KN/Prabhupada 0121 - ಕಟ್ಟಕಡೆಗೆ ಕೃಷ್ಣನೆ ಕಾರ್ಯನಿರ್ವಹಿಸುತ್ತಿರುವುದು



Morning Walk At Cheviot Hills Golf Course -- May 17, 1973, Los Angeles

ಕೃಷ್ಣಕಾಂತಿ: ಮಾನವನ ಮೆದುಳಿನ ಸಂಕೀರ್ಣ ಸ್ವರೂಪವನ್ನು ಕಂಡು ವೈದ್ಯರು ಆಶ್ಚರ್ಯ ಪಡುತ್ತಿದ್ದಾರೆ.

ಪ್ರಭುಪಾದ: ಹೌದು. ಹೌದು.

ಕೃಷ್ಣಕಾಂತಿ: ಅವರು ಆಶ್ಚರ್ಯಚಕಿತರಾಗಿದ್ದಾರೆ.

ಪ್ರಭುಪಾದ: ಆದರೆ ಅವರು ದೂರ್ತರು. ಕಾರ್ಯನಿರ್ವಹಿಸುತ್ತಿರುವುದು ಮೆದುಳಲ್ಲ. ಕಾರ್ಯನಿರ್ವಹಿಸುತ್ತಿರುವುದು ಆತ್ಮ. ಕಂಪ್ಯೂಟರ್ ತರಹ. ಕಂಪ್ಯೂಟರ್ ಯಂತ್ರವು ಕೆಲಸ ಮಾಡುತ್ತಿದೆ ಎಂದು ದೂರ್ತನು ಭಾವಿಸುತ್ತಾನೆ. ಇಲ್ಲ. ಕೆಲಸ ಮಾಡುತ್ತಿರುವವನು ಒಬ್ಬ ಮನುಷ್ಯ. ಅವನು ಬಟನ್ ಅನ್ನು ಒತ್ತುತಾನೆ, ಆಗ ಅದು ಸಕ್ರಿಯವಾಗುತ್ತದೆ. ಇಲ್ಲದಿದ್ದರೆ, ಈ ಯಂತ್ರದ ಮೌಲ್ಯವೇನು? ನೀವು ಆ ಯಂತ್ರವನ್ನು ಸಾವಿರಾರು ವರ್ಷಗಳು ಇಟ್ಟುಕೊಂಡರೂ ಅದು ಕಾರ್ಯಾತ್ಮಕವಾಗುವುದಿಲ್ಲ. ಇನ್ನೊಬ್ಬ ವ್ಯಕ್ತಿ ಬಂದು, ಬಟನ್ ಅನ್ನು ಒತ್ತಿದರೆ ಆಗ ಅದು ಕೆಲಸ ಮಾಡುತ್ತದೆ. ಹಾಗಾದರೆ ಯಾರು ಕೆಲಸ ಮಾಡುತ್ತಿದ್ದಾರೆ? ಯಂತ್ರ ಕೆಲಸ ಮಾಡುತ್ತಿದೆಯೇ ಅಥವಾ ಮನುಷ್ಯ ಕೆಲಸ ಮಾಡುತ್ತಿದ್ದಾನೆಯೇ? ಮನುಷ್ಯ ಕೂಡ ಮತ್ತೊಂದು ಯಂತ್ರ. ಪರಮಾತ್ಮ, ಭಗವಂತನ ಉಪಸ್ಥಿತಿಯಿಂದ ಇದು ಕೆಲಸ ಮಾಡುತ್ತಿದೆ. ಆದ್ದರಿಂದ, ಮೂಲತಃ ದೇವರು ಕೆಲಸ ಮಾಡುತ್ತಿದ್ದಾನೆ. ಒಬ್ಬ ಮೃತ ವ್ಯಕ್ತಿ ಕೆಲಸ ಮಾಡಲು ಸಾಧ್ಯವಿಲ್ಲ. ಹಾಗಾದರೆ ಮನುಷ್ಯ ಎಷ್ಟು ದಿನ ಬದುಕಿರುತ್ತಾನೆ? ಪರಮಾತ್ಮನು ಎಲ್ಲಿಯವರಗೆ ಇರುತ್ತಾನೋ, ಆತ್ಮವು ಎಲ್ಲಿಯವರಗೆ ಇರುತ್ತದೆಯೋ ಅಲ್ಲಿಯವರಗೆ. ಆತ್ಮ ಇದ್ದರೂ ಪರಮಾತ್ಮನು ಅವನಿಗೆ ಬುದ್ಧಿವಂತಿಕೆಯನ್ನು ನೀಡದಿದ್ದರೆ, ಅವನು ಕಾರ್ಯಾತ್ಮಕವಾಗಲು ಸಾಧ್ಯವಿಲ್ಲ. ಮತ್ತಃ ಸ್ಮೃತಿರ್ ಜ್ಞಾನಂ ಅಪೋಹನಮ್ ಚ (ಭ.