KN/Prabhupada 0107 - ಈ ಭೌತಿಕ ದೇಹವನ್ನು ಪುನಃ ಸ್ವೀಕರಿಸಬೇಡಿ



Lecture on BG 4.17 -- Bombay, April 6, 1974

ಇದು ಶ್ರೀಮಂತ ದೇಹವೋ ಅಥವಾ ಬಡ ದೇಹವೋ ಎಂಬುದು ಮುಖ್ಯವಲ್ಲ. ಪ್ರತಿಯೊಬ್ಬರೂ ಜೀವನದ ತ್ರಿವಿಧ ದುಃಖಗಳಿಗೆ ಒಳಗಾಗಬೇಕಾಗುತ್ತದೆ. ಟೈಫಾಯಿಡ್ ಇದ್ದಾಗ, “ಇದು ಶ್ರೀಮಂತನ ದೇಹ, ನಾನು ಅವನಿಗೆ ಕಡಿಮೆ ನೋವು ನೀಡುತ್ತೇನೆ", ಎಂದು ತಾರತಮ್ಯ ಮಾಡುವುದಿಲ್ಲ. ಇಲ್ಲ. ಟೈಫಾಯಿಡ್ ಇದ್ದಾಗ, ನಿಮ್ಮ ದೇಹವು ಶ್ರೀಮಂತ ದೇಹವಾಗಲಿ, ಅಥವಾ ಬಡ ದೇಹವಾಗಲಿ, ನೀವು ಅದೇ ನೋವನ್ನು ಅನುಭವಿಸಬೇಕಾಗುತ್ತದೆ. ನೀವು ನಿಮ್ಮ ತಾಯಿಯ ಗರ್ಭದಲ್ಲಿರುವಾಗ, ಅದೇ ನೋವನ್ನು ಅನುಭವಿಸಬೇಕಾಗುತ್ತದೆ, ನೀವು ರಾಣಿಯ ಗರ್ಭದಲ್ಲಾದರೂ ಇರಿ ಅಥವಾ ಚಮ್ಮಾರನ ಹೆಂಡತಿಯ ಗರ್ಭದಲ್ಲಾದರೂ ಇರಿ. ಅದು ಇರುಕು ಪರಿಸ್ಥಿತಿ... ಆದರೆ ಅವರಿಗೆ ಗೊತ್ತಿಲ್ಲ. ಜನ್ಮ-ಮೃತ್ಯು-ಜರಾ. ಅನೇಕ ಯಾತನೆಗಳಿವೆ. ಜನನದ ಪ್ರಕ್ರಿಯೆಯಲ್ಲಿ. ಜನನ ಮತ್ತು ಮರಣ ಮತ್ತು ವೃದ್ಧಾಪ್ಯದ ಪ್ರಕ್ರಿಯೆಯಲ್ಲಿ ಅನೇಕ ಯಾತನೆಗಳಿವೆ. ಶ್ರೀಮಂತ ಅಥವಾ ಬಡವ, ನಮಗೆ ವಯಸ್ಸಾದಾಗ, ನಾವು ಎಷ್ಟೋ ದರ್ಬಲತೆಗಳನ್ನು ಅನುಭವಿಸಬೇಕಾಗುತ್ತದೆ.

