KN/Prabhupada 0122 - ಈ ದೂರ್ತರು, “ನಾನು ಈ ದೇಹ’ ಎಂದು ಭಾವಿಸುತ್ತಾರೆ
Morning Walk At Cheviot Hills Golf Course -- May 17, 1973, Los Angeles
ಪ್ರಭುಪಾದ: "ನೀನು ಸಂಪೂರ್ಣವಾಗಿ ಶರಣಾಗು, ನಾನು ನಿನಗೆ ಸಂಪೂರ್ಣ ರಕ್ಷಣೆ ನೀಡುತ್ತೇನೆ", ಎಂದು ಕೃಷ್ಣ ಹೇಳುತ್ತಾನೆ. ಅಹಂ ತ್ವಾಂ ಸರ್ವ ಪಾಪೇಭ್ಯೋ ಮೋಕ್ಷಯಿಷ್ಯಾಮಿ (ಭ.ಗೀ 18.66). ಅವನು ನಿನಗೆ ಸಂಪೂರ್ಣ ಬುದ್ಧಿಯನ್ನು ನೀಡುತ್ತಾನೆ. (ಬ್ರೇಕ್)... ವೈಜ್ಞಾನಿಕ ಜಗತ್ತು ಒಪ್ಪಿಕೊಂಡಾಗ ಅದು ನಮ್ಮ ದೊಡ್ಡ ಯಶಸ್ಸು. ಅವರು ಕೇವಲ ಒಪ್ಪಿಕೊಳ್ಳಲಿ. ಆಗ ನಮ್ಮ ಕೃಷ್ಣ ಪ್ರಜ್ಞೆ ಆಂದೋಲನವು ಉತ್ತಮ ಯಶಸ್ಸನ್ನು ಪಡೆಯುತ್ತದೆ. "ಹೌದು, ದೇವರಿದ್ದಾನೆ, ಮತ್ತು ಅಲೌಕಿಕ ಶಕ್ತಿ ಇದೆ", ಎಂದು ನೀವು ಕೇವಲ ಒಪ್ಪಿಕೊಳ್ಳಿರಿ. ಆಗ ನಮ್ಮ ಆಂದೋಲನ ಬಹಳ ಯಶಸ್ವಿಯಾಗಿದೆ ಎಂದರ್ಥ. ಅದೇ ಸತ್ಯ. ಮೂರ್ಖರ ನಡುವೆ ಸುಮ್ಮನೆ ಅಸಂಬದ್ಧವಾಗಿ ಮಾತನಾಡುವುದು, ಅದು ಹೆಮ್ಮೆಪಡುವ ವಿಷಯವಲ್ಲ. ಅಂಧಾ ಯಥಾಂಧೈರ್ ಉಪನೀಯಮಾನಾಃ (ಶ್ರೀ.ಭಾ 7.5.31). ಒಬ್ಬ ಕುರುಡನು ಇನ್ನೊಬ್ಬ ಕುರುಡನನ್ನು ಮುಂನಡೆಸುತ್ತಿದ್ದಾನೆ. ಅಂತಹವರ ಮೌಲ್ಯವೇನು? ಅವರೆಲ್ಲರೂ ಕುರುಡರು. ಮತ್ತು ಒಬ್ಬನು ಎಷ್ಟು ದಿನ ಕುರುಡನಾಗಿ ಮತ್ತು ದೂರ್ತನಾಗಿರುತ್ತಾನೋ, ಅವನು ದೇವರನ್ನು ಸ್ವೀಕರಿಸುವುದಿಲ್ಲ. ಇದೇ ಪರೀಕ್ಷೆ. ಅವನು ದೇವರನ್ನು ಸ್ವೀಕರಿಸುವುದಿಲ್ಲ ಎಂದು ತಿಳಿದ ತಕ್ಷಣ, ಅವನು ಕುರುಡ, ದೂರ್ತ, ಮೂರ್ಖ - ನೀವು ಹೇಗೆಬೇಕಾದರು ಕರೆಯಬಹುದು. ಅವನು ಏನೇ ಆಗಿರಲಿ, ಅವನು ಒಬ್ಬ ದೂರ್ತ ಎಂದು ತಿಳಿಯಿರಿ. ಈ ತತ್ತ್ವದ ಆಧಾರದ ಮೇಲೆ ನಾವು ಅನೇಕ ಹೆಸರಾಂತ ರಸಾಯನಶಾಸ್ತ್ರಜ್ಞ, ತತ್ವಜ್ಞ, ಯಾರೇ ನಮ್ಮ ಬಳಿಗೆ ಬಂದರು ನಾವು ಸವಾಲು ಹಾಕಬಹುದು. "ನೀನು ರಾಕ್ಷಸ", ಎಂದು ನಾವು ಹೇಳುತ್ತೇವೆ. ಒಬ್ಬ ರಸಾಯನಶಾಸ್ತ್ರಜ್ಞ ಬಂದನು, ನೀನು ಅವನನ್ನು ಕರೆತಂದಿದ್ದೆ, ಆ ಭಾರತೀಯ?
ಸ್ವರೂಪ ದಾಮೋದರ: ಹಂ. ಚೌರಿ (?)
ಪ್ರಭುಪಾದ: ಚೌರಿ. (ನಗುತ್ತಾ) ಅವನಿಗೆ "ನೀನು ರಾಕ್ಷಸ" ಎಂದು ಹೇಳಿದೆ. ಆದರೆ ಅವನಿಗೆ ಕೋಪ ಬರಲಿಲ್ಲ. ಅವನು ಒಪ್ಪಿಕೊಂಡನು. ಮತ್ತು ಅವನ ಎಲ್ಲಾ ವಾದವನ್ನು ಸೋಲ್ಲಿಸಲಾಯಿತು. ಬಹುಶಃ ನಿನಗೆ ನೆನಪಿರಬಹುದು.
ಸ್ವರೂಪ ದಾಮೋದರ: ಹೌದು, ವಾಸ್ತವವಾಗಿ, "ಕೃಷ್ಣ ನನಗೆ ಎಲ್ಲಾ ಕಾರ್ಯವಿಧಾನಗಳನ್ನು ಮತ್ತು ಕ್ರಮಗಳನ್ನು ಕೊಡಲಿಲ್ಲ, ಪ್ರಯೋಗವನ್ನು ಹೇಗೆ ಮಾಡಲಿಲ್ಲ", ಎಂದು ಹೇಳುತ್ತಿದ್ದರು. ಅವನು ಹಾಗೆ ಹೇಳುತ್ತಿದ್ದ.
ಪ್ರಭುಪಾದ: ಹೌದು. ನಾನು ನಿನಗೆ ಏಕೆ ಕೊಡಲಿ? ನೀನು ದೂರ್ತ, ಕೃಷ್ಣನ ವಿರೋಧಿ. ಕೃಷ್ಣ ನಿನಗೆ ಸೌಲಭ್ಯವನ್ನು ಏಕೆ ನೀಡುತ್ತಾನೆ? ನೀನು ಕೃಷ್ಣನಿಗೆ ವಿರುದ್ಧವಾಗಿದ್ದು, ಕೃಷ್ಣನನ್ನು ದೂರವಿಟ್ಟು ಬರಿ ಗೌರವವನ್ನು ಬಯಸಿದರೆ ಅದು ಸಾಧ್ಯವಿಲ್ಲ. ನೀನು ಮೊದಲು ವಿಧೇಯನಾಗಿರಬೇಕು. ಆಗ ಕೃಷ್ಣ ನಿನಗೆ ಎಲ್ಲ ಸೌಲಭ್ಯಗಳನ್ನು ನೀಡುತ್ತಾನೆ. ಯಾರೇ ಆಗಿರಲಿ - ರಸಾಯನಶಾಸ್ತ್ರಜ್ಞ, ವಿಜ್ಞಾನಿ, ದಾರ್ಶನಿಕ - ನಾವು ಧೈರ್ಯವಾಗಿ ಎದುರಿಸುತ್ತೇವೆ. ಹೇಗೆ? ಕೃಷ್ಣನಿರುವ ಧೈರ್ಯದ ಮೇಲೆ, "ಕೃಷ್ಣ ಇದ್ದಾನೆ. ನಾವು ಅವನೊಂದಿಗೆ ಮಾತನಾಡುವಾಗ, ಕೃಷ್ಣ ನಮಗೆ ಬುದ್ಧಿವಂತಿಕೆಯನ್ನು ನೀಡುತ್ತಾನೆ", ಎಂದು ನಾವು ನಂಬುತ್ತೇವೆ. ಇದೇ ಮೂಲಭೂತ ವಿಷಯ. ಇಲ್ಲದಿದ್ದರೆ, ಅರ್ಹತೆ, ಸ್ಥಾನ, ಇದರ ಆಧಾರದ ಮೇಲೆ ನೋಡಿದರೆ ಅವರು ತುಂಬ ಅರ್ಹರು. ನಾವು ಅವರ ಮುಂದೆ ಸಾಧಾರಣ ಜನಸಾಮಾನ್ಯರು. ನಾವು ಅವರಿಗೆ ಹೇಗೆ ಸವಾಲು ಹಾಕುವುದು? ಏಕೆಂದರೆ ನಮಗೆ ತಿಳಿದಿದೆ. ಸಣ್ಣ ಮಗುವಿನಂತೆಯೇ, ಅವನು ತುಂಬಾ ದೊಡ್ಡವನಿಗೆ ಸವಾಲು ಹಾಕಬಹುದು ಏಕೆಂದರೆ "ನನ್ನ ತಂದೆ ಇದ್ದಾನೆ”, ಎಂದು ಅವನಿಗೆ ತಿಳಿದಿದೆ. ಅವನು ತಂದೆಯ ಕೈಯನ್ನು ಹಿಡಿದಿದ್ದಾನೆ, ಮತ್ತು "ಯಾರೂ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ”, ಎಂದು ಅವನು ಖಚಿತವಾಗಿ ನಂಬುತ್ತಾನೆ.
