KN/Prabhupada 1059 - ಪ್ರತಿಯೊಬ್ಬರಿಗೂ ಭಗವಂತನ ಜೊತೆ ಪ್ರತ್ಯೇಕ ಸಂಬಂಧವಿದೆ

Revision as of 04:13, 12 July 2019 by Vanibot (talk | contribs) (Vanibot #0023: VideoLocalizer - changed YouTube player to show hard-coded subtitles version)
(diff) ← Older revision | Latest revision (diff) | Newer revision → (diff)


660219-20 - Lecture BG Introduction - New York

ಯಾವುದೇ ಮನುಷ್ಯನು ಭಗವಂತನ ಭಕ್ತನಾಗುತ್ತಲೇ ಅವನಿಗೆ ಆತನಿಗೆ ಭಗವಂತನೊಡನೆ ನೇರವಾದ ಸಂಬಂಧವಾಗುತ್ತದೆ. ಇದು ಬಹು ವಿಸ್ತಾರವಾದ ವಿಷಯ. ಸಂಗ್ರಹವಾಗಿ ಹೀಗೆ ಹೇಳಬಹುದು. ಭಕ್ತನು ದೇವೋತ್ತಮ ಪರಮ ಪುರುಷನೊಡನೆ 5 ರೀತಿಯ ಸಂಬಂಧದಲ್ಲಿ ಇರುತ್ತಾನೆ. ಒಬ್ಬನು ನಿಷ್ಕ್ರಿಯ ಸ್ಥಿತಿಯಲ್ಲಿ ಭಕ್ತನಾಗಿರಬಹುದು. ಒಬ್ಬನು ಕ್ರಿಯಾಶೀಲ ರೀತಿಯಲ್ಲಿ ಭಕ್ತನಾಗಿರಬಹುದು. ಒಬ್ಬನು ಗೆಳೆಯನಾಗಿ ಭಕ್ತನಾಗಿರಬಹುದು. ಒಬ್ಬನು ತಂದೆ ಅಥವಾ ತಾಯಿಯಾಗಿ ಭಕ್ತನಾಗಿರಬಹುದು. ಒಬ್ಬನು ಮಧುರ ಪ್ರೇಮಿಯಾಗಿ ಭಕ್ತನಾಗಿರಬಹುದು. ಅರ್