ಅಂತೆಯೇ, ಜನ್ಮ-ಮೃತ್ಯು-ಜರಾ-ವ್ಯಾಧಿ (ಭ.ಗೀ 13.9). ಜರಾ, ಮತ್ತು ವ್ಯಾಧಿ, ಮತ್ತು ಮೃತ್ಯು. ಆದ್ದರಿಂದ ಈ ಭೌತಿಕ ದೇಹದ ಯಾತನೆಗಳ ಬಗ್ಗೆ ನಮಗೆ ಅರಿವಿಲ್ಲ. "ಯಾವುದೇ ಭೌತಿಕ ದೇಹವನ್ನು ಪುನಃ ಸ್ವೀಕರಿಸಬೇಡಿ”, ಎಂದು ಶಾಸ್ತ್ರ ಹೇಳುತ್ತದೆ. ನ ಸಾಧು ಮನ್ಯೆ: "ಇದು ಒಳ್ಳೆಯದಲ್ಲ, ನೀವು ಈ ಭೌತಿಕ ದೇಹವನ್ನು ಪದೇ ಪದೇ ಪಡೆಯುತ್ತಿರುವುದು.” ನಾ ಸಾಧು ಮನ್ಯೆ ಯತ ಆತ್ಮನಃ. ಆತ್ಮನಃ, ಆತ್ಮವು ಈ ಭೌತಿಕ ದೇಹದಲ್ಲಿ ಸೆರೆಯಾಗಿದೆ. ಯತ ಆತ್ಮನೋ 'ಯಮ್ ಅಸನ್ ಅಪಿ. ತಾತ್ಕಾಲಿಕವಾದರೂ, ನಾನು ಈ ದೇಹವನ್ನು ಪಡೆದುಕೊಂಡಿದ್ದೇನೆ. ಕ್ಲೇಶದ ಆಸ ದೇಹಃ.

ಆದ್ದರಿಂದ ನಾವು ಇನ್ನೊಂದು ಭೌತಿಕ ದೇಹವನ್ನು ಪಡೆಯುವ ಈ ಶೋಚನೀಯ ಸ್ಥಿತಿಯನ್ನು ನಿಲ್ಲಿಸಲು ಬಯಸಿದರೆ, ಕರ್ಮ ಯಾವುದು, ವಿಕರ್ಮ ಯಾವುದು ಎಂದು ನಾವು ತಿಳಿದಿರಬೇಕು. ಅದು ಕೃಷ್ಣನ ಪ್ರಸ್ತಾಪ. ಕರ್ಮಣೋ ಹಿ ಅಪಿ ಬೋಧವ್ಯಂ ಚ ವಿಕರ್ಮಣಃ. ಅಕರ್ಮಣಶ್ ಚ ಬೋಧವ್ಯಂ. ಅಕರ್ಮಣ ಎಂದರೆ ಯಾವುದೇ ಪ್ರತಿಕ್ರಿಯೆ ಇಲ್ಲ. ಪ್ರತಿಕ್ರಿಯೆ. ಕರ್ಮ, ನೀವು ಉತ್ತಮ ಕೆಲಸ ಮಾಡಿದರೆ, ಅದಕ್ಕೆ ಪ್ರತಿಕ್ರಿಯೆ ಇದೆ. ಉತ್ತಮ ದೇಹ, ಉತ್ತಮ ಶಿಕ್ಷಣ, ಉತ್ತಮ ಕುಟುಂಬ, ಉತ್ತಮ ಸಂಪತ್ತು. ಇದು ಕೂಡ ಚೆನ್ನಾಗಿದೆ. ನಾವು ಅದನ್ನು ಚೆನ್ನಾಗಿದೆ ಎಂದು ಭಾವಿಸುತ್ತೇವೆ. ನಾವು ಸ್ವರ್ಗೀಯ ಗ್ರಹಕ್ಕೆ ಹೋಗಲು ಬಯಸುತ್ತೇವೆ. ಆದರೆ ಸ್ವರ್ಗೀಯ ಗ್ರಹದಲ್ಲೂ ಸಹ ಜನ್ಮ-ಮೃತ್ಯು-ಜರಾ-ವ್ಯಾಧಿ ಇದೆ ಎಂದು ಅವರಿಗೆ ತಿಳಿದಿಲ್ಲ. ಆದ್ದರಿಂದ ನೀವು ಸ್ವರ್ಗೀಯ ದೇಹಕ್ಕೆ ಹೋಗಬೇಕೆಂದು ಕೃಷ್ಣ ಶಿಫಾರಸು ಮಾಡುವುದಿಲ್ಲ. ಅವನು ಹೇಳುತ್ತಾನೆ, ಆ-ಬ್ರಹ್ಮ-ಭುವನಾಲ್ ಲೋಕಾ: ಪುನರ್ ಆವರ್ತಿನೋ ‘ರ್ಜುನ (ಭ.ಗೀ 8.16). ನೀವು ಬ್ರಹ್ಮಲೋಕಕ್ಕೆ ಹೋದರೂ ಸಹ, ಜನನದ ಪುನರಾವರ್ತನೆ ಮತ್ತು... ಯದ್ ಗತ್ವಾ ನ ನಿವರ್ತಂತೇ ತದ್ ಧಾಮ ಪರಮಂ ಮಮ (ಭ.ಗೀ 15.6). ಯದ್ ಗತ್ವಾ ನ ನಿವರ್ತಂತೇ. ಯದ್ ಗತ್ವಾ ನ ನಿವರ್ತಂತೇ. ಆದರೆ ಧಾಮ ಇದೆ ಎಂದು ನಮಗೆ ತಿಳಿದಿಲ್ಲ. ಒಂದಲ್ಲ ಇನ್ನೊಂದು ರೀತಿಯಲ್ಲಿ ನಾವು ಆ ಧಾಮಕ್ಕೆ ಸ್ವಯಂ ಮೇಲೇರಿಸಲು ಸಾಧ್ಯವಾದರೆ, ಆಗ, ನ ನಿವರ್ತಂತೇ, ಯದ್ ಗತ್ವಾ ನ ನಿವರ್ತಂತೇ ತದ್ ಧಾಮ ಪರಮಂ ಮಮ. ಮತ್ತೊಂದು ಸ್ಥಳದಲ್ಲಿ, ತ್ಯಕ್ತ್ವಾ ದೇಹ ಪುನಾರ್ ಜನ್ಮ ನೈತಿ ಮಾಮ್ ಏತಿ (ಭ.ಗೀ 4.9).

