KN/Prabhupada 0108 - ಮುದ್ರಣ ಮತ್ತು ಅನುವಾದ ಮುಂದುವರಿಯಬೇಕು



Room Conversation "GBC Resolutions" -- March 1, 1977, Mayapura

ಪ್ರಭುಪಾದ: ಆದ್ದರಿಂದ ಹೇಗಾದರೂ, ಮುದ್ರಣ ಮತ್ತು ಅನುವಾದ ಮುಂದುವರಿಯಬೇಕು. ಅದು ನಮ್ಮ ಮುಖ್ಯ ವ್ಯವಹಾರ. ಅದನ್ನು ನಿಲ್ಲಿಸಲು ಸಾಧ್ಯವಿಲ್ಲ. ಮುಂದುವರಿಯಬೇಕು. ನಿರಂತರ ಪ್ರಯತ್ನದಿಂದ ಈಗ ನಮಲ್ಲಿ ಅನೇಕ ಹಿಂದಿ ಸಾಹಿತ್ಯವಿದೆ. (ನಗುತ್ತಾರೆ) ನಾನು ಪಟ್ಟುಹಿಡಿದು ಕೇಳುತ್ತಿದೆ, "ಹಿಂದಿ ಎಲ್ಲಿದೆ? ಹಿಂದಿ ಎಲ್ಲಿದೆ?" ಆದ್ದರಿಂದ ಅದು ಸ್ವಲ್ಪ ಮೂರ್ತ ರೂಪಕ್ಕೆ ಬಂದಿದೆ. ಮತ್ತು ನಾನು ಅವನನ್ನು ಸುಮ್ಮನೆ ರೇಗಿಸುತ್ತಿದೆ: "ಹಿಂದಿ ಎಲ್ಲಿದೆ? ಹಿಂದಿ ಎಲ್ಲಿದೆ?" ಆದ್ದರಿಂದ ಅವನು ಅದನ್ನು ವಾಸ್ತವಕ್ಕೆ ತಂದಿದ್ದಾನೆ. ಅದೇ ರೀತಿ ಫ್ರೆಂಚ್ ಭಾಷೆಯಲ್ಲೂ ಸಹ, ನಾವು ಪುಸ್ತಕಗಳನ್ನು ಸಾಧ್ಯವಾದಷ್ಟು ಅನುವಾದಿಸಬೇಕು ಮತ್ತು ಮುದ್ರಿಸಬೇಕು. ‘ಪುಸ್ತಕಗಳನ್ನು ಮುದ್ರಿಸು’ ಎಂದರೆ ನಮಲ್ಲಿ ಈಗಾಗಲೇ ಪುಸ್ತಕವಿದೆ ಎಂದರ್ಥ. ಅದನ್ನು ಕೇವಲ ನಿರ್ದಿಷ್ಟ ಭಾಷೆಯಲ್ಲಿ ಭಾಷಾಂತರಿಸಿ ಮತ್ತು ಪ್ರಕಟಿಸಿ. ಅಷ್ಟೇ. ಯೋಜನೆ ಈಗಾಗಲೇ ಇದೆ. ನೀವು ಯೋಜನೆಯನ್ನು ತಯಾರಿಸಬೇಕಾಗಿಲ್ಲ. ಫ್ರಾನ್ಸ್ ಬಹಳ ಮುಖ್ಯವಾದ ದೇಶ. ಆದ್ದರಿಂದ ಮುದ್ರಣ ಮತ್ತು ಅನುವಾದ ಮುಂದುವರಿಯಬೇಕು. ಅದೇ ನನ್ನ ವಿನಂತಿ.