ಸ್ವರೂಪ ದಾಮೋದರ: ಶ್ರೀಲ ಪ್ರಭುಪಾದ, ತದ್ ಅಪಿ ಅಫಲತಾಮ್ ಜಾತಮ್ ಅರ್ಥವನ್ನು ಖಚಿತಪಡಿಸಿಕೊಳ್ಳಲು ಬಯಸುತ್ತೇನೆ.ತೇಷಾಮ್ ಆತ್ಮಾಭಿಮಾನಿನಾಮ್
ಪ್ರಭುಪಾದ: ತದ್ ಅಪಿ ಅಫಲತಾಮ್ ಜಾತಮ್.ತೇಷಾಮ್ ಆತ್ಮಾಭಿಮಾನಿನಾಮ್...ಬಾಲಕಾನಾಮ್ ಅನಾಶೃತ್ಯ ಗೋವಿಂದ-ಚರಣ-ದ್ವಯಂ
ಸ್ವರೂಪ ದಾಮೋದರ: "ಮಾನವ ಜನ್ಮವನ್ನು ಯಾರು ಹಾಳು ಮಾಡಿಕೊಳ್ಳುತಾರೆಂದರೆ..."
ಪ್ರಭುಪಾದ: ಹೌದು. "ಯಾರು ಕೃಷ್ಣ ಪ್ರಜ್ಞೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದಿಲ್ಲವೋ…” ಸುಮ್ಮನೆ ಪ್ರಾಣಿಗಳಂತೆ ಸಾಯುತ್ತಾನೆ. ಅಷ್ಟೇ. ಬೆಕ್ಕುಗಳು ಮತ್ತು ನಾಯಿಗಳಂತೆಯೇ, ಇವರೂ ಸಹ ಜನ್ಮ ಪಡೆಯುತ್ತಾರೆ, ತಿನ್ನುತ್ತಾರೆ, ನಿದ್ರಿಸುತ್ತಾರೆ, ಮಕ್ಕಳನ್ನು ಹುಟ್ಟಿಸುತ್ತಾರೆ, ಮತ್ತು ಸಾಯುತ್ತಾರೆ. ಮಾನವ ಜೀವನವು ಹಾಗೆ.
ಸ್ವರೂಪ ದಾಮೋದರ: ಜಾತ ಎಂದರೆ ಜಾತಿ? ಜಾತ?
ಪ್ರಭುಪಾದ: ಜಾತ. ಜಾತ ಎಂದರೆ ಜನನ. ಅಫಲತಾಂ ಜಾತಂ. ಜಾತ ಎಂದರೆ ಅದು ನಿರರ್ಥಕವಾಗುತ್ತದೆ. ನಿರರ್ಥಕ. ಅವನು ಗೋವಿಂದ-ಚರಣವನ್ನು ಸ್ವೀಕರಿಸದಿದ್ದರೆ ಮಾನವ ಜನ್ಮವು ನಿರರ್ಥಕವಾಗುತ್ತದೆ. ಗೋವಿಂದಂ ಆದಿ-ಪುರುಷಂ ತಮ್ ಅಹಮ್ ಭಜಾಮಿ. "ನಾನು ನಿಜವಾದ ದೇವೋತ್ತಮ ಪರಮಪುರುಷನನ್ನು ಪೂಜಿಸುತ್ತೇನೆ”, ಎಂದು ಅವನಿಗೆ ಮನವರಿಕೆಯಾಗದಿದ್ದರೆ, ಅವನು ಹಾಳಾಗುತ್ತಾನೆ. ಅಷ್ಟೇ. ಅವನ ಜೀವನ ಹಾಳಾಗುತ್ತದೆ.
