KN/Prabhupada 0120 - ಅಚಿಂತ್ಯ ಅತೀಂದ್ರಿಯ ಶಕ್ತಿ



Morning Walk At Cheviot Hills Golf Course -- May 17, 1973, Los Angeles

ಪ್ರಭುಪಾದ: ನೀನು ಅನುವಾದಿಸಿದ್ದೀಯೋ ಇಲ್ಲವೋ?

ಸ್ವರೂಪ ದಾಮೋದರ: ಅಚಿಂತ್ಯ?

ಪ್ರಭುಪಾದ: ಹೌದು. ಅಚಿಂತ್ಯ ಅಥವಾ ಅತೀಂದ್ರಿಯ.

ಸ್ವರೂಪ ದಾಮೋದರ: ಅತೀಂದ್ರಿಯ ಶಕ್ತಿ.

ಪ್ರಭುಪಾದ: ಹೌದು.

ಸ್ವರೂಪ ದಾಮೋದರ: ಶ್ರೀಲ ಪ್ರಭುಪಾದ ವಿವರಿಸಿದ್ದನ್ನು ನಾನು ಕೇವಲ ಸಂಗ್ರಹಿಸುತ್ತಿದ್ದೇನೆ, ನಾವು ಗಮನಿಸುವ ವಿಭಿನ್ನ ಅಚಿಂತ್ಯ-ಶಕ್ತಿಗಳನ್ನು.

ಪ್ರಭುಪಾದ: ಇಲ್ಲಿ ಅಚಿಂತ್ಯ ಶಕ್ತಿ ಕಾರ್ಯನಿರ್ವಹಿಸುತ್ತಿದೆ, ಈ ಮಂಜು. ಅದನ್ನು ಓಡಿಸಲು ನಿಮಗೆ ಯಾವುದೇ ಶಕ್ತಿಯಿಲ್ಲ. ನಿಮ್ಮ ಶಕ್ತಿಗೆ ಅತೀತವಾದದ್ದು. ಕೆಲವು ಪದಗಳ ಜಾಲದಿಂದ ನೀವು ವಿವರಿಸಬಹುದು...

ದಾರಿಹೋಕರು: ಶುಭೋದಯ.

ಪ್ರಭುಪಾದ: ಶುಭೋದಯ... “ಅಂತಹ ರಾಸಾಯನಗಳು, ಅಂತಹ ಅಣುಗಳು, ಇದು, ಅದು", ಅನೇಕ ವಿಷಯಗಳಿವೆ. ಆದರೆ (ನಗುತ್ತಾ) ಅದನ್ನು ಓಡಿಸಲು ನಿಮಗೆ ಯಾವುದೇ ಶಕ್ತಿಯಿಲ್ಲ.

ಸ್ವರೂಪ ದಾಮೋದರ: ಹೌದು. ಮಂಜು ಹೇಗೆ ರೂಪುಗೊಳ್ಳುತ್ತದೆ ಎಂಬ ವಿವರಣೆಯನ್ನು ಅವರು ಹೊಂದಿದ್ದಾರೆ. ಅವರು ಅದನ್ನು...

ಪ್ರಭುಪಾದ: ಅವರು ಅದನ್ನು ಮಾಡಬಹುದು. ಅಂದರೆ, ನಾನು ಸಹ ಮಾಡಬಹುದು. ಅದು ತುಂಬ ದೊಡ್ಡ ವಿಷಯವಲ್ಲ. ಆದರೆ ಅದು ಹೇಗೆ ರೂಪುಗೊಳ್ಳುತ್ತದೆ ಎಂದು ನಿಮಗೆ ತಿಳಿದಿದ್ದರೆ, ಅದನ್ನು ಪ್ರತಿರೋಧಿಸಿ.

ಸ್ವರೂಪ ದಾಮೋದರ: ಅದು ಹೇಗೆ ರೂಪಗೊಳ್ಳುತ್ತದೆ ಎಂದು ನಮಗೆ ತಿಳಿದಿದೆ.

