KN/Prabhupada 0076 - ಎಲ್ಲೆಡೆ ಕೃಷ್ಣನನ್ನು ಕಾಣು



Ratha-yatra -- San Francisco, June 27, 1971

ನಮ್ಮ ಕಣ್ಣುಗಳನ್ನು ಭಗವಂತನ ಪ್ರೇಮದಿಂದ ಸವರಿದರೆ, ಅವನನ್ನು ಎಲ್ಲೆಡೆ ಕಾಣಬಹುದು. ಇದುವೇ ಶಾಸ್ತ್ರದ ಆದೇಶ. ನಾವು ಅವನನ್ನು ಕಾಣುವ ಶಕ್ತಿಯನ್ನು ದೇವೋತ್ತಮನ ಪ್ರೇಮವನ್ನು ಬೆಳಸಿಕೊಳ್ಳುವ ಮುಖಾಂತರ ವಿಕಸಿಸಿಕೊಳ್ಳಬಹುದು. ಪ್ರೇಮಾಂಜನ-ಚುರಿತ ಭಕ್ತಿ-ವಿಲೋಚನೇನ (ಬ್ರಹ್ಮ ಸಂಹಿತ 5.38). ಒಬ್ಬ ಕೃಷ್ಣ ಪ್ರಜ್ಞೆಯಲ್ಲಿ ಸಾಕಷ್ಟು ವಿಕಸಿತನಾದಾಗ, ಅವನು ಪ್ರಭುವನ್ನು ಪ್ರತಿ ಕ್ಷಣ ತನ್ನ ಮನದಲ್ಲಿ ಹಾಗು ಎಲ್ಲಡೆ, ಎಲ್ಲಿ ಹೋದರೂ ಕಾಣುತ್ತಾನೆ. ಆದರಿಂದ ಈ ಕೃಷ್ನಪ್ರಜ್ಞೆ ಆಂದೋಲನೆ ಭಗವಂತನನ್ನು ಹೇಗೆ ನೋಡುವುದು, ಕೃಷ್ಣನನ್ನು ಹೇಗೆ ನೋಡುವುದು ಎಂದು ಜನರಿಗೆ ಕಲಿಸುವ ಒಂದು ಪ್ರಯತ್ನ. ನಾವು ಅಭ್ಯಾಸ ಮಾಡಿದರೆ ಕೃಷ್ಣನನ್ನು ಕಾಣಬಹುದು. ಕೃಷ್ಣನು ಹೇಳುವ ಹಾಗೆ, “’ರಸೋ ಅಹಂ ಅಪ್ಸು ಕೌಂತೇಯ” (ಭ.ಗೀ 7.8). ಕೃಷ್ಣನು ಹೇಳುತ್ತಾನೆ, “ನಾನೆ ನೀರಿನ ರುಚಿ.” ನಾವು ಪ್ರತಿಯೊಬ್ಬರೂ ನೀರನ್ನು ದಿನ ಕುಡಿಯುತ್ತೇವೆ, ಒಂದು ಬಾರಿ ಮಾತ್ರವಲ್ಲ, ಎರಡು, ಮೂರು ಅಥವ ಇನ್ನು ಜಾಸ್ತಿ. ನಾವು ನೀರು ಕುಡಿಯುತ್ತಿದಂತೆಯೆ ಈ ನೀರಿನ ರುಚಿ ಕೃಷ್ಣನು ಎಂದು ಆಲೋಚಿಸಿದರೆ, ತಕ್ಷಣ ನಾವು ಕೃಷ್ಣ ಪ್ರಜ್ಞಾವಂತರಾಗುತ್ತೇವೆ. ಕೃಷ್ಣ ಪ್ರಜ್ಞಾವಂತರಾಗುವುದು ಬಹಳ ಕಠಿಣದ ಕೆಲಸವೇನಲ್ಲ. ನಾವು ಕೇವಲ ಅಭ್ಯಾಸ ಮಾಡಬೇಕು.