ಗೀ 15.15). "ನೀನು ಈ ಬಟನ್ ಅನ್ನು ಒತ್ತು", ಎಂದು ದೇವರು ನನಗೆ ಬುದ್ಧಿವಂತಿಕೆಯನ್ನು ನೀಡುತ್ತಿದ್ದಾನೆ. ಆಗ ನಾನು ಈ ಬಟನ್ ಅನ್ನು ಒತ್ತಿದೆ. ಆದ್ದರಿಂದ, ಕಟ್ಟಕಡೆಗೆ ಕೃಷ್ಣನೆ ಕಾರ್ಯನಿರ್ವಹಿಸುತ್ತಿದ್ದಾನೆ. ಇನ್ನೊಬ್ಬ, ತರಬೇತಿ ಪಡೆಯದ ವ್ಯಕ್ತಿ ಆ ಕೆಲಸ ಮಾಡಲು ಸಾಧ್ಯವಿಲ್ಲ ಏಕೆಂದರೆ ಬುದ್ಧಿವಂತಿಕೆ ಇಲ್ಲ. ಆದರೆ ತರಬೇತಿ ಪಡೆದ ಒಬ್ಬ ವ್ಯಕ್ತಿ ಆ ಕೆಲಸ ಮಾಡಬಹುದು. ಈ ವಿಷಯಗಳು ನಡೆಯುತ್ತಿವೆ. ಅಂತಿಮವಾಗಿ ಎಲ್ಲವು ಕೃಷ್ಣನ ಬಳಿ ಸೇರುತ್ತವೆ. ನೀವು ಏನು ಸಂಶೋಧನೆ ಮಾಡುತ್ತಿದ್ದೀರಿ, ಏನು ಮಾತನಾಡುತ್ತಿದ್ದೀರಿ, ಅದು ಸಹ ಕೃಷ್ಣನೆ ಮಾಡುತ್ತಿದ್ದಾನೆ. ಕೃಷ್ಣ ನಿಮಗೆ ನೀಡುತ್ತಿದ್ದಾನೆ... ನೀವು, ಕೃಷ್ಣನನ್ನು ಈ ಸೌಲಭ್ಯಕ್ಕಾಗಿ ಪ್ರಾರ್ಥಿಸಿದ್ದೀರಿ. ಕೃಷ್ಣ ನಿಮಗೆ ನೀಡುತ್ತಿದ್ದಾನೆ. ಕೆಲವೊಮ್ಮೆ ಪ್ರಯೋಗ ಆಕಸ್ಮಿಕವಾಗಿ ಯಶಸ್ವಿಯಾಗುವುದನ್ನು ನೀವು ನೋಡಬಹುದು. ಆದ್ದರಿಂದ ನೀವು ಪ್ರಯೋಗಗಳಲ್ಲಿ ತುಂಬಾ ಬೆಸರವಾಗಿದ್ದೀರಿ ಎಂದು ಕೃಷ್ಣ ನೋಡಿದಾಗ, "ಸರಿ ಮಾಡಿ”, ಎನ್ನುತ್ತಾನೆ. ತಾಯಿ ಯಶೋದೆ ಕೃಷ್ಣನನ್ನು ಕಟ್ಟಿಹಾಕಲು ಪ್ರಯತ್ನಿಸುತ್ತಿದ್ದಳು, ಆದರೆ ಸಾಧ್ಯವಾಗಲಿಲ್ಲ. ಆದರೆ ಕೃಷ್ಣನು ಒಪ್ಪಿದಾಗ, ಅದು ಸಾಧ್ಯವಾಯಿತು. ಅಂತೆಯೇ, ಈ ಆಕಸ್ಮಿಕ ಸಾಫಲ್ಯ ಎಂದರೆ ಕೃಷ್ಣ ನಿಮಗೆ ಸಹಾಯ ಮಾಡುತ್ತಿದ್ದಾನೆಂದು ಅರ್ಥ: "ಸರಿ, ನೀವು ತುಂಬಾ ಶ್ರಮಿಸಿದ್ದೀರಿ, ಈ ಫಲಿತಾಂಶ ಪಡೆಯಿರಿ.” ಕೃಷ್ಣನೆ ಸರ್ವಸ್ವ. ಮತ್ತಃ ಸರ್ವಂ ಪ್ರವರ್ತತೆ (ಭ.ಗೀ 10.8). ಇದನ್ನು ವಿವರಿಸಲಾಗಿದೆ. ಮತ್ತಃ ಸ್ಮೃತಿರ್ ಜ್ಞಾನಮ್ ಅಪೋಹನಂ ಚ (ಭ.ಗೀ 15.15). ಸಮಸ್ತವೂ ಕೃಷ್ಣನಿಂದಲೆ.

