KN/Prabhupada 0080 - ಕೃಷ್ಣನಿಗೆ ತನ್ನ ಬಾಲ್ಯ ಗೆಳೆಯರೊಡನೆ ಆಡಲು ಬಹಳ ಇಷ್ಟ
Lecture on CC Madhya-lila 21.13-49 -- New York, January 4, 1967
- ಇ ಮತ ಅನ್ಯತ್ರ ನಾಹಿ ಶುನಿಯೆ ಅದ್ಭುತ
- ಯಾಹಾರ ಶ್ರವಣೆ ಚಿತ್ತ ಹಯ ಅವಧೂತ
- ಕೃಷ್ಣ ವತ್ಸೈರ್ ಅಸಂಖ್ಯಾತೈಃ ಶುಕದೇವ ವಾಣಿ
- ಕೃಷ್ಣ ಸಂಗೆ ಕತ ಗೋಪ ಸಂಖ್ಯಾ ನಾಹಿ ಜಾನಿ
- (ಚೈ.ಚ ಮಧ್ಯ 21.18-19)
ಗೋಪ. ಕೃಷ್ಣನು, ಅವನ ಧಾಮದಲ್ಲಿ, ಒಬ್ಬ ಹದಿನಾರು ವಯಸ್ಸಿನ ಸಾಮಾನ್ಯ ಹುಡುಗನಂತೆ, ಹಾಗು ಅವನ ಮುಖ್ಯ ಲೀಲೆಯು ತನ್ನ ಗಳೆಯರೊಡನೆ ಸೇರಿ ದನಗಳನ್ನು ಹುಲ್ಲುಗಾವಲಿಗೆ ಕರದೊಯ್ಯುವುದು, ಮತ್ತು ಅಲ್ಲಿ ಆಟವಾಡುವುದು. ಇದು ಕೃಷ್ಣನ ದಿನಚರಿ ಕಾರ್ಯವು. ಶುಕದೇವ ಗೋಸ್ವಾಮೀಯವರು ಒಂದು ಬಹಳ ಸುಂದರವಾದ ಶ್ಲೋಕವನ್ನು ರಚಿಸಿದ್ದಾರೆ, ಕೃಷ್ಣನ ಜೊತೆ ಆಡುತ್ತಿರುವ ಈ ಹುಡುಗರು, ತಮ್ಮ ಪೂರ್ವ ಜನ್ಮಗಳಲ್ಲಿ ಪುಣ್ಯಕರ್ಮಗಳ ರಾಶಿಯನ್ನೆ ಶೇಖರಿಸಿದ್ದಾರೆ. ಕೃತ ಪುಣ್ಯ ಪುಂಜಾಃ (ಶ್ರೀ.ಭಾ 10.12.11). ಸಾಕಂ ವಿಜಹ್ರುಃ ಇತ್ಥಂ ಸತಾಂ ಬ್ರಹ್ಮ ಸುಖಾನುಭೂತ್ಯಾ. ಶುಕದೇವ ಗೋಸ್ವಾಮೀ ಬರೆಯುತ್ತಾರೆ, ಕೃಷ್ಣನ ಜೊತೆ ಆಟವಾಡುತ್ತಿರುವ ಈ ಹುಡುಗರು ಯಾರ ಜೊತೆ ಆಡುತ್ತಿದ್ದಾರೆ? ಪರಮ ಪರಿಪೂರ್ಣ ಸತ್ಯನಾದ ಅವನ ಜೊತೆ ಆಡುತ್ತಿದ್ದಾರೆ... ಯಾರನ್ನು ಮಹಾರಿಶಿಗಳು ನಿರಾಕಾರನೆಂದು ಗಣಿಸಿರುವರೋ ಅವನ ಜೊತೆ. ಇತ್ಥಂ ಸತಾಂ ಬ್ಯಹ್ಮ… ಬ್ರಹ್ಮ ಸುಖ. ಬ್ರಹ್ಮ, ಅಲೌಕಿಕ ಬ್ರಹ್ಮನ್ ಜ್ಞಾನ. ಬ್ರಹ್ಮಜ್ಞಾನದ ಭಂಡಾರವೇ ಇಲ್ಲಿದೆ – ಕೃಷ್ಣ. ಈ ಹುಡುಗರು ಕೃಷ್ಣನೊಡನೆ ಆಡುತ್ತಿದ್ದಾರೆ, ಅವನು ಬ್ರಹ್ಮಜ್ಞಾನದ ಭಂಡಾರ. ಇತ್ಥಂ ಸತಾಂ ಬ್ರಹ್ಮ ಸುಖಾನುಭೂತ್ಯಾ ದಾಸ್ಯಂ ಗತಾನಾಂ ಪರ ದೈವತೇನ. ಹಾಗು ದಾಸ್ಯಂ ಗತಾನಾಂ, ಯಾರು ಪರಮ ಪ್ರಭುವನ್ನು ಯಜಮಾನನೆಂದು ಸ್ವೀಕರಿಸಿರುವರೋ, ಅಂದರೆ ಭಕ್ತರು, ಅವರಿಗೆ ಈ ಕೃಷ್ಣನೆ ಪರಮಪ್ರಭುವು. ನಿರಾಕಾರವಾದಿಗಳಿಗೆ ಅವನು ಪರಬ್ರಹ್ಮನು, ಹಾಗು ಸಾಕಾರವಾದಿಗಳಿಗೆ ಅವನು ಪರಮಪ್ರಭುವು. ಮಾಯಾಶ್ರಿತಾನಾಂ ನರ ದಾರಕೇಣ. ಹಾಗು ಯಾರು ಭೌತಿಕತೆಯ ಮಾಟಕ್ಕೆ ಒಳಗಾಗಿದ್ದಾರೋ ಅವರಿಗೆ ಅವನೊಬ್ಬ ಸಾಧಾರಣ ಹುಡುಗ. ಮಾಯಾಶ್ರಿತಾನಾಂ ನರ ದಾರಕೇಣ ಸಾಕಂ ವಿಜಹ್ರುಃ ಕೃತ ಪುಣ್ಯ ಪುಂಜಾಃ (ಶ್ರೀ. ಭಾ 10.12.11). ಈ ಹುಡುಗರು, ಯಾರು ಲಕ್ಞಾಂತರ ವರ್ಷಗಳ ಪುಣ್ಯಕರ್ಮಗಳನ್ನು ಶೇಖರಿಸಿರುವರೋ, ಅವರು ಈಗ ಸಾಧಾರಣ ಹುಡುಗರು ಆಡುವಂತೆ ಕೃಷ್ಣನೊಡನೆ ಮುಖಾಮುಖಿಯಾಗಿ ಆಡುವ ಅವಕಾಶವನ್ನು ಗಳಿಸಿದ್ದಾರೆ. ಹಾಗೆಯೇ ಕೃಷ್ಣನಿಗೆ ತನ್ನ ಬಾಲ್ಯ ಗೆಳೆಯರೊಡನೆ ಆಡಲು ಬಹಳ ಇಷ್ಟ. ಬ್ರಹ್ಮ ಸಂಹಿತದಲ್ಲಿ ಇದರ ಉಲ್ಲೇಖವಿದೆ. ಸುರಭೀರ್ ಅಭಿಪಾಲಯಂತಂ, ಲಕ್ಷ್ಮಿ ಸಹಸ್ರ ಶತ ಸಂಭ್ರಮ ಸೇವ್ಯಮಾನಂ (ಬ್ರಹ್ಮ ಸಂಹಿತ 5.29). ಈ ವಿಷಯಗಳನ್ನು ಇಲ್ಲಿ ಕೂಡ ವಿವರಿಸಲಾಗಿದೆ.
- ಏಕ ಏಕ ಗೋಪ ಕರೆ ಯೆ ವತ್ಸ ಚಾರಣ
- ಕೋಟಿ, ಅರ್ಬುದ, ಶಂಖ, ಪದ್ಮ, ತಾಹಾರ ಗಣನ
- (ಚೈ.ಚ ಮಧ್ಯ 21.20)
ಈಗ ಎಷ್ಟು ಸ್ನೇಹಿತರು, ಗೋಪಾಲ ಬಾಲಕರಿದ್ದಾರೆ ಎಂದು ಯಾರೂ ಎಣಿಸಲಾಗುವುದಿಲ್ಲ. ಯಾರೂ… ಅಪರಿಮಿತ, ಎಲ್ಲವೂ ಅಪರಿಮಿತ. ಅವರಿಗೆ ಅಸಂಖ್ಯಾತ ದನಗಳಿವೆ, ಅಸಂಖ್ಯಾತ ಗೆಳೆಯರಿದ್ದಾರೆ, ಎಲ್ಲವೂ ಅಸಂಖ್ಯಾತ.