ಪ್ರಭುಪಾದ: ಹೌದು. ನಿಮಗೆ ತಿಳಿದಿದೆ, ಹಾಗಾದರೆ ನೀವು ಪ್ರತಿರೋಧಿಸುವುದನ್ನು ಕಂಡುಕೊಳ್ಳಿರಿ. ಹಿಂದಿನಕಾಲದಲ್ಲಿ, ಯುದ್ಧದಲ್ಲಿ ಪರಮಾಣು ಬ್ರಹ್ಮಾಸ್ತ್ರವನ್ನು ಪ್ರಯೋಗಿಸಲಾಗುತ್ತಿತು. ಇನ್ನೊಂದು ಕಡೆಯಿಂದ... ಬ್ರಹ್ಮಾಸ್ತ್ರ ಎಂದರೆ ಅತಿಯಾದ ಶಾಖ. ಆದ್ದರಿಂದ ಅವರು ಏನೋ ಮಾಡಿ ಅದನ್ನು ನೀರಾಗಿ ರೂಪಾಂತರಮಾಡಿದರು. ಏಕೆಂದರೆ ಶಾಖದ ನಂತರ, ನೀರು ಇರಬೇಕು. ಹಾಗಾದರೆ ಆ ವಿಜ್ಞಾನ ಎಲ್ಲಿದೆ?

ಸ್ವರೂಪ ದಾಮೋದರ: ಇದು ಹಾಲಿನ ಹಾಗೆ. ಹಾಲು ಬಿಳಿಯಾಗಿ ಕಾಣುತ್ತದೆ, ಆದರೆ ಅದು ಕೇವಲ ನೀರು. ಇದನ್ನು ನೀರಿನಲಿರುವ ಕ್ಯಾಸೀನ್‌ಗಳು, ಅದನ್ನು ಪ್ರೋಟೀನ್‌ಗಳ ಕೊಲಾಯ್ಡಲ್ ಸಸ್ಪೆನ್ಶನ್ ಎಂದು ಕರೆಯುತ್ತಾರೆ. ಅದೇ ರೀತಿ, ಈ ಮಂಜು ಗಾಳಿಯಲ್ಲಿನ ನೀರಿನ ಕೊಲಾಯ್ಡಲ್ ಸಸ್ಪೆನ್ಶನ್.

ಪ್ರಭುಪಾದ: ಹೌದು. ನೀವು ಸ್ವಲ್ಪ ಬೆಂಕಿಯನ್ನು ತನ್ನಿ. ಅದು ತಕ್ಷಣವೇ ಹೊರಟುಹೋಗುತ್ತದೆ. ನೀರನ್ನು ಬೆಂಕಿಯಿಂದ ಓಡಿಸಬಹುದು. ಆದ್ದರಿಂದ ನೀವು ಬೆಂಕಿ ಹಚ್ಚಿ. ನಿಮಗೆ ಸಾಧ್ಯವಿಲ್ಲ. ನೀವು ಕೇವಲ ಒಂದು ಬಾಂಬ್ ಅನ್ನು ಹಾಕಿ. ಸ್ವಲ್ಪ ಶಾಖ ಹುಟ್ಟುತ್ತದೆ, ಮತ್ತು ಎಲ್ಲಾ ಮಂಜು ಮಾಯವಾಗುತ್ತದೆ. ಅದನ್ನು ಮಾಡಿ.

ಕರಂಧರ: ಅದು ಗ್ರಹವನ್ನು ಧ್ವಂಸಮಾಡುತ್ತದೆ. (ನಗು)

