KN/Prabhupada 0123 - ಶರಣಾಗಲು ಒತ್ತಾಯ – ಅದು ವಿಶೇಷ ಅನುಗ್ರಹ
Lecture-Day after Sri Gaura-Purnima -- Hawaii, March 5, 1969
ಭಕ್ತ: ನಮ್ಮ ಬದ್ದತೆಯಿಂದಾಗಿ, ನಮ್ಮನ್ನು ಬಲವಂತವಾಗಿ ಶರಣಾಗತರನ್ನಾಗಿ ಮಾಡುವಂತೆ ನಾವು ಕಷ್ಣನನ್ನು ವಿನಂತಿಸಬಹುದೇ?
ಪ್ರಭುಪಾದ: ಹೌದು, ನೀವು ಆತನನ್ನು ಕೋರಬಹುದು. ಮತ್ತು ಕೆಲವೊಮ್ಮೆ ಅವನೇ ಒತ್ತಾಯಿಸುತ್ತಾನೆ. ಕೃಷ್ಣನಿಗೆ ಶರಣಾಗುವುದನ್ನು ಬಿಟ್ಟು ಬೇರೆ ದಾರಿಯೇ ಇಲ್ಲ ಎಂಬುವಂತಹ ಪರಿಸ್ಥಿತಿಯಲ್ಲಿ ಅವನು ನಿಮ್ಮನ್ನು ಇರಿಸುತ್ತಾನೆ. ಹೌದು. ಅದು ವಿಶೇಷ ಅನುಗ್ರಹ. ಅದು ವಿಶೇಷ ಅನುಗ್ರಹ. ಹೌದು. ನನ್ನ ಆಧ್ಯಾತ್ಮಿಕ ಗುರುವು ನಾನು ಬೋಧಿಸಬೇಕೆಂದು ಬಯಸಿದರು, ಆದರೆ ನನಗೆ ಅದು ಇಷ್ಟವಿರಲಿಲ್ಲ, ಆದರೆ ಅವರು ನನ್ನನ್ನು ಒತ್ತಾಯಿಸಿದರು. ಹೌದು. ಅದು ನನ್ನ ನೈಜ ಅನುಭವ. ಸನ್ಯಾಸವನ್ನು ಸ್ವೀಕರಿಸಲು ಮತ್ತು ಬೋಧಿಸಲು ನನಗೆ ಯಾವುದೇ ಆಸೆ ಇರಲಿಲ್ಲ, ಆದರೆ ನನ್ನ ಆಧ್ಯಾತ್ಮಿಕ ಗುರುವು ಅದನ್ನು ಬಯಸಿದರು. ನನಗೆ ಹೆಚ್ಚು ಒಲವಿರಲಿಲ್ಲ, ಆದರೆ ಅವರು ನನ್ನನ್ನು ಒತ್ತಾಯಿಸಿದರು. ಅದನ್ನೂ ಮಾಡಲಾಗುತ್ತದೆ. ಅದು ವಿಶೇಷ ಅನುಗ್ರಹ. ಅವರು ನನ್ನನ್ನು ಒತ್ತಾಯಿಸಿದಾಗ, ಆ ಸಮಯದಲ್ಲಿ, "ಏನಿದು? ಏನು...? ನಾನು ಏನಾದರೂ ತಪ್ಪು ಮಾಡುತ್ತಿರುವೆನೇ, ಅಥವಾ ಬೇರೇನು?", ನನಗೆ ಗೊಂದಲವಾಯಿತು. ಆದರೆ ಸ್ವಲ್ಪ ಸಮಯದ ನಂತರ, ನನಗೆ ತೋರಿಸಿದ ದೊಡ್ಡ ಅನುಗ್ರಹ ಅದು ಎಂದು ನಾನು ಅರ್ಥಮಾಡಿಕೊಂಡೆ. ನೋಡಿದಿರ? ಆದ್ದರಿಂದ ಕೃಷ್ಣ ಯಾರನ್ನಾದರು ಶರಣಾಗುವಂತೆ ಒತ್ತಾಯಿಸಿದಾಗ, ಅದು ದೊಡ್ಡ ಅನುಗ್ರಹ. ಸಾಮಾನ್ಯವಾಗಿ, ಅವನು ಹಾಗೆ ಮಾಡುವುದಿಲ್ಲ. ಆದರೆ ಅವನು ಯಾರಿಗೆ ಹಾಗೆ ಮಾಡುತ್ತಾನೆಂದರೆ ಕೃಷ್ಣ ಸೇವೆಯಲ್ಲಿ ತುಂಬಾ ಪ್ರಾಮಾಣಿಕನಾಗಿರುವ, ಆದರೆ ಅದೇ ಸಮಯದಲ್ಲಿ ಭೌತಿಕ ತೃಪ್ತಿಗಾಗಿ ಸ್ವಲ್ಪ ಆಸೆ ಇರುವವನಿಗೆ. ಅಂತ ಸಂದರ್ಭದಲ್ಲಿ ಅವನು ಹೀಗೆ ಮಾಡುತ್ತಾನೆ, "ಈ ಮೂರ್ಖ ವ್ಯಕ್ತಿಗೆ ಭೌತಿಕ ಸೌಲಭ್ಯಗಳು ಎಂದಿಗೂ ಸಂತೋಷ ನೀಡುವುದಿಲ್ಲ ಎಂದು ತಿಳಿದಿಲ್ಲ, ಮತ್ತು ಅವನು ಪ್ರಾಮಾಣಿಕವಾಗಿ ನನ್ನ ಅನುಗ್ರಹವನ್ನು ಬಯಸುತ್ತಿದ್ದಾನೆ. ಆದ್ದರಿಂದ ಅವನು ಮೂರ್ಖನು. ಆದ್ದರಿಂದ ಯಾವುದೇ ಅಲ್ಪಸ್ವಲ್ಪ ಸಂಪನ್ಮೂಲ, ಭೌತಿಕ ಆನಂದಕ್ಕಾಗಿ ಅವನಿಗೆ ಸಿಕ್ಕಿರುವುದೋ ಅದನ್ನು ತಗೆದು ಹಾಕುತ್ತೇನೆ. ಆಗ ನನಗೆ ಶರಣಾಗುವುದನ್ನು ಬಿಟ್ಟು ಅವನಿಗೆ ಬೇರೆ ವಿಕಲ್ಪವಿಲ್ಲ.” ಅದನ್ನು ಭಗವದ್ಗೀತೆ, ಅಲ್ಲ, ಶ್ರೀಮದ್ ಭಾಗವತಂನಲ್ಲಿ ಹೇಳಲಾಗಿದೆ. ಯಸ್ಯಾಹಮ್ ಅನುಘ್ರನಾಮಿ ಹರಿಷ್ಯೇ ತದ್-ಧನಂ ಸನೈಃ (ಶ್ರೀ.ಭಾ 10.88.8). ಕೃಷ್ಣ ಹೇಳುತ್ತಾನೆ, “ನಾನು ಯಾರಿಗಾದರು ವಿಶೇಷ ಅನುಗ್ರಹ ನೀಡಿದರೆ ಅವನನ್ನು ಬಡತನದಿಂದ ಬಳಳುವಂತೆ ಮಾಡುತ್ತೇನೆ. ಅವನ ಎಲ್ಲಾ ಇಂದ್ರಿಯ ತೃಪ್ತಿಯನ್ನು ನಾನು ತೆಗೆದು ಬಿಡುತ್ತೇನೆ.” ನೋಡಿದಿರ? ಅದನ್ನು ಶ್ರೀಮದ್ ಭಾಗವತಂನಲ್ಲಿ ಹೇಳಲಾಗಿದೆ. ಏಕೆಂದರೆ ಇಲ್ಲಿ, ಈ ಭೌತಿಕ ಜಗತ್ತಿನಲ್ಲಿ, ಪ್ರತಿಯೊಬ್ಬರೂ ವ್ಯವಹಾರದಿಂದ, ಸೇವೆಯ ಮೂಲಕ, ವಿಭಿನ್ನ ರೀತಿಯಲ್ಲಿ ಹೆಚ್ಚು ಹಣವನ್ನು ಸಂಪಾದಿಸುವ ಮೂಲಕ, ಸಂತೋಷವಾಗಿರಲು ಪ್ರಯತ್ನಿಸುತ್ತಿದ್ದಾರೆ. ಆದರೆ ವಿಶೇಷ ಸಂದರ್ಭಗಳಲ್ಲಿ ಕೃಷ್ಣ ತನ್ನ ವ್ಯವಹಾರ ಅಥವಾ ಸೇವೆಯನ್ನು ವಿಫಲಗೊಳಿಸುತ್ತಾನೆ. ನಿಮಗೆ ಅದು ಇಷ್ಟಾನಾ? (ನಗುತ್ತಾರೆ) ಆ ಸಮಯದಲ್ಲಿ ಕೃಷ್ಣನಿಗೆ ಶರಣಾಗುವುದನ್ನು ಬಿಟ್ಟು ಅವನಿಗೆ ಬೇರೆ ವಿಕಲ್ಪವಿಲ್ಲ. ನೋಡಿದಿರ? ಆದರೆ ಕೆಲವೊಮ್ಮೆ, ನಮ್ಮ ವ್ಯವಹಾರದಲ್ಲಿ ಅಥವಾ ಹಣಗಳಿಸುವ ಪ್ರಯತ್ನದಲ್ಲಿ ನಾವು ವಿಫಲರಾದಾಗ, "ಓಹ್, ಕೃಷ್ಣ ನನ್ನ ಬಗ್ಗೆ ಎಷ್ಟು ಕಠೋರವಾಗಿದ್ದಾನೆ ಎಂದರೆ ನಾನು ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ", ಎಂದು ನಾವು ವಿಷಾದಿಸುತ್ತೇವೆ. ಆದರೆ ಅದು ಅವನ ಅನುಗ್ರಹ, ವಿಶೇಷ ಅನುಗ್ರಹ. ನೀವು ಹಾಗೆ ಅರ್ಥಮಾಡಿಕೊಳ್ಳಬೇಕು.