ಆದ್ದರಿಂದ ಜನರಿಗೆ ಕೃಷ್ಣ, ಅಥವಾ ಪರಮ ಪ್ರಭು, ಅವನ ಧಾಮವಿದೆ, ಮತ್ತು ಅಲ್ಲಿಗೆ ಯಾರಾದರೂ ಹೋಗಬಹುದು ಎಂಬ ಮಾಹಿತಿಯಿಲ್ಲ. ಹೇಗೆ ಹೋಗಬಹುದು?

ಯಾಂತಿ ದೇವ-ವ್ರತಾ ದೇವಾನ್
ಪಿತೃನ್ ಯಾಂತಿ ಪಿತೃ-ವ್ರತಾಃ
ಭೂತಾನಿ ಯಾಂತಿ ಭೂತೇಜ್ಯಾ
ಯಾಂತಿ ಮದ್-ಯಾಜಿನೋ ‘ಪಿ ಮಾಂ
(ಭ.ಗೀ 9.25)

"ಒಬ್ಬನು ನನ್ನ ಆರಾಧನೆ, ನನ್ನ ವ್ಯವಹಾರ, ಭಕ್ತಿ-ಯೋಗಕ್ಕೆ ಸಮರ್ಪಿಸಿಕೊಂಡರೆ ಅವನು ನನ್ನ ಬಳಿಗೆ ಬರುತ್ತಾನೆ." ಮತ್ತೊಂದು ಸ್ಥಳದಲ್ಲಿ ಅವರು ಹೇಳುತ್ತಾರೆ, ಭಕ್ತ್ಯಾ ಮಾಮ್ ಅಭಿಜಾನಾತಿ ಯಾವಾನ್ ಯಶ್ ಚಾಸ್ಮಿ (ಭ.ಗೀ 18.55).

