KN/Prabhupada 0077 - ನೀವು ವೈಜ್ಞಾನಿಕವಾಗಿ ಹಾಗು ತಾತ್ವಿಕವಾಗಿ ಅಧ್ಯಯನ ಮಾಡಬಹುದು



Ratha-yatra -- San Francisco, June 27, 1971

ಕೃಷ್ಣನು ಹೇಳುತ್ತಾನೆ, ಯಾರು ನಿರಂತರವಾಗಿ, ಇಪತ್ತನಾಲ್ಕು ಗಂಟೆಯು ಕೃಷ್ಣನ ಸೇವೆಯಲ್ಲಿ ತೊಡಗಿರುವನೋ… ಈ ವಿದ್ಯಾರ್ಥಿಗಳು, ಅಂದರೆ ಕೃಷ್ಣ ಪ್ರಜ್ಞೆ ಸಮಾಜದ ಸದಸ್ಯರು, ಇವರು ಇಪತ್ತನಾಲ್ಕು ಗಂಟೆಯು ಕೃಷ್ಣನ ಸೇವೆಯಲ್ಲಿ ತೊಡಗಿರುವುದನ್ನು ನೀವು ನೋಡಬಹುದು. ಇದುವೇ ಕೃಷ್ಣ ಪ್ರಜ್ಞೆಯ ಮಹತ್ವ. ಅವರು ಯಾವಾಗಲು ಕಾರ್ಯನಿರತರಾಗಿರುತ್ತಾರೆ. ಈ ರಥಯಾತ್ರ ಉತ್ಸವ ಅಂತಹ ಒಂದು ಕಾರ್ಯ, ಕನಿಷ್ಟ ಪಕ್ಷ, ಒಂದು ದಿನವಾದರು ನೀವೆಲ್ಲರೂ ಕೃಷ್ಣ ಪ್ರಜ್ಞೆಯಲ್ಲಿ ನಿರತರಾಗಿರಲು. ಇದು ಕೇವಲ ಅಭ್ಯಾಸ ಮಾತ್ರ. ನೀವು ಇದನ್ನು ನಿಮ್ಮ ಜೀವನದಾದ್ಯಂತ ಅಭ್ಯಾಸ ಮಾಡಿದರೆ, ದೇಹತ್ಯಾಗ ಮಾಡುವ ಸಮಯದಲ್ಲಿ, ಅದೃಷ್ಟವಶಾತ್ ಕೃಷ್ಣನನ್ನು ಸ್ಮರಿಸಲಾದರೆ, ಆಗ ನಿಮ್ಮ ಜೀವನ ಸಫಲ. ಆ ಅಭ್ಯಾಸ ಅವಶ್ಯಕ. ಯಮ್ ಯಮ್ ವಾಪಿ ಸ್ಮರನ ಲೋಕೆ ತ್ಯಜತಿ ಅಂತೆ ಕಲೇವರಮ್ (ಭ.ಗೀ 8.6). ನಾವು ಈ ದೇಹವನ್ನು ತ್ಯಾಗ ಮಾಡಲೆಬೇಕು. ಅದು ನಿಶ್ಚಯ. ಆದರೆ ದೇಹತ್ಯಾಗ ಮಾಡುವ ಸಮಯದಲ್ಲಿ, ಕೃಷ್ಣನನ್ನು ಸ್ಮರಿಸಿದರೆ, ತಕ್ಷಣ ನೀನು ಕೃಷ್ಣಧಾಮಕ್ಕೆ ಸಾಗುವೆ. ಕೃಷ್ಣನು ಎಲ್ಲಡೆಯು ಇದ್ದಾನೆ. ಆದರೂ ಕೃಷ್ಣನಿಗೆ ವಿಶೇಷ ಧಾಮವಿದೆ, ಗೋಲೋಕ ವೃಂದಾವನ ಎನ್ನುತ್ತಾರೆ. ನೀನು ಅರ್ಥಮಾಡಿಕೊಳ್ಳಬೇಕಾಗಿರುವುದು ಏನೆಂದರೆ ನಮ್ಮ ದೇಹ, ದೇಹ ಅಂದರೆ ಇಂದ್ರಿಯಗಳು, ಇಂದ್ರಿಯಗಳಿಗಿಂತ ಮೇಲಿದೆ ಮನಸು, ಅದು ಬಹಳ ಸೂಕ್ಷ್ಮ ಹಾಗು ಇಂದ್ರಿಯಗಳನ್ನು ನಿಯಂತ್ರಿಸುತ್ತದೆ, ಹಾಗು ಮನಸಿಗು ಮೇಲಿದೆ ಬುದ್ಧಿ, ಮತ್ತು