KN/Prabhupada 1064 - ಭಗವಂತನು ಎಲ್ಲಾ ಜೀವಿಗಳ ಹೃದಯಗಳಲ್ಲಿ ನೆಲೆಸಿದ್ದಾನೆ



660219-20 - Lecture BG Introduction - New York

ಪರಮ ಪ್ರಜ್ಞೆಯನ್ನು ಭಗವದ್ಗೀತೆಯಲ್ಲಿ ವಿವರಿಸಿದ್ದಾರೆ. ಅಲ್ಲಿ ಜೀವಿ ಮತ್ತು ಭಗವಂತನ ವ್ಯತ್ಯಾಸವನ್ನು ತಿಳಿಸಿದ್ದಾರೆ. ಕ್ಷೇತ್ರ ಕ್ಷೇತ್ರಜ್ಞ. ಈ ಕ್ಷೇತ್ರಜ್ಞ ಎಂಬುದನ್ನು, ಭಗವಂತನು ಕ್ಷೇತ್ರಜ್ಞ ಅಥವಾ ಪ್ರಜ್ಞಾವಂತನು. ಜೀವಿ ಕೂಡ ಪ್ರಜ್ಞೆಯುಳ್ಳವನು. ವ್ಯತ್ಯಾಸವೆಂದರೆ, ಜೀವಿಗೆ ತನ್ನ ದೇಹದ ಪ್ರಜ್ಞೆಯುಂಟು, ಆದರೆ ಭಗವಂತನಿಗೆ ಎಲ್ಲಾ ದೇಹಗಳ ಪ್ರಜ್ಞೆಯುಂಟು ಈಶ್ವರ ಸರ್ವ ಭೂತಾನಾಂ ಹೃದ್ದೇಶೆ ಅರ್ಜುನ ತಿಷ್ಠತಿ (ಭ ಗೀತೆ 18.61).

ಭಗವಂತನು ಎಲ್ಲಾ ಜೀವಿಗಳ ಹೃದಯಗಳಲ್ಲಿ ನೆಲೆಸಿದ್ದಾನೆ. ಆದ್ದರಿಂದ ಭಗವಂತನಿಗೆ ನಿರ್ದಿಷ್ಟ ಜೀವಿಯ ಮಾನಸಿಕ ಚಲನೆಗಳು, ಚಟುವಟಿಕೆಗಳು ಎಲ್ಲದರ ಪ್ರಜ್ಞೆಯುಂಟು, ಇದನ್ನು ನಾವು ಮರೆಯಬಾರದು. ದೇವೋತ್ತಮ ಪರಮ ಪುರುಷನು ಎಲ್ಲರ ಹೃದಯಗಳಲ್ಲಿ ಪರಮಾತ್ಮನಾಗಿ ನೆಲೆಸಿ, ನಿಯಾಮಕ ಮತ್ತು ನಿರ್ದೇಶಕನಾಗಿದ್ದಾನೆ. ಅವನು ಮಾರ್ಗವನ್ನು ನಿರ್ದೇಶಿಸುತ್ತಾನೆ. ಸರ್ವಸ್ಯ ಚಾಹಂ ಹೃದಿ ಸನ್ನಿ ವಿಷ್ಟಃ (ಭ ಗೀತೆ 15.15) ಅವನು ಎಲ್ಲರ ಹೃದಯದಲ್ಲಿ ಇದ್ದಾನೆ ಮತ್ತು ತಾನು ಅಪೇಕ್ಷಿಸಿದಂತೆ ಕೆಲಸ ಮಾಡಲು ನಿರ್ದೇಶಿಸುತ್ತಾನೆ. ಜೀವಿಯು ಏನು ಮಾಡಬೇಕೆಂಬುದನ್ನು ಮರೆತುಬಿಡುತ್ತಾನೆ. ಮೊದಲು ಒಂದು ರೀತಿಯಲ್ಲಿ ನಡೆಯಬೇಕೆಂದು ನಿರ್ಧರಿಸುತ್ತಾನೆ. ನಂತರ ತನ್ನ ಕರ್ಮಫಲಗಳಲ್ಲಿ ಸಿಲುಕಿಕೊಳ್ಳುತ್ತಾನೆ. ನಾವು ಉಡುಪನ್ನು ಹಾಕಿಕೊಂಡು ಕಳಚಿಹಾಕುವಂತೆ ಒಂದು ಬಗೆಯ ದೇಹವನ್ನು ಬಿಟ್ಟು ಇನ್ನೊಂದು ಬಗೆಯ ದೇಹವನ್ನು ಪ್ರವೇಶಿಸುತ್ತಾನೆ. ಭಗವದ್ಗೀತೆಯಲ್ಲಿ ವಾಸಾಂಸಿ ಜೀರ್ಣಾನಿ ಯಥಾ ವಿಹಾಯ (ಭ ಗೀತೆ 