- ವೇತ್ರ, ವೇಣು, ದಲ, ಶೃಂಗ, ವಸ್ತ್ರ, ಅಲಂಕಾರ,
- ಗೋಪ-ಗಣೇರ ಯತ, ತಾರ ನಾಹಿ ಲೇಖಾ-ಪಾರ
- (ಚೈ.ಚ ಮಧ್ಯ 21.21)
ಈ ಗೋಪಾಲ ಬಾಲಕರ ಕೈಯಲ್ಲಿ ವೇತ್ರ ಎಂಬ ಬೆತ್ತವಿದೆ. ಹಾಗು ಪ್ರತಿಯೊಬ್ಬರ ಹತ್ತಿರ ಕೊಳಲು ಇದೆ. ವೇತ್ರ ವೇಣು ದಲ. ಹಾಗು ಒಂದು ತಾವರೆ ಹೂವು, ಒಂದು ಶೃಂಗಾರ, ಒಂದು ಕಹಳೆಯಿದೆ. ಶೃಂಗಾರ ವಸ್ತ್ರ, ಹಾಗು ಬಹಳ ಅಂದವಾಗಿ ಅಲಂಕರಿಸಿಕೊಂಡಿರುವರು. ಹಾಗು ಮೈ ತುಂಬ ಒಡವೆ ಧರಿಸಿರುವರು. ಕೃಷ್ಣನು ಅಲಂಕರಿಸಿಕೊಂಡಂತೆಯೇ ಅವನ ಗೆಳೆಯರು, ಅಂದರೆ ಗೋಪಾಲ ಬಾಲಕರು ಕೂಡ ಅಲಂಕರಿಸಿಕೊಂಡಿರುವರು. ಆಧ್ಯಾತ್ಮಿಕ ಲೋಕದಲ್ಲಿ, ನೀವು ಅಲ್ಲಿ ಸೇರಿದಾಗ, ನಿಮಗೆ ಯಾರು ಕೃಷ್ಣ, ಯಾರು ಕೃಷ್ಣನಲ್ಲ ಎಂಬ ವ್ಯತ್ಯಾಸವೇ ತಿಳಿಯದು. ಪ್ರತಿಯೊಬ್ಬರೂ ಕೃಷ್ಣನಂತೆ ಇರುತ್ತಾರೆ. ಅಂತೆಯೇ, ವೈಕುಂಠ ಗ್ರಹಗಳಲ್ಲಿ ಪ್ರತಿಯೊಬ್ಬರೂ ವಿಷ್ಣುವಿನಂತೆ ಇರುತ್ತಾರೆ. ಇದನ್ನು ಸಾರುಪ್ಯ-ಮುಕ್ತಿ ಎನ್ನುತ್ತಾರೆ. ಜೀವಾತ್ಮಗಳು, ಆಧ್ಯಾತ್ಮಿಕ ಗ್ರಹಗಳಲ್ಲಿ ಪ್ರವೇಶಿಸಿದಾಗ, ಅವರು ಕೃಷ್ಣ ಹಾಗು ವಿಷ್ಣುವಿನಂತೆ ಆಗುತ್ತಾರೆ – ಏನು ವ್ಯತ್ಯಾಸವಿಲ್ಲ – ಏಕೆಂದರೆ ಅದು ಪರಿಪೂರ್ಣ ಜಗತ್ತು. ಇಲ್ಲಿ ವ್ಯತ್ಯಾಸವಿದೆ. ಪ್ರತ್ಯೇಕ ಅಸ್ತಿತ್ವದಲ್ಲೂ ವ್ಯತ್ಯಾಸವಿಲ್ಲ ಎಂಬುದನ್ನು ನಿರಾಕಾರವಾದಿಗಳಿಗೆ ಅರ್ಥವಾಗದು. ಪ್ರತ್ಯೇಕ ಅಸ್ತಿತ್ವದ ಬಗ್ಗೆ ಆಲೋಚಿಸುತ್ತಲೇ, ಅವರು ವ್ಯತ್ಯಾಸವಿದೆ ಎಂದು ತಿಳಿಯುತ್ತಾರೆ. ಆಗ ಮುಕ್ತಿ ಎಂದರೇನು? ಹೌದು. ವಾಸ್ತವಿಕವಾಗಿ ಏನು ವ್ಯತ್ಯಾಸವೂ ಇಲ್ಲ. ಕೃಷ್ಣನ ವ್ಯಕ್ತಿತ್ವಕ್ಕು ಅನ್ಯರ ವ್ಯಕ್ತಿತ್ವಕ್ಕು ಇರುವ ಒಂದೆ ವ್ಯತ್ಯಾಸವೇನೆಂದರೆ, ಅವರಿಗೆ “ಕೃಷ್ಣನೇ ನಮ್ಮ ಪ್ರೀತಿಪಾತ್ರನಾದವನು”, ಎಂಬುವ ಪ್ರಜ್ಞೆಯಿದೆ. ಅಷ್ಟೇ. ಕೃಷ್ಣನೆ ಕೇಂದ್ರಬಿಂದುವು. ಹೀಗೆ ಪ್ರತ್ಯೇಕ ಹುಡುಗ ಮತ್ತು ಹುಡುಗಿಯರು ಹಾಗು ಕೃಷ್ಣ, ಪ್ರತಿಯೊಬ್ಬರೂ ಆಧ್ಯಾತ್ಮಿಕ ಆನಂದವನ್ನು ಅನುಭವಿಸುತ್ತಿದ್ದಾರೆ.