ಬುದ್ಧಿಗು ಮೇಲಿದೆ ಆತ್ಮ. ನಮಗೆ ಯಾವ ಮಾಹಿತಿಯು ಇಲ್ಲ, ಆದರೆ ಭಕ್ತಿಯೋಗ ಮಾರ್ಗವನ್ನು ಆಚರಿಸಿದರೆ ಕ್ರಮೇಣವಾಗಿ ನಾವು ಯಾರೆಂದು ನಮಗೆ ಅರಿವಾಗುತ್ತದೆ. ನಾನು ಈ ದೇಹವಲ್ಲ. ಸಾಮಾನ್ಯವಾಗಿ ಹೆಸರಾಂತ ವಿದ್ವಾಂಸರು, ದೊಡ್ಡ ತತ್ವಜ್ಞರು, ವಿಜ್ಞಾನಿಗಳು, ಅವರೂ ಕೂಡ ದೈಹಿಕ ಪರಿಕಲ್ಪನೆಯಲ್ಲಿದ್ದಾರೆ. ಪ್ರತಿಯೊಬ್ಬರು, “ನಾನು ಈ ದೇಹ”, ಎಂದು ಆಲೋಚಿಸುತ್ತಿದ್ದಾರೆ. ಆದರೆ ಅದು ತಪ್ಪು. ನಾವು ಈ ದೇಹವಲ್ಲ. ಈಗತಾನೆ ವಿವರಿಸಿದೆ. ದೇಹ ಎಂದರೆ ಇಂದ್ರಿಯಗಳು, ಆದರೆ ಇಂದ್ರಿಯಗಳನ್ನು ಮನಸು ನಿಯಂತ್ರಿಸುತ್ತದೆ, ಹಾಗು ಮನಸನ್ನು ಬುದ್ಧಿ ನಿಯಂತ್ರಿಸುತ್ತದೆ, ಹಾಗು ಬುದ್ಧಿಯನ್ನು ಆತ್ಮ ನಿಯಂತ್ರಿಸುತ್ತದೆ. ಅದು ನಿಮಗೆ ತಿಳಿಯದು. ಆತ್ಮದ ಇರುವಿಕೆಯನ್ನು ತಿಳಿಸುವ ಶಿಕ್ಷಣ ವ್ಯವಸ್ಥೆಯು ವಿಶ್ವದಾದ್ಯಂತ ಎಲ್ಲು ಇಲ್ಲ. ಮನುಷ್ಯನಿಗೆ ಅತಿ ಅಗತ್ಯವಾದ ತಿಳುವಳಿಕೆ ಅದು. ಮಾನವ ಜನ್ಮ ಜಂತುಗಳಂತೆ ಸಮಯ ವ್ಯರ್ಥ ಮಾಡಲು ಅಲ್ಲ – ಕೇವಲ ತಿನ್ನುವುದು, ನಿದ್ರಿಸುವುದು, ಮೈಥುನದಲ್ಲಿ ತೊಡಗುವುದು ಹಾಗು ರಕ್ಷಣೆಗೆ ಅಲ್ಲ. ಅದು ಪ್ರಾಣಿಗಳ ಬದುಕು. ಮನುಷ್ಯನ ವಿಶೇಷವಾದ ಬುದ್ಧಿವಂತಿಕೆಯನ್ನು ಏನನ್ನು ತಿಳಿಯಲು ಉಪಯೋಗಿಸ ಬೇಕೆಂದರೆ “ಯಾರು ನಾನು? ನಾನು ಆತ್ಮ.” “ನಾನು ಆತ್ಮ”, ಎಂಬುದನ್ನು ನಾವು ಅರಿತರೆ, ಲೋಕದಲ್ಲಿ ಹಾವಳಿ ಮಾಡಿರುವಂತಹ ಜೀವನದ ದೈಹಿಕ ಪರಿಕಲ್ಪನೆ … ಜೀವನದ ದೈಹಿಕ ಪರಿಕಲ್ಪನೆಯಿಂದ, “ನಾನು ಭಾರತೀಯ”, ಎಂದುಕೊಂಡಿದ್ದೇನೆ, ನೀನು “ಅಮೇರಿಕನ್” ಎಂದು ತಿಳಿದಿರುವೆ, ಅವನು ಬೇರೆ ಏನೋ ತಿಳಿದಿದ್ದಾನೆ. ಆದರೆ ನಾವೆಲ್ಲ ಒಂದು. ನಾವು ಆತ್ಮ. ನಾವೆಲ್ಲ ಕೃಷ್ಣನ, ಜಗನ್ನಾಥನ, ಸನಾತನ ಸೇವಕರು.