ಪ್ರಭುಪಾದ: ಹರೇ ಕೃಷ್ಣ. ನೀರನ್ನು ಬೆಂಕಿಯಿಂದ ಅಥವಾ ಗಾಳಿಯಿಂದ ಪ್ರತಿರೋಧಿಸಬಹುದು. ಎಲ್ಲರಿಗೂ ತಿಳಿದಿದೆ. ಆದ್ದರಿಂದ ನೀವು ಅದನ್ನು ಮಾಡಿ, ಸಸ್ಪೆನ್ಶನ್. ಇದು ನಿಮ್ಮ ಅತೀಂದ್ರಿಯ ಶಕ್ತಿ. ನೀವು ಎಲ್ಲಾ ಅಸಂಬದ್ಧವಾದ ಮಾತನಾಡಬಹುದು, ಆದರೆ ನೀವು ಅದರ ವಿರುದ್ಧ ನಡೆಯಲು ಸಾಧ್ಯವಿಲ್ಲ. ಆದ್ದರಿಂದ ಇದು ಅತೀಂದ್ರಿಯ ಶಕ್ತಿ. ಅದೇ ರೀತಿ, ಎಷ್ಟೋ ವಿಷಯಗಳಿವೆ. ಅದು ಅಚಿಂತ್ಯ ಶಕ್ತಿ. ನೀವು ಯೋಚಿಸಲು ಸಹ ಸಾಧ್ಯವಿಲ್ಲ. ಪ್ರಕೃತಿಯ ಮೂಲಕ, ಸೂರ್ಯ ಉದಯಿಸಿದ ತಕ್ಷಣ ಇನ್ನು ಮಂಜು ಇಲ್ಲ. ಎಲ್ಲಾ ಕೊನೆಯಾತ್ತದೆ. ಸೂರ್ಯನ ಸ್ವಲ್ಪ ತಾಪ ಹೆಚ್ಚಳ, ಎಲ್ಲವೂ ಕೊನೆಯಾತ್ತದೆ. ನೀಹಾರಮ್ ಇವ ಭಾಸ್ಕರಃ. ಈ ಉದಾಹರಣೆಯನ್ನು ಭಾಗವತದಲ್ಲಿ ನೀಡಲಾಗಿದೆ. ನೀಹಾರ, ಇದನ್ನು ನೀಹಾರ ಎಂದು ಕರೆಯಲಾಗುತ್ತದೆ. ನೀಹಾರ ತಕ್ಷಣ ಭಾಸ್ಕರನಿಂದ, ಸೂರ್ಯನಿಂದ ಕರಗಿದಂತೆಯೇ, ಅದೇ ರೀತಿ, ಒಬ್ಬನು ತನ್ನ ಸುಪ್ತ ಭಕ್ತಿಯನ್ನು ಜಾಗೃತಗೊಳಿಸಬಹುದಾದರೆ, ಎಲ್ಲವೂ ಕೊನೆಯಾಗುತ್ತದೆ, ಅವನ ಎಲ್ಲಾ ಪಾಪ ಕಾರ್ಯಗಳ ಪ್ರತಿಕ್ರಿಯೆಯು ಕೊನೆಯಾಗುತ್ತದೆ. ನೀಹಾರಮ್ ಇವ ಭಾಸ್ಕರಃ. ನೀವು ಕೇವಲ ರಚಿಸಿರಿ... ಸೂರ್ಯನು ಈ ರಾಸಾಯನಿಕದ, ಆ ರಾಸಾಯನಿಕದ ಸಂಯೋಜನೆ ಎಂದು ನೀವು ಲೆಕ್ಕ ಹಾಕುತ್ತೀರಿ. ಕೇವಲ ಒಂದು ಸೂರ್ಯನನ್ನು ಸೃಷ್ಠಿಸಿ ಎಸೆಯಿರಿ. ಕೇವಲ ಸೈದ್ಧಾಂತಿಕ ಭವಿಷ್ಯ, ಉಡಾಫೆ , ಪದಗಳ ಜಾಲ, ಅದು ಒಳ್ಳೆಯದಲ್ಲ.

ಸ್ವರೂಪ ದಾಮೋದರ: ಇದು ಸಂಶೋಧನೆಯ ಅರ್ಥವೆಂದರೆ. ಸಂಶೋಧನೆ ಎಂದರೆ ಮೊದಲು ತಿಳಿದಿಲ್ಲದದ್ದನ್ನು ಅರ್ಥಮಾಡಿಕೊಳ್ಳುವುದು.

