KN/Prabhupada 0079 - ನನಗೆ ಸಿಗಬೇಕಾದ ಶ್ರೇಯವಲ್ಲ



Lecture on SB 1.7.6 -- Hyderabad, August 18, 1976

ಈ ವಿದೇಶಿಯರು, ಅವರು ಹಿಂದೂಗಳು ಅಲ್ಲ, ಭಾರತೀಯರೂ ಅಲ್ಲ, ಅಥವ ಬ್ರಾಹ್ಮಣರೂ ಅಲ್ಲ. ಹೇಗೆ ಸ್ವೀಕರಿಸುತ್ತಿದ್ದಾರೆ? ಅವರು ಮೂಢರೋ ಅಥವ ದೂರ್ತರೋ ಅಲ್ಲ. ಅವರು ಗೌರವಾನ್ವಿತ ಸುಸಂಸೃತ ಕುಟುಂಬಗಳಿಗೆ ಸೇರಿದವರು. ನಮ್ಮ ಕೇಂದ್ರಗಳು ಇರಾನ್ ದೇಶದಲ್ಲು ಇವೆ. ನಾನು ಈಗತಾನೆ ಟೆಹ್ರಾನ್ ನಿಂದ ಬಂದೆ. ಅಲ್ಲಿ ಬಹಳಷ್ಟು ಮುಸ್ಲಿಮ್ ವಿದ್ಯಾರ್ಥಿಗಳಿದು, ಅವರೂ ಕೂಡ ಇದನ್ನು ಸ್ವೀಕರಿಸಿದ್ದಾರೆ. ಆಫ್ರಿಕಾದಲ್ಲೂ ಸ್ವೀಕರಿಸಿದ್ದಾರೆ. ಆಸ್ಟ್ರೇಲಿಯಾದಲೂ ಕೂಡ. ವಿಶ್ವದಾದ್ಯಂತ. ಅದುವೇ ಚೈತನ್ಯ ಮಾಹಾಪ್ರಭುಗಳ ಜೀವಿತೋದ್ದೇಶ.

ಪೃಥ್ವೀತೆ ಆಚೆ ಯತ ನಗರಾದಿ ಗ್ರಾಮ
ಸರ್ವತ್ರ ಪ್ರಚಾರ ಹೈಬೇ ಮೊರ ನಾಮ

ಇದು ಚೈತನ್ಯ ಮಹಾಪ್ರಭುಗಳ ಭವಿಷ್ಯವಾಣಿ. ವಿಶ್ವದಾದ್ಯಂತ ಎಷ್ಟೇ ನಗರಗಳು ಹಾಗು ಹಳ್ಳಿಗಳಿರಲಿ, ಈ ಕೃಷ್ಣ ಪ್ರಜ್ಞೆ ಆಂದೋಲನ ಎಲ್ಲಡೆ ಹರಡುತ್ತದೆ. ಆದ್ದರಿಂದ ನನಗೆ ಯಾವ ಶ್ರೇಯವೂ ಸೇರುವುದಿಲ್ಲ, ಆದರೆ ಇದು ನನ್ನ ಒಂದು ಸಣ್ಣ ಪ್ರಯತ್ನ, ಒಂದು ವಿನಮ್ರ ಪ್ರಯತ್ನ. ಒಬ್ಬ ವ್ಯಕ್ತಿ ಸ್ವಲ್ಪ ಸಫಲತೆ ಗಳಿಸಬಹುದಾದರೆ, ನಮ್ಮೆಲ್ಲರಿಗು ಏಕೆ ಸಾದ್ಯವಿಲ್ಲ. ಚೈತನ್ಯ ಮಾಹಾಪ್ರಭು ಎಲ್ಲಾ ಭಾರತೀಯರಿಗೂ ಈ ಅಧಿಕಾರಪತ್ರವನ್ನು ಕೊಟ್ಟಿದ್ದಾರೆ, ಭಾರತ ಭೂಮಿತೆ ಹೈಲ ಮನುಷ್ಯ ಜನ್ಮ ಯಾರ (ಚೈ.ಚ ಆದಿ 9.41). ಆವನು ಮನುಷ್ಯನ ಹತಿರ ಮಾತನಾಡುತ್ತಿದ್ದಾನೆ, ಬೆಕ್ಕು ಮತ್ತು ನಾಯಿಗಳೊಂದಿಗಲ್ಲ. ‘ಮನುಷ್ಯ ಜನ್ಮ ಯಾರ ಜನ್ಮ ಸಾರ್ಥಕ ಕರಿ.’ ಎಲ್ಲಕ್ಕಿಂತಲು ಮೊದಲು ಜೀವನದ ಉದ್ದೇಶವೇನೆಂದು ತಿಳಿಯಲು ಪ್ರಯತ್ನಿಸಬೇಕು. ಅದನ್ನು ‘ಜನ್ಮ ಸಾರ್ಥಕ’ ಎನ್ನುತ್ತಾರೆ. ‘ಜನ್ಮ ಸಾರ್ಥಕ ಕರಿ ಕರ ಪರ ಉಪಕಾರ.’ ಹೊರಡಿ. ಕೃಷ್ಣ ಪ್ರಜ್ಞೆಗೆ ಎಲ್ಲೆಡೆ ಬಹಳ ಬೇಡಿಕೆ ಇದೆ.