ಸ್ವರೂಪ ದಾಮೋದರ: ಆತ್ಮಾಭಿಮಾನಿನಾಮ್ ಎಂದರೆ...
ಪ್ರಭುಪಾದ: ಆತ್ಮ, ದೇಹಾತ್ಮಾ-ಮಾನಿನಾಮ್. "ನಾನು ಈ ದೇಹ."
ಸ್ವರೂಪ ದಾಮೋದರ: ಅಂದರೆ ಸ್ವಾರ್ಥಿ…
ಪ್ರಭುಪಾದ: ಆತ್ಮ? ಅವರಿಗೆ ಆತ್ಮದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ದೂರ್ತರು, "ನಾನು ಈ ದೇಹ", ಎಂದು ಅವರು ಭಾವಿಸುತ್ತಾರೆ. ಆತ್ಮ ಎಂದರೆ ದೇಹ, ಆತ್ಮ ಎಂದರೆ ಸ್ವಯಂ, ಆತ್ಮ ಎಂದರೆ ಮನಸ್ಸು. ಆದ್ದರಿಂದ ಈ ಆತ್ಮಾಭಿಮಾನಿ ಎಂದರೆ ದೇಹಾತ್ಮ ಪರಿಕಲ್ಪನೆ. ಬಾಲಕ. ಬಾಲಕ ಎಂದರೆ ಮೂರ್ಖ, ಮಗು, ಬಾಲಕ. ಆತ್ಮಾಭಿಮಾನಿನಾಮ್ ಬಾಲಕಾನಾಂ. ದೇಹಾತ್ಮ ಪರಿಕಲ್ಪನೆಯಡಿಯಲ್ಲಿರುವವರು, ಮಕ್ಕಳು, ಮೂರ್ಖರು ಅಥವಾ ಪ್ರಾಣಿಗಳಂತೆ.
ಸ್ವರೂಪ ದೋಮೋದರ: ಹಾಗಾಗಿ ಈ ಪದ್ಯದ ಮೂಲಕ ದೇಹಾಂತರ ತತ್ವವನ್ನು ವಿವರಿಸಲು ನಾನು ಯೋಜಿಸುತ್ತಿದ್ದೇನೆ.
ಪ್ರಭುಪಾದ: ಹೌದು. ದೇಹಾಂತರ. ಭ್ರಮದ್ಭಿಃ. ಭ್ರಮದ್ಭಿಃ ಎಂದರೆ ಒಂದು ದೇಹದಿಂದ ಇನ್ನೊಂದಕ್ಕೆ ಸ್ಥಳಾಂತರವಾಗುವುದು. ನಾನು ಇಲ್ಲಿದ್ದಂತೆಯೇ. ನನ್ನ ಈ ದೇಹ, ಉಡುಗೆ, ಹೊದಿಕೆಯಿದೆ. ಮತ್ತು ನಾನು ಭಾರತಕ್ಕೆ ಹೋದಾಗ, ಇದರ ಅಗತ್ಯವಿಲ್ಲ. ಆದ್ದರಿಂದ ಈ ದೇಹವೂ ಹಾಗೆಯೇ ವಿಕಸನಗೊಂಡಿದೆ ಎಂದು ಅವರು ಭಾವಿಸುತ್ತಾರೆ. ಆದರೆ ಹಾಗಲ್ಲ. ಇಲ್ಲಿ, ಕೆಲವು ಷರತ್ತುಗಳ ಅಡಿಯಲ್ಲಿ, ನಾನು ಈ ಉಡುಪನ್ನು ಸ್ವೀಕರಿಸುತ್ತೇನೆ. ಮತ್ತೊಂದು ಸ್ಥಳದಲ್ಲಿ, ನಿರ್ದಿಷ್ಟ ಪರಿಸ್ಥಿತಿಯಲ್ಲಿ, ನಾನು ಇನ್ನೊಂದು ಉಡುಪನ್ನು ಸ್ವೀಕರಿಸುತ್ತೇನೆ. ಹಾಗಾಗಿ ನಾನು ಮುಖ್ಯ, ಈ ಉಡುಗೆ ಅಲ್ಲ. ಆದರೆ ಈ ದೂರ್ತರು ಉಡುಪನ್ನು ಮಾತ್ರ ಅಧ್ಯಯನ ಮಾಡುತ್ತಿದ್ದಾರೆ. ಉಡುಗೆ, ದೇಹವನ್ನು ಪರಿಗಣಿಸಿಸುವುದನ್ನು ಆತ್ಮಾಭಿಮಾನಿನಾಮ್ ಎಂದು ಕರೆಯಲಾಗುತ್ತದೆ. ಬಾಲಕಾನಾಂ.