ಇದೇ ರೀತಿ ಕೃಷ್ಣ ಪ್ರಜ್ಞಾವಂತರಾಗಲು ಇನ್ನೊಂದು ಉದಾಹರಣೆಯಿದೆ. ನೀವು ನೀರು ಕುಡಿದಾಗ, ತೃಪ್ತಿಯಾಗುತ್ತಲೆ, ದಾಹ ತೀರುತ್ತಿದಂತೆಯೆ, ತಕ್ಷಣ ನೀವು ದಾಹವನ್ನು ತೀರಿಸುವ ಶಕ್ತಿಯೇ ಕೃಷ್ಣ ಎಂದು ಆಲೋಚಿಸುವಿರಿ. ಪ್ರಭಾಸ್ಮಿ ಶಶಿ ಸೂರ್ಯಯೋಃ. ಕೃಷ್ಣ ಹೇಳುತ್ತಾನೆ, “ನಾನೇ ಸೂರ್ಯ ಪ್ರಕಾಶವು. ನಾನೇ ಚಂದ್ರ ಪ್ರಕಾಶವು.” ಆದರಿಂದ ಎಲ್ಲರು ದಿನದಂದು ಬಿಸಿಲನ್ನು ಕಾಣುತ್ತೇವೆ. ಬಿಸಿಲು ಕಂಡಂತೆಯೇ ತಕ್ಷಣ ಕೃಷ್ಣನನ್ನು ಸ್ಮರಿಸಬಹುದು, “ಕೃಷ್ಣ ಇಲ್ಲಿದ್ದಾನೆ” ಎಂದು. ರಾತ್ರಿ ಚಂದ್ರಪ್ರಕಾಶವನ್ನು ನೋಡುತ್ತಲೇ, ತಕ್ಷಣ ಸ್ಮರಿಸಬಹುದು, “ಕೃಷ್ಣ ಇಲ್ಲಿದ್ದಾನೆ” ಎಂದು. ಈ ರೀತಿ ಅಭ್ಯಾಸ ಮಾಡಲು ಹಲವಾರು ಉದಾಹರಣೆಗಳಿವೆ, ಬಹಳಷ್ಟು ನಿದರ್ಶನಗಳು ಭಗವದ್ಗೀತೆಯ ಏಳನೇಯ ಅಧ್ಯಾಯದಲ್ಲಿ ಕೊಡಲಾಗಿದೆ, ನೀವು ಎಚ್ಚರದಿಂದ ಅಧ್ಯಯನ ಮಾಡಿದರೆ, ಕೃಷ್ಣಪ್ರಜ್ಞೆಯನ್ನು ಹೇಗೆ ಅಭ್ಯಾಸ ಮಾಡಬೇಕೆಂದು ತಿಳಿಯುವಿರಿ. ಆಗ, ಆ ಸಮಯದಲ್ಲಿ, ಕೃಷ್ಣನ ಪ್ರೇಮದಲ್ಲಿ ಪಕ್ವರಾದಾಗ, ನೀವು ಕೃಷ್ಣನನ್ನು ಎಲ್ಲೆಡೆ ಕಾಣುವಿರಿ. ಕೃಷ್ಣನನ್ನು ನೋಡಲು ನಿಮಗೆ ಯಾರ ಸಹಾಯವು ಬೇಕಿಲ್ಲ, ನಿಮ್ಮ ಭಕ್ತಿಯಿಂದ, ನಿಮ್ಮ ಪ್ರೇಮದಿಂದ, ಕೃಷ್ಣನೇ ಕಾಣಿಸಿಕೊಳ್ಳುತ್ತಾನೆ. ಸೇವೋನ್ಮುಖೇ ಹಿ ಜಿಹ್ವಾದೌ ಸ್ವಯಂ ಏವ ಸ್ಫುರತಿ ಅದಃ (ಭಕ್ತಿ ರಸಾಮೃತ ಸಿಂಧು 1.2.234) ಒಬ್ಬನು ಸೇವಾಭಾವದಲ್ಲಿದ್ದಾಗ, ಯಾವಾಗ ಒಬ್ಬನು, “ನಾನು ಕೃಷ್ಣನ, ಅಥವ ಭಗವಂತನ, ಸನಾತನ ಸೇವಕ”, ಎಂದು ಅರಿತುಕೊಳ್ಳುತ್ತಾನೋ, ಆಗ ಕೃಷ್ಣನೇ ಅವನಿಗೆ ಅವನನ್ನು ಕಾಣಲು ಸಹಾಯ ಮಾಡುತ್ತಾನೆ.

ಅದನ್ನು ಭಗವದ್ಗೀತೆಯಲ್ಲಿ ಹೇಳಲಾಗಿದೆ,

ತೇಷಾಮ್ ಸತತ-ಯುಕ್ತಾನಾಮ್
ಭಜತಾಮ್ ಪ್ರೀತಿ-ಪೂರ್ವಕಮ್
ದದಾಮಿ ಬುದ್ಧಿ-ಯೋಗಮ್ ತಮ್
ಯೇನ ಮಾಮ್ ಉಪಯಾಂತಿ ತೇ
(ಭ.ಗೀ 10.10)