KN/Prabhupada 0069 - ನಾನು ಮೃತನಾಗುವುದಿಲ್ಲ
ಕೀರ್ತನಾನಂದ: ನೀವು ಅನಾರೋಗ್ಯದಿಂದಿದ್ದರೆ ನಾವು ಸಂತೋಷವಾಗಿರಲಾಗುವುದಿಲ್ಲ.
ಪ್ರಭುಪಾದ: ನಾನು ಯಾವಾಗಲೂ ಆರೋಗ್ಯವಾಗಿದ್ದೇನೆ.
ಕೀರ್ತನಾನಂದ: ನಿಮ್ಮ ವೃದ್ಧಾಪ್ಯವನ್ನು ನಮ್ಮಗೇಕೆ ಕೊಡಬಾರದು?
ಪ್ರಭುಪಾದ: ಕಾರ್ಯಗಳು ಸರಿಯಾಗಿ ನಡೆಯುತ್ತಿರುವುದನ್ನು ನೋಡುತ್ತಿದ್ದರೆ ನನಗೆ ಖುಷಿಯಾಗುತ್ತದೆ. ಏನಿದು ದೇಹದ ಬಗ್ಗೆ? ದೇಹವು ಬರಿ ದೇಹವಷ್ಟೆ. ನಾವು ದೇಹವಲ್ಲ.
ಕೀರ್ತನಾನಂದ: ತಂದೆಗೆ ತನ್ನ ಯೌವನವನ್ನೆ ದಾನಕೊಟ್ಟವನ್ನು ಪುರುದಾಸ ತಾನೆ?
ಪ್ರಭುಪಾದ: ಮ್?
ರಾಮೇಶ್ವರ: ಯಯಾತಿ. ರಾಜ ಯಯಾತಿ ತನ್ನ ಮುಪ್ಪಿಗೆ ವಿನಿಮಯಮಾಡಿದ್ದು.
ಕೀರ್ತನಾನಂದ: ತನ್ನ ಮಗನೊಂದಿಗೆ. ನೀವೂ ಮಾಡಬಹುದು.
ಪ್ರಭುಪಾದ: (ನಗುತ) ಯಾರು ಮಾಡಿದರು?
ರಾಮೇಶ್ವರ: ರಾಜ ಯಯಾತಿ.
ಪ್ರಭುಪಾದ: ಹಾ. ಯಯಾತಿ. ಇಲ್ಲ, ಏಕೆ? ನೀವೆ ನನ್ನ ದೇಹ. ನೀವು ಜೀವನ ಮುನ್ನಡೆಸಿ. ವ್ಯತ್ಯಾಸವೇನು ಇಲ್ಲ. ನಾನು ಕಾರ್ಯನಿರ್ವಹಿಸುತಿರುವ ಹಾಗೆ, ಆಗ ನನ್ನ ಗುರು ಮಹರಾಜರಿದ್ದಾರೆ, ಭಕ್ತಿ ಸಿದ್ಧಾಂತಸರಸ್ವತಿ. ಶಾರೀರಿಕವಾಗಿ ಇಲ್ಲದೆ ಇರಬಹುದು. ಆದರೆ ಪ್ರತಿ ಕಾರ್ಯದಲ್ಲು ಇದ್ದಾರೆ. ನಾನು ಅದನ್ನು ಬರೆದಿದ್ದೇನೆ ಎಂದು ನನೆಪು.
ತಮಾಲ ಕೃಷ್ಣ: ಹೌದು ಭಾಗವತದಲ್ಲಿ, “ಯಾರು ಅವನ ಜೊತೆ ಬಾಳುತ್ತಾರೋ, ಅವನು ಚಿರಕಾಲ ಬಾಳುತ್ತಾನೆ. ಯಾರು ಅವನ ವಾಣಿಯನ್ನು ಸ್ಮರಿಸುತ್ತಾನೋ, ಅವನು ಚಿರಕಾಲ ಬಾಳುತ್ತಾನೆ”, ಎಂದು.
ಪ್ರಭುಪಾದ: ಆದ್ದರಿಂದ ನಾನು ಮೃತನಾಗುವುದಿಲ್ಲ. ಕೀರ್ತಿರ್ ಯಸ್ಯ ಸ ಜೀವತಿ: “ಯಾರು ಗಣನೀಯವಾದ ಕಾರ್ಯಗಳನ್ನು ಮಾಡಿರುವನೋ, ಅವನು ಚಿರಕಾಲ ಬಾಳುತ್ತಾನೆ.” ಅವನು ಮೃತನಾಗುವುದಿಲ್ಲ. ನಮ್ಮ ವಾಸ್ತವಿಕ ಜೀವನದಲ್ಲು… ಇದು ಭೌತಿಕ, ಕರ್ಮಫಲ. ಕರ್ಮಾನುಸಾರವಾಗಿ ಇನ್ನೊಂದು ದೇಹವನ್ನು ಅವನು ಪಡೆಯಬೇಕು. ಆದರೆ ಭಕ್ತನಿಗೆ ಅಂತದ್ದೇನು ಇಲ್ಲ. ಕೃಷ್ಣನ ಸೇವೆಗೆಂದೆ ದೇಹವನ್ನು ಸ್ವೀಕರಿಸುತ್ತಾನೆ. ಆದ್ದರಿಂದ ಕರ್ಮಫಲವಿಲ್ಲ.