರಿಕನ್”, “ನಾನು ಬ್ರಾಹ್ಮಣ”, “ನಾನು ಕ್ಷತ್ರಿಯ,” ಹೀಗೆ ಒಂದು ಮತ್ತೊಂದು, ಮತ್ತೊಂದು… ಹಲವಾರು ಪದನಾಮಗಳು. ನಾವು ಅದರಲ್ಲಿ ಯಾವುದೂ ಅಲ್ಲ. ಇದುವೆ ಸ್ವಚತೆ. ಚೇತೋ ದರ್ಪಣ. ನೀನು ಸ್ಪಷ್ಠವಾಗಿ ಅರ್ಥಮಾಡಿಕೊಂಡಾಗ, “ನಾನು ಭಾರತೀಯನಲ್ಲ, ನಾನು ಅಮೇರಿಕನ್ ಅಲ್ಲ, ನಾನು ಬ್ರಾಹ್ಮಣನಲ್ಲ, ನಾನು ಕ್ಷತ್ರಿಯನಲ್ಲ”, - ಅಂದರೆ “ನಾನು ಈ ದೇಹವಲ್ಲ” - ಆಗ ಪ್ರಜ್ಞೆಯು ‘ಅಹಮ್ ಬ್ರಹ್ಮಾಸ್ಮಿ’ ಆಗುತ್ತದೆ. ಬ್ರಹ್ಮ-ಭೂತಃ ಪ್ರಸನಾತ್ಮ ನ ಶೋಚತಿ ನ ಕಾಂಕ್ಷತಿ (ಭ.ಗೀ 18.54). ಇದುವೇ ಬೇಕಾಗಿರುವುದು. ಇದುವೇ ಜೀವನದ ಸಫಲತೆ.