2.22) ಹೇಗೆ ಒಬ್ಬ ವ್ಯಕ್ತಿ ಬೇರೆ ಬೇರೆ ಬಟ್ಟೆಗಳನ್ನು ಬದಲಾಯಿಸುತ್ತಾನೆ ಅದೇ ರೀತಿ ಜೀವಿಯು ಬೇರೆ ಬೇರೆ ದೇಹಗಳನ್ನು ಬದಲಾಯಿಸುತ್ತಿರುತ್ತದೆ ಎಂದು ವಿವರಿಸಲಾಗಿದೆ. ತನ್ನ ಹಿಂದಿನ ಕ್ರಿಯೆ ಮತ್ತು ಪ್ರತಿಕ್ರಿಯೆಗಳ ಆಧಾರದ ಮೇಲೆ ಜೀವಿ (ಆತ್ಮ) ದೇಹಾಂತರ ಮಾಡುತ್ತದೆ. ಜೀವಿಯು ಸತ್ವಗುಣದಲ್ಲಿರುವಾಗ ಈ ಕ್ರಿಯೆಗಳನ್ನು ಬದಲಾಯಿಸಬಹುದು. ಯಾವ ರೀತಿಯ ಕಾರ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು ಅರ್ಥವಾಗುತ್ತದೆ. ಆ ರೀತಿಯಲ್ಲಿ ಅವನು ನಡೆದುಕೊಂಡಾಗ ಅವನ ಹಿಂದಿನ ಎಲ್ಲಾ ಕರ್ಮಫಲಗಳು ಬದಲಾಗುತ್ತದೆ. ಆದ್ದರಿಂದ ಕರ್ಮ ಶಾಶ್ವತವಾದುದಲ್ಲ. ಐದು ವಿಷಯಗಳಲ್ಲಿ - ಈಶ್ವರ, ಜೀವಿ, ಪ್ರಕೃತಿ, ಕಾಲ, ಕರ್ಮ ನಾಲ್ಕು ವಿಷಯಗಳು ಶಾಶ್ವತವಾದುದು, ಆದರೆ ಕರ್ಮ ಶಾಶ್ವತವಾದುದಲ್ಲ. ಈಗ ಪ್ರಜ್ನೆಳ್ಳ ಈಶ್ವರ, ಪರಮ ಪ್ರಜ್ನೆಳ್ಳ ಈಶ್ವರ, ಮತ್ತು ಪರಮ ಪ್ರಜ್ಞೆಯ ಈಶ್ವರ, ಅಥವಾ ಭಗವಂತ, ಮತ್ತು ಜೀವಿಗಳ ವ್ಯತ್ಯಾಸ, ಈ ಪರಿಸ್ಥಿತಿಯಲ್ಲಿ, ಹೀಗೆ ಇದೆ. ಈಶ್ವರನ ಪ್ರಜ್ಞೆ ಮತ್ತು ಜೀವಿಯ ಪ್ರಜ್ಞೆ ಎರೆಡೂ ಅಲೌಕಿಕವಾದವು. ಜಡದೊಡನೆ ಸೇರುವುದರಿಂದ ಪ್ರಜ್ಞೆಯು ಹುಟ್ಟುತ್ತದೆ ಎಂದೇನೂ ಅಲ್ಲ. ಇದೊಂದು ತಪ್ಪು ಭಾವನೆ. ಕೆಲವೊಂದು ಸನ್ನಿವೇಶಗಳಲ್ಲಿ ಭೌತಿಕ ಸಂಯೋಜನೆಯಿಂದ ಪ್ರಜ್ಞೆಯು ಉತ್ಪತ್ತಿಯಾಗುತ್ತದೆ ಎನ್ನುವ ಊಹೆಯನ್ನು ಭಗವದ್ಗೀತೆಯು ಒಪ್ಪುವುದಿಲ್ಲ. ಅವರಿಂದ ಸಾಧ್ಯವಿಲ್ಲ. ಹಾಗೆಯೇ ಪ್ರಜ್ಞೆಯು ಭೌತಿಕ ಸನ್ನಿವೇಶಗಳ ಆಚ್ಚಾದನೆಯಿಂದ ವಿಕೃತವಾಗಿ ಪ್ರತಿಫಲಿತವಾಗಬಹುದು, ಹಾಗೆಯೇ ಬಣ್ಣದ ಗಾಜಿನಲ್ಲಿ ಬೆಳಕು ಪ್ರತಿಫಲಿತವಾದಾಗ ಆ ಬಣ್ಣದಂತೆ ತೋರುತ್ತದೆ. ಇದೇ ರೀತಿ, ಈಶ್ವರನ ಪ್ರಜ್ಞೆಯು ಭೌತಿಕ ಪ್ರಭಾವಕ್ಕೆ ಒಳಗಾಗುವುದಿಲ್ಲ. ಭಗವಂತನು, ಎಂದರೆ ಶ್ರೀ ಕೃಷ್ಣನು, ಮಾಯಾಧ್ಯಕ್ಷೇಣ ಪ್ರಕೃತಿ: ಎಂದು ಹೇಳುತ್ತಾನೆ. (ಭ ಗೀತೆ 9.10) ಆತನು ಐಹಿಕ ವಿಶ್ವಕ್ಕೆ ಇಳಿದು ಬಂದಾಗ ಅವನ ಪ್ರಜ್ಞೆಗೆ ಐಹಿಕ ಲೇಪವು ಉಂಟಾಗುವುದಿಲ್ಲ. ಹಾಗೆ ಲೇಪವಾಗುವುದಾದರೆ ಆತನು ಭಗವದ್ಗೀತೆಯಲ್ಲಿ ಮಾತನಾಡುವಂತೆ ಅಲೌಕಿಕ ವಿಷಯಗಳನ್ನು ಕುರಿತು ಮಾತನಾಡಲು ಅನರ್ಹನಾಗುತ್ತಾನೆ. ಪರಮ ಜಗತ್ತಿನ ಬಗ್ಗೆ ಯಾರಿಂದಲೂ ಹೇಳಲು ಸಾಧ್ಯವಿಲ್ಲ ಭೌತಿಕ ಕಲ್ಮಷದಿಂದ ಬಿಡುಗಡೆ ಹೊಂದದೆ. ಆದ್ದರಿಂದ ಈಶ್ವರನಿಗೆ ಭೌತಿಕ ಕಲ್ಮಶವಿಲ್ಲ. ಆದರೆ ನಮ್ಮ ಪ್ರಜ್ಞೆಗೆ, ಈಗ, ಭೌತಿಕ ಕಲ್ಮಶ ಉಂಟಾಗಿದೆ. ಆದ್ದರಿಂದ ಭಗವದ್ಗೀತೆಯು ಉಪದೇಶಿಸುವದು ಏನೆಂದರೆ ನಾವು ಭೌತಿಕ ಕಲ್ಮಷದ ಈ ಪ್ರಜ್ಞೆಯೆನ್ನು ಪರಿಶುಧಗೊಳಿಸಬೇಕು. ಮತ್ತು ಆ ಪರಿಶುಧ ಪ್ರಜ್ಞೆಯಲ್ಲಿ ನಮ್ಮ ಕಾರ್ಯಗಳು ಮಾಡಲ್ಪಡುತ್ತವೆ. ಅದರಿಂದ ನಮಗೆ ಸುಖವಾಗುತ್ತದೆ. ನಮಗೆ ನಿಲ್ಲಿಸಲಾಗುವುದಿಲ್ಲ. ನಾವು ನಮ್ಮ ಕಾರ್ಯಗಳನ್ನುನಿಲ್ಲಿಸಲಾಗುವುದಿಲ್ಲ. ನಮ್ಮ ಕಾರ್ಯಗಳನ್ನು ಪರಿಶುಧಗೊಳಿಸಬೇಕು. ಈ ಪರಿಶುಧವಾದ ಕಾರ್ಯಗಳನ್ನು ಭಕ್ತಿ ಎನ್ನುತ್ತಾರೆ. ಭಕ್ತಿ ಸ್ಥಿತಿಯಲ್ಲಿನ ಕಾರ್ಯಗಳು ಸಾಮಾನ್ಯ ಕಾರ್ಯಗಳಂತೆಯೇ ತೋರುತ್ತವೆ, ಆದರೆ ಅವು ಕಲ್ಮಶವಿರುವ ಕಾರ್ಯಗಳು ಅಲ್ಲ. ಅವು ಕಲ್ಮಶರಹಿತವಾದುವು. ಆದರೆ ಅಜ್ಞಾನಿಯಾದವನಿಗೆ ಭಕ್ತನು ಸಾಮಾನ್ಯ ಮನುಷ್ಯನಂತೆ ಕಾರ್ಯ ಮಾಡುತ್ತಾನೆ ಎಂದು ತೋರಬಹುದು, ಆದರೆ, ಹೆಚ್ಚುಟಿಳುವಳಿಕೆ ಇಲ್ಲದವನಿಗೆ, ಅವನಿಗೆ ಈಶ್ವರನ ಕ್ರಿಯೆಗಳಾಗಲೀ, ಭಕ್ತನ ಕ್ರಿಯೆಗಳಾಗಲಿ, ಅವು ಜಡಸಂಪರ್ಕದಿಂದ ಕಲುಷಿತವಾಗಿಲ್ಲ, ಪ್ರಕೃತಿಯ ಮೂರು ಗುಣಗಳಿಂದ ಕಲುಷಿತವಾಗಿಲ್ಲ, ಆದರೆ ಅವು ದಿವ್ಯ ಪ್ರಜ್ಞೆವುಳ್ಳವು. ಆದ್ದರಿಂದ ನಮ್ಮ ಪ್ರಜ್ಞೆಯು ಕಲುಷಿತ ಗೊಂಡಿದೆ ಎನ್ನುವುದನ್ನು ನಾವು ತಿಳಿಯಬೇಕು.