ಈ ದಿನ ಬಹಳ ಒಳ್ಳೆಯ ಶುಭ ದಿನ. ಈ ದಿನ ಕೃಷ್ಣ, ಈ ಭೂಮಿಯ ಮೇಲಿದ್ದಾಗ, ಕುರುಕ್ಷೇತ್ರದಲ್ಲಿ ಒಂದು ಸೂರ್ಯ ಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡನು. ಕೃಷ್ಣನು, ಅವನ ಅಣ್ಣ ಬಲರಾಮ, ಹಾಗು ತಂಗಿ ಸುಭದ್ರೆಯೊಂದಿಗೆ ಕುರುಕ್ಷೇತ್ರಕ್ಕೆ ಬಂದನು. ಕುರುಕ್ಷೇತ್ರ ಈಗಲು ಭಾರತದಲ್ಲಿದೆ. ಯಾವಾಗಲಾದರು ನೀವು ಭಾರತಕ್ಕೆ ಹೋದರೆ ಕುರುಕ್ಷೇತ್ರ ಭೂಮಿಯನ್ನು ನೋಡಬಹುದು. ಈ ರಥಯಾತ್ರ ಉತ್ಸವವನ್ನು ನಾವು ಆಚರಿಸುವುದು ಕೃಷ್ಣ ತನ್ನ ಅಣ್ಣ ಹಾಗು ತಂಗಿಯೊಡನೆ ಕುರುಕ್ಷೇತ್ರಕ್ಕೆ ಬೇಟಿ ನೀಡಿದ ನೆನೆಪಿನಲ್ಲಿ. ಆದ್ದರಿಂದ ಪ್ರಭು ಜಗನ್ನಾಥ, ಚೈತನ್ಯ ಮಹಾಪ್ರಭು, ಅವನು ಪರಮಾನಂದದಲ್ಲಿದ್ದನು. ಅವನು ರಾಧಾರಾಣಿಯ ಹಾಗೆ ಪ್ರೇಮಾನುಭಾವದ ಮನಃಸ್ಥಿತಿಯಲ್ಲಿದ್ದು, “ಕೃಷ್ಣ, ದಯವಿಟ್ಟು ವೃಂದಾವನಕ್ಕೆ ಹಿಂತಿರುಗಿ ಬಾ”, ಎಂದು ಆಲೋಚಿಸುತ್ತಿದ್ದನು. ಆದ್ದರಿಂದ ಅವನು ರಥಯಾತ್ರೆಯ ಮುಂದೆ ಕುಣಿಯುತ್ತಿದ್ದನು. ನಿಮಗೆ ನಮ್ಮ ಸಮಾಜ ಪ್ರಕಟಿಸಿರುವ ಪುಸ್ತಕಗಳ್ಳನ್ನು ಓದಿದರೆ ಅರ್ಥವಾಗುತ್ತದೆ. ಅದ್ದರಲ್ಲಿ ಒಂದು ಪುಸ್ತಕ ‘ಚೈತನ್ಯ ಮಹಾಪ್ರಭುಗಳ ಬೋಧನೆಗಳು’. ಅದು ಬಹಳ ಮುಖ್ಯವಾದಂತಃ ಪುಸ್ತಕ. ಈ ಕೃಷ್ಣ ಪ್ರಜ್ಞೆ ಆಂದೋಲನದ ಬಗ್ಗೆ ತಿಳಿಯಬೇಕೆಂದರೆ, ನಮಲ್ಲಿ ಸಾಕಷ್ಟು ಪುಸ್ತಕಗಳಿವೆ. ನೀವು ವೈಜ್ಞಾನಿಕವಾಗಿ ಹಾಗು ತಾತ್ವಿಕವಾಗಿ ಅಧ್ಯಯನ ಮಾಡಬಹುದು. ಆದರೆ ನಿಮಗೆ ಅಧ್ಯಯನ ಮಾಡಲು ಆಸಕ್ತಿ ಇಲ್ಲವೆಂದರೆ, ನೀವು ಹರೇಕೃಷ್ಣ ಜಪವನ್ನು ಮಾಡಿ, ಕ್ರಮೇಣ ಸರ್ವಸ್ವವೂ ನಿಮಗೆ ಅರಿವಾಗುತ್ತದೆ, ಹಾಗು ನಿಮಗೆ ಕೃಷ್ಣನೊಂದಿಗಿರುವ ನಿಮ್ಮ ಸಂಬಂಧವು ತಿಳಿಯುತ್ತದೆ.

ಈ ಉತ್ಸವದಲ್ಲಿ ಪಾಲ್ಗೊಂಡಿರುವ ನಿಮಗೆ ನನ್ನ ಧನ್ಯವಾದಗಳು. ಈಗ ನಾವು ಹರೇ ಕೃಷ್ಣ ಜಪಮಾಡುತ್ತ, ಜಗನ್ನಾಥ ಸ್ವಾಮಿಯೊಂದಿಗೆ ಹೊರಡೋಣ. ಹರೇ ಕೃಷ್ಣ.