KN/Prabhupada 1066 - ಕಡಿಮೆ ಬುದ್ಧಿಯುಳ್ಳವರು ಪರಮ ಸತ್ಯವು ನಿರಾಕಾರ ಎಂದು ಭಾವಿಸುತ್ತಾರೆ



660219-20 - Lecture BG Introduction - New York

ಇಡೀ ಸೃಷ್ಟಿಯ ಕೇಂದ್ರ ಮತ್ತು ಭೋಗಿಸುವುದರ ಎಲ್ಲದರ ಕೇಂದ್ರ ಭಗವಂತನೇ ಆಗಿದ್ದ್ಡಾನೆ. ಮತ್ತು ಜೀವಿಗಳು ಸಹಕರಿಸುವವರು ಮಾತ್ರ. ಸಹಕರಿಸುವುದರಿಂದ ಜೀವಿಗಳು ಆನಂದಿಸುತ್ತಾರೆ. ಈ ಸಂಭಂಧ ಒಡಯ ಮತ್ತು ಸೇವಕರಂತೆ. ಒಡೆಯ ಪೂರ್ಣವಾಗಿ ಸಂತೃಪ್ತಿ ಹೊಂದಿದರೆ ಸೇವಕನಿಗೆ ಸಂತೃಪ್ತಿಯಾಗುತ್ತದೆ. ಅದು ನಿಯಮ. ಅದೇ ರೀತಿ, ಭಗವಂತ ಸಂತೃಪ್ತನಾದರೆ, ಈ ಭೌತಿಕ ಪ್ರಪಂಚದಲ್ಲಿ ಸೃಷ್ಟಿಸುವ ಮತ್ತು ಭೋಗಿಸುವ ಪ್ರವೃತ್ತಿ ಇದೆ. ಭಗವಂತನಲ್ಲಿ ಈ ಪ್ರವೃತ್ತಿ ಇರುವದರಿಂದಲೇ ಜೀವಿಗಳಲ್ಲಿ ಈ ಪ್ರವೃತ್ತಿ ಇದೆ. ಭಗವಂತನ ಇಡೀ ಪ್ರಪಂಚವನ್ನು ಸೃಷ್ಟಿಸಿದ್ದಾನೆ. ಆದ್ದರಿಂದಲೇ ಭಗವದ್ಗೀತೆಯಲ್ಲಿ ನಾವು ಅಖಂಡ ಪೂರ್ಣವು ಪರಮ ನಿಯಂತ್ರಕನನ್ನೂ, ನಿಯಂತ್ರಕ್ಕೊಳಗಾದ ಜೀವಿಗಳನ್ನೂ, ವಿಶ್ವ ಅಭಿವ್ಯಕ್ತಿಯನ್ನೂ, ಅನಂತಕಾಲವನ್ನೂ, ಕರ್ಮವನ್ನು ಸಂಪೂರ್ಣವಾಗಿ ಒಳಗೊಂಡಿರುವುದನ್ನು ಕಾಣುತ್ತೇವೆ. ಇವೆಲ್ಲವನ್ನೂ ಒಟ್ಟಾರೆ ಪರಮ ಸತ್ಯ ಎನ್ನುತ್ತಾರೆ. ಪರಮ ಸತ್ಯ ಆದ್ದರಿಂದ ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣ. ಈ ವಿಶ್ವದ ಅಭಿವ್ಯಕ್ತಿ ಅವನ ವಿವಿಧ ಶಕ್ತಿಗಳಿಂದ ಆಗಿದೆ. ಮತ್ತು ಅವನು ಪೂರ್ಣ ಪುರುಷ. ನಿರಾಕಾರ ಬ್ರಹ್ಮನನ್ನು ಭಗವದ್ಗೀತೆಯಲ್ಲಿ ಪೂರ್ಣ ಪರಮ ಪುರುಷನಿಗೆ ಅಧೀನ ಎನ್ನಲಾಗಿದೆ. ಬ್ರಹ್ಮಣೋ ಅಹಂ ಪ್ರತಿಷ್ಟಾ (ಭ ಗೀತೆ 14.27) ಬ್ರಹ್ಮ ಸೂತ್ರದಲ್ಲಿ ನಿರಾಕಾರ ಬ್ರಹ್ಮನನ್ನು ಕಿರಣಗಳಂತೆ ಎಂದು ವರ್ಣಿಸಲಾಗಿದೆ. ಯಾವ ರೀತಿ ಸೂರ್ಯಕಿರಣಗಳಿವೆ, ಸೂರ್ಯ ಗ್ರಹವಿದೆ ಅದೇ ರೀತಿ ನಿರಾಕಾರ ಬ್ರಹ್ಮ ಕೂಡ ಪರಂ ಬ್ರಹ್ಮ ಅಥವಾ ದೇವೋತ್ತಮ ಪರಮ ಪುರುಷನ ಕಿರಣಗಳಾಗಿವೆ. ಆದ್ದರಿಂದ ನಿರಾಕಾರ ಬ್ರಹ್ಮನ್ನ ಸಾಕ್ಷಾತ್ಕಾರ ಪರಮ ಸತ್ಯದ ಪೂರ್ಣ ಸಾಕ್ಷಾತ್ಕಾರವಲ್ಲ. ಪರಮಾತ್ಮನ ಸಾಕ್ಷಾತ್ಕಾರ ವೂ ಅಷ್ಟೇ. ಇದನ್ನು ಪುರುಷೋತ್ತಮ ಯೋಗದಲ್ಲಿ ವರ್ಣಿಸಿದೆ. ನಾವು ಯಾವಾಗ ಪುರುಷೋತ್ತಮ ಯೋಗ ಅಧ್ಯಾಯವನ್ನು ಓದುತ್ತೇವೆ, ಆಗ ಪರಮ ಪುರುಷ ಪುರುಷೋತ್ತಮನು ನಿರಾಕಾರ ಬ್ರಹ್ಮನ್ ಗಿಂತ ಹಾಗೂ ಪರಮಾತ್ಮಗಿಂತ ಮೇಲಿನವನು ಎಂದು ನೋಡಬಹುದು. ದೇವೋತ್ತಮ ಪರಮ ಪುರುಷನನ್ನು ಸಚ್ಚಿದಾನಂದ ಅನ್ನುತ್ತೇವೆ. (ಬ್ರ ಸಂ 5.1) ಬ್ರಹ್ಮ ಸಂಹಿತೆ ಹೀಗೆ ಶುರುವಾಗುತ್ತದೆ. ಈಶ್ವರಃ ಪರಮಃ ಕೃಷ್ಣಃ ಸಚ್ಚಿದಾನಂದ ವಿಗ್ರಹಾಃ ಅನದಿರ್ ಆದಿರ್ ಗೋವಿಂಡಃ ಸರ್ವ ಕಾರಣ ಕಾರಣಂ. ಗೋವಿಂದ ಅಥವಾ ಕೃಷ್ಣ ಎಲ್ಲಾ ಕಾರಣಗಳ ಕಾರಣನು. ಅವನೇ ಆದಿ ಪುರುಷ. ದೇವೋತ್ತಮ ಪರಮ ಪುರುಷ ಸಚ್ಚಿದಾನಂದ ವಿಗ್ರಹ. ನಿರಾಕಾರ ಬ್ರಹ್ಮನ್ ನ ಸಾಕ್ಷಾತ್ಕಾರವು ಅವನ ಸತ್ ಭಾಗದ ಸಾಕ್ಷಾತ್ಕಾರ. ಪರಮಾತ್ಮ ಸಾಕ್ಷಾತ್ಕಾರವು ಸತ್ ಮತ್ತು ಚಿತ್ (ಶಾಶ್ವತತೆ ಮತ್ತು ಜ್ಞಾನದ) ಸಾಕ್ಷಾತ್ಕಾರ. ಆದರೆ ಪೂರ್ಣ ವಿಗ್ರಹ ರೂಪ (ಸತ್, ಚಿತ್, ಮತ್ತು ಆನಂದ) ಗಳ ಎಲ್ಲಾ ದಿವ್ಯ ಲಕ್ಷಣಗಳ ಸಾಕ್ಷಾತ್ಕಾರವೇ ದೇವೋತ್ತಮ ಪುರುಷನಾದ ಶ್ರೀ ಕೃಷ್ಣನ ಸಾಕ್ಷಾತ್ಕಾರವಾಗಿದೆ. ವಿಗ್ರಹ ಎಂದರೆ ರೂಪ ಎಂದರ್ಥ. ಅವ್ಯಕ್ತಂ ವ್ಯಕ್ತಿಂ ಆಪನ್ನಮ್ ಮನ್ಯತೆ ಮಾಂ ಅಭುದ್ಡಾಯಃ ((ಭ ಗೀತೆ 7.24)) ಕಡಿಮೆ ಬುದ್ಧಿಯುಳ್ಳವರು ಪರಮ ಸತ್ಯವು ನಿರಾಕಾರ ಎಂದು ಭಾವಿಸುತ್ತಾರೆ. ಆದರೆ ಅವನು ದಿವ್ಯ ಅಲೌಕಿಕ ವ್ಯಕ್ತಿ, ಇದನ್ನು ಎಲ್ಲ ವೇದಗಳು ದೃಡಪಡಿಸುತ್ತದೆ. ನಿತ್ಯೋ ನಿತ್ಯಾನಾಂ ಚೇತನಸ್ ಚೇತನಾನಾಂ (ಕಥಾ ಉಪನಿಷದ್ 2.2.13) ನಾವೆಲ್ಲ ಪ್ರತ್ಯೇಕ ಪ್ರತ್ಯೇಕ ಜೀವಿಗಳಾಗಿದ್ದು ನಮಗೆ ಪ್ರತ್ಯೇಕ ಪ್ರತ್ಯೇಕ ವ್ಯಕ್ತಿತ್ವವಿದೆ. ಅದೇ ರೀತಿ ಪರಮ ಸತ್ಯ, ಪರಮ ಪುರುಷ ಕೂಡ ವ್ಯಕ್ತಿಯೇ. ಪರಮ ಪುರುಷನ ಸಾಕ್ಷಾತ್ಕಾರವೂ ಅವನು ಅಲ್ಲಾ ದಿವ್ಯ ಲಕ್ಷಣಗಳ (ಸತ್, ಚಿತ್, ಆನಂದ) ಗಳ ಸಾಕ್ಷಾತ್ಕಾರವಾಗಿದೆ. ವಿಗ್ರಹ ಎಂದರೆ ರೂಪ. ಆದ್ದರಿಂದ ಅಖಂಡ ಪೂರ್ಣನು ನಿರಾಕಾರವಲ್ಲ. ಅವನು ನಿರಾಕಾರ ಅಥವಾ ಬೇರೆ ವಸ್ತುವಿಗಿಂತ ಕಡಿಮೆಯಾದರೆ ಅವನು ಪೂರ್ಣನಾಗುವುದು ಸಾಧ್ಯವಿಲ್ಲ. ನಮ್ಮ ಅನುಭವದಲ್ಲಿ ಬಂದದೆಲ್ಲಾ ಮತ್ತು ನಮ್ಮ ಅನುಭವದ ಆಚೆ ಇರುವುದೆಲ್ಲಾ ಅಖಂಡತ್ವದಲ್ಲಿ ಇರಬೇಕು. ಇಲ್ಲವಾದರೆ ಅವನು ಪೂರ್ಣನಾಗುವುದಿಲ್ಲ. ಅಖಂಡ ದೇವೋತ್ತಮ ಪರಮ ಪುರುಷನಿಗೆ ಅಗಾಧ ಶಕ್ತಿಗಳಿವೆ. ಪರಾಸ್ಯ ಶಕ್ತೀರ್ ವಿವಿಧೈವ ಶ್ರೂಯತೇ (ಚೈ ಚ ಮಧ್ಯ 13.65 ಭಾವಾರ್ಥ) ಅವನು ವಿವಿಧ ಶಕ್ತಿಗಳ ಮೂಲಕ ಹೇಗೆ ಕೆಲಸ ಮಾಡುತ್ತಾನೆ ಎಂಬುದನ್ನು ಭಗವದ್ಗೀತೆ ವಿವರಿಸುತ್ತದೆ. ನಾವಿರುವ ಈ ಐಹಿಕ ಜಗತ್ತು ಕೂಡ ಸ್ವಯಂ ಪೂರ್ಣ. ಏಕೆಂದರೆ ಪೂರ್ಣಂ ಇದಂ (ಈಶ ಉಪನಿಷದ್) ಸಾಂಖ್ಯ ಸಿದ್ಧಾಂತದ ಪ್ರಕಾರ ಭೌತಿಕ ವಿಶ್ವವು 24 ಮೂಲಾಂಶ ಗಳ ತಾತ್ಕಾಲಿಕ ಅಭಿವ್ಯಕ್ತಿ. ಈ ವಿಶ್ವದ ನಿರ್ವಹಣೆ ಮತ್ತು ಉಳಿವಿಗೆ ಅಗತ್ಯವಾದ ಎಲ್ಲಾ ಸಂಪನ್ಮೂಲಗಳನ್ನು ಸೃಷ್ಟಿಸುವಂತೆ ಈ ಅಂಶಗಳನ್ನು ಸಂಪೂರ್ಣವಾಗಿ ಹೊಂದಾಣಿಕೆ ಮಾಡಲಾಗಿದೆ. ವಿಶ್ವದ ನಿರ್ವಹಣೆಗೆ ಈಗಿರುವುದಲ್ಲದೆ ಬೇರೆ ಯಾವುದರ ಅಗತ್ಯವೂ ಇಲ್ಲ. ಇದರ ಕಾಲಪ್ರಮಾಣವನ್ನು ಅಖಂಡತ್ವವು ನಿರ್ಧರಿಸುತ್ತದೆ. ಈ ಕಾಲಪ್ರಮಾಣವು ಮುಗಿದಾಗ ಈ ತಾತ್ಕಾಲಿಕ ಅಭಿವ್ಯಕ್ತಿಗಳನ್ನು ಪೂರ್ಣತ್ವದ ಪೂರ್ಣ ಏರ್ಪಾಡು ನಾಶ ಮಾಡುತ್ತದೆ.