ಪ್ರಭುಪಾದ: ಹೌದು. ಸಂಶೋಧನೆ ಎಂದರೆ ನೀವೆಲ್ಲರೂ ಮೂರ್ಖರು ಮತ್ತು ದೂರ್ತರು ಎಂದು ಒಪ್ಪಿಕೊಳ್ಳುವುದು. ಸಂಶೋಧನೆ ಯಾರಿಗಾಗಿ? ಯಾರಿಗೆ ಗೊತ್ತಿಲ್ಲವೋ ಅವರಿಗೆ. ಇಲ್ಲದಿದ್ದರೆ ಸಂಶೋಧನೆಯ ಪ್ರಶ್ನೆ ಎಲ್ಲಿದೆ? ನಿಮಗೆ ಗೊತ್ತಿಲ್ಲ. ನೀವು ಅದನ್ನು ಒಪ್ಪಿಕೊಳ್ಳಿ. ಎಷ್ಟೋ ಅತೀಂದ್ರಿಯ ಶಕ್ತಿಗಳಿವೆ. ಅವು ಹೇಗೆ ಸೃಷ್ಟಿಸಲಾಗುತ್ತಿವೆ ಎಂದು ನಿಮಗೆ ತಿಳಿದಿಲ್ಲ. ಆದ್ದರಿಂದ ನೀವು ಅಚಿಂತ್ಯ ಶಕ್ತಿಯನ್ನು ಸ್ವೀಕರಿಸಬೇಕು. ಮತ್ತು ಅಚಿಂತ್ಯ ಶಕ್ತಿಯ ಈ ತತ್ವವನ್ನು ಒಪ್ಪಿಕೊಳ್ಳದೆ, ದೇವರಿಗೆ ಅರ್ಥವಿಲ್ಲ. ಬಾಲ-ಯೋಗಿ ಭಗವಂತನಾದ ಹಾಗಲ್ಲ. ಆದ್ದರಿಂದ ಇವು ದೂರ್ತರು, ಮೂರ್ಖರಿಗೆ. ಆದರೆ ಬುದ್ಧಿವಂತರು, ಅವರು ಅಚಿಂತ್ಯ ಶಕ್ತಿಯನ್ನು ಪರೀಕ್ಷಿಸುತ್ತಾರೆ. ನಾವು ಕೃಷ್ಣನನ್ನು ದೇವರು - ಅಚಿಂತ್ಯ ಶಕ್ತಿ ಎಂದು ಸ್ವೀಕರಿಸಿದಂತೆ. ನಾವು ರಾಮ - ಅಚಿಂತ್ಯ ಶಕ್ತಿಯೆಂದು ಸ್ವೀಕರಿಸುತ್ತೇವೆ. ಅಷ್ಟು ಅಗ್ಗವಾಗಿ ಅಲ್ಲ. ಒಬ್ಬ ದೂರ್ತ ಬಂದು, "ನಾನು ದೇವರ ಅವತಾರ" ಎಂದು ಹೇಳುತ್ತಾನೆ. ಇನೊಬ್ಬ ದೂರ್ತ ಒಪ್ಪಿಕೊಳ್ಳುತ್ತಾನೆ. ಅದು ಹಾಗೆ ಅಲ್ಲ. "ರಾಮಕೃಷ್ಣ ದೇವರು.” ನಾವು ಒಪ್ಪುವುದಿಲ್ಲ. ನಾವು ಅಚಿಂತ್ಯ ಅತೀಂದ್ರಿಯ ಶಕ್ತಿಯನ್ನು ನೋಡಬೇಕು. ಕೃಷ್ಣನಂತೆಯೇ, ಬಾಲ್ಯದಲ್ಲಿ, ಬೆಟ್ಟವನ್ನು ಎತ್ತಿದನು. ಇದು ಅಚಿಂತ್ಯವಾದ ಅತೀಂದ್ರಿಯ ಶಕ್ತಿ. ರಾಮಚಂದ್ರ, ಅವನು ಕಂಬವಿಲ್ಲದ ಕಲ್ಲಿನ ಸೇತುವೆಯನ್ನು ನಿರ್ಮಿಸಿದನು. ಕಲ್ಲು ತೇಲಿತು: "ಬನ್ನಿ.” ಆದ್ದರಿಂದ ಅದು ಅಚಿಂತ್ಯ ಶಕ್ತಿ. ಈ ಅಚಿಂತ್ಯ ಶಕ್ತಿಯನ್ನು ನೀವು ಒಪ್ಪಿಕೊಳ್ಳಲು ಸಾಧ್ಯವಿಲ್ಲದ ಕಾರಣ, ಅವುಗಳನ್ನು ವಿವರಿಸಿದಾಗ, "ಓಹ್, ಇವೆಲ್ಲವೂ ಬರಿ ಕಥೆಗಳು", ಎಂದು ಹೇಳುತ್ತೀರಿ. ಏನೆಂದು ಕರೆಯಲಾಗುತ್ತದೆ? ಕಟ್ಟುಕಥೆ. ಅಂದರೆ ಈ ಮಹಾನ್ ಋಷಿಮುನಿಗಳು, ವಾಲ್ಮಾಕಿ ಮತ್ತು ವ್ಯಾಸದೇವ, ಮತ್ತು ಇತರ ಆಚಾರ್ಯರು, ಅವರು ಕಟ್ಟುಕಥೆಗಳನ್ನು ಬರೆಯುವಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡಿದರೆ? ಅಂತಹ ಮಹಾನ್ ವಿದ್ವಾಂಸರು? ಮತ್ತು ಅದು ಕಟ್ಟುಕಥೆಯೆಂದು ಅವರು ವ್ಯಾಖ್ಯಾನಿಸಲಿಲ್ಲ. ಅವರು ಅದನ್ನು ಸತ್ಯವೆಂದು ಒಪ್ಪಿಕೊಂಡಿದ್ದಾರೆ. ಒಮ್ಮೆ ಕಾಡ್ಗಿಚು ಹರಡಿತು. ಎಲ್ಲಾ ಸ್ನೇಹಿತರು ಮತ್ತು ದನಕಾಯುವ ಹುಡುಗರು ವ್ಯಾಕುಲರಾದರು. ಅವರು ಕೃಷ್ಣನ ಕಡೆಗೆ ನೋಡಲಾರಂಭಿಸಿದರು: "ಕೃಷ್ಣ, ಏನು ಮಾಡಬೇಕು?" "ಸರಿ.” ಅವನು ಸುಮ್ಮನೆ ಇಡೀ ಬೆಂಕಿಯನ್ನು ನುಂಗಿದನು. ಇದು ಅಚಿಂತ್ಯ ಅತೀಂದ್ರಿಯ ಶಕ್ತಿ ಎಂದರೆ. ಇದು ದೇವರು ಎಂದರೆ. ಐಶ್ವರ್ಯಸ್ಯ ಸಮಗ್ರಸ್ಯ ವೀರ್ಯಸ್ಯ ಯಶಸಃ ಶ್ರೀಯ (ವಿಷ್ಣು ಪುರಾಣ 6.5.47). ಈ ಆರು ಐಶ್ವರ್ಯಗಳು ಅವನಲ್ಲಿ ಸಂಪೂರ್ಣವಾಗಿದೆ. ಅವನು ಭಗವಂತ ಎಂದರೆ. ಆ ಅಚಿಂತ್ಯ ಶಕ್ತಿ ಅಥವಾ ಅತೀಂದ್ರಿಯ ಶಕ್ತಿ, ನಮಲ್ಲಿಯೂ ಇದೆ. ಆದರೆ ಬಹಳ ಚಿಕ್ಕ ಪ್ರಮಾಣದಲ್ಲಿ. ನಮ್ಮ ದೇಹದೊಳಗೆ ಅನೇಕ ವಿಷಯಗಳು ನಡೆಯುತ್ತಿವೆ. ನಾವು ವಿವರಿಸಲು ಸಾಧ್ಯವಿಲ್ಲ. ಅದೇ ಉದಾಹರಣೆ. ನನ್ನ ಉಗುರುಗಳು ಒಂದು ಖಚಿತವಾದ ರೂಪದಲ್ಲಿ ಬೆಳೆಯುತ್ತಿವೆ. ಇದು ರೋಗದಿಂದ ಹಾಳಾಗಿದ್ದರೂ, ಮತ್ತೆ ಬೆಳೆಯುತ್ತಿದೆ. ಒಳಗೆ ಯಂತ್ರೋಪಕರಣಗಳು ಹೇಗೆ ಕೆಲಸ ಮಾಡುತ್ತಿದೆ ಎಂದು ನನಗೆ ತಿಳಿದಿಲ್ಲ, ಆದರೆ ಉಗುರು ಅದರ ಜಾಗಕ್ಕೆ, ಮತ್ತು ಎಲ್ಲ ರೀತಿಯಲೂ ಖಚಿತವಾಗಿ ಹೊಂದಿಕೊಂಡು ಬೆಳೆಯುತ್ತಿದೆ. ಅದು ನನ್ನ ದೇಹದಿಂದ ಬೆಳೆಯುತ್ತಿದೆ. ಆದ್ದರಿಂದ ಅದು ಅತೀಂದ್ರಿಯ ಶಕ್ತಿ. ಇದು ನನಗೆ ಮತ್ತು ವೈದ್ಯರಿಗೆ, ಹಾಗು ಎಲ್ಲರಿಗೂ ಅತೀಂದ್ರಿಯ ಶಕ್ತಿಯಾಗಿದೆ... ಅವರು ವಿವರಿಸಲು ಸಾಧ್ಯವಿಲ್ಲ.