ಆದ್ದರಿಂದ ನಮ್ಮ ಏಕೈಕ ವ್ಯವಹಾರವೆಂದರೆ ಕೃಷ್ಣನನ್ನು ಅರ್ಥಮಾಡಿಕೊಳ್ಳುವುದು. ಯಜ್ಞಾರ್ಥೇ ಕರ್ಮ. ಇದು ಅಕರ್ಮ. ಇಲ್ಲಿ ಇದನ್ನು ಹೇಳಲಾಗಿದೆ, ಅಕರ್ಮಣ, ಅಕರ್ಮಣಃ ಅಪಿ ಬೋಧವ್ಯಂ, ಅಕರ್ಮಣಶ್ ಚ ಬೋಧವ್ಯಮ್. ಅಕರ್ಮ ಎಂದರೆ ಪ್ರತಿಕ್ರಿಯೆರಹಿತ. ಇಲ್ಲಿ, ನಮ್ಮ ಇಂದ್ರಿಯ ತೃಪ್ತಿಗಾಗಿ ನಾವು ವರ್ತಿಸಿದರೆ, ಪ್ರತಿಕ್ರಿಯೆ... ಸೈನಿಕನ್ನು ಕೊಲ್ಲುವಂತೆಯೇ. ಅವನು ಚಿನ್ನದ ಪದಕ ಪಡೆಯುತ್ತಾನೆ. ಅದೇ ಸೈನಿಕ, ಮನೆಗೆ ಬಂದಾಗ, ಯಾರನ್ನಾದರು ಕೊಂದರೆ, ಅವನನ್ನು ಗಲ್ಲಿಗೇರಿಸಲಾಗುತ್ತದೆ. ಏಕೆ? ಅವರು ನ್ಯಾಯಾಲಯದಲ್ಲಿ ಹೇಳಬಹುದು, "ಮಾನ್ಯರೇ, ನಾನು ಯುದ್ಧಭೂಮಿಯಲ್ಲಿ ಹೋರಾಡುತ್ತಿದ್ದಾಗ, ನಾನು ಅನೇಕರನ್ನು ಕೊಂದೆ. ನನಗೆ ಚಿನ್ನದ ಪದಕ ಸಿಕ್ಕಿತು. ಆದರೆ ನೀವು ನನ್ನನ್ನು ಈಗ ಏಕೆ ಗಲ್ಲಿಗೇರಿಸುತ್ತಿದ್ದೀರಿ?" "ಏಕೆಂದರೆ ಇದು ನೀನು ನಿನ್ನ ಇಂದ್ರಿಯ ತೃಪ್ತಿಗಾಗಿ ಮಾಡಿದೆ, ಆದರೆ ಮೊದಲು ನೀನು ಸರ್ಕಾರದ ಅನುಮತಿಯಿಂದ ಮಾಡಿದೆ."

ಆದ್ದರಿಂದ ಯಾವುದೇ ಕರ್ಮ, ಕೃಷ್ಣನ ತೃಪ್ತಿಗಾಗಿ ನೀವು ಮಾಡಿದರೆ, ಅದು ಅಕರ್ಮ, ಪ್ರತಿಕ್ರಿಯೆರಹಿತ. ಆದರೆ ನಿಮ್ಮ ಇಂದ್ರಿಯ ತೃಪ್ತಿಗಾಗಿ ನೀವು ಏನನ್ನಾದರೂ ಮಾಡಿದರೆ, ನೀವು ಒಳ್ಳೆಯ ಅಥವಾ ಕೆಟ್ಟ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ಕೃಷ್ಣ ಹೇಳುತ್ತಾನೆ:

ಕರ್ಮಣೋ ಹಿ ಅಪಿ ಬೋಧವ್ಯಂ
ಬೋಧವ್ಯಂ ಚ ವಿಕರ್ಮಣಃ
ಅಕರ್ಮಣಶ್ ಚ ಬೋಧವ್ಯಂ
ಗಹನಾ ಕರ್ಮಣೋ ಗತಿಃ
(ಭ.ಗೀ 4.17)

ನೀವು ಯಾವ ರೀತಿಯಾದ ಕರ್ಮವನ್ನು ಮಾಡಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ಆದ್ದರಿಂದ ನಾವು ಕೃಷ್ಣನಿಂದ, ಶಾಸ್ತ್ರದಿಂದ, ಗುರುವಿನಿಂದ ನಿರ್ದೇಶನ ಪಡೆಯಬೇಕು. ಆಗ ನಮ್ಮ ಜೀವನ ಯಶಸ್ವಿಯಾಗುತ್ತದೆ. ತುಂಬ ಧನ್ಯವಾದಗಳು. ಹರೇ ಕೃಷ್ಣ.