ಸ್ವರೂಪ ದಾಮೋದರ: ಅವರು ಹೇಳುತ್ತಾರೆ, "ಪ್ರಯೋಗಗಳನ್ನು ಹೇಗೆ ಮಾಡಬೇಕೆಂದು ಕೃಷ್ಣ ನನಗೆ ಸರಿಯಾದ ಕ್ರಮಗಳನ್ನು ತಿಳಿಸಿಲ್ಲ."

ಪ್ರಭುಪಾದ: ಹೌದು, ಅವನು ನೀಡುತ್ತಿದ್ದಾನೆ. ಇಲ್ಲದಿದ್ದರೆ ನೀವು ಅದನ್ನು ಹೇಗೆ ಮಾಡುತ್ತಿದ್ದೀರಿ. ನೀವು ಏನು ಮಾಡುತ್ತಿದ್ದರೂ, ಅದು ಕೃಷ್ಣನ ಅನುಗ್ರಹದಿಂದ. ಮತ್ತು ನೀವು ಇನ್ನೂ ಹೆಚ್ಚು ಒಲವು ತೋರಿದರೆ, ಅವನು ನಿಮಗೆ ಹೆಚ್ಚಿನ ಸೌಲಭ್ಯಗಳನ್ನು ನೀಡುತ್ತಾನೆ. ಕೃಷ್ಣ ನಿಮಗೆ ಸೌಲಭ್ಯವನ್ನು ನೀಡುತ್ತಾನೆ, ಅನುಗ್ರಹಿಸುತ್ತಾನೆ, ನೀವು ಬಯಸಿದಷ್ಟು, ಅದಕ್ಕಿಂತ ಜಾಸ್ತಿಯಲ್ಲ. ಯೇ ಯಥಾ ಮಾಮ್ ಪ್ರಪದ್ಯಂತೇ ತಾಮ್ಸ್ ತಥೈವ... ನೀವು ಯಾವ ಪ್ರಮಾಣದಲ್ಲಿ ಕೃಷ್ಣನಿಗೆ ಶರಣಾಗುತ್ತೀರೋ, ಅಷ್ಡೇ ಬುದ್ಧಿವಂತಿಕೆ ಪಡೆಯುವಿರಿ. ನೀವು ಸಂಪೂರ್ಣವಾಗಿ ಶರಣಾದರೆ, ಸಂಪೂರ್ಣ ಬುದ್ಧಿವಂತಿಕೆ ಸಿಗುತ್ತದೆ ಇದನ್ನು ಭಗವದ್ಗೀತೆಯಲ್ಲಿ ಹೇಳಲಾಗಿದೆ. ಯೇ ಯಥಾ ಮಾಮ್ ಪ್ರಪದ್ಯಂತೇ ತಾಮ್ಸ್ ತಥೈವ ಭಜಾಮಿ ಅಹಮ್ (ಭ.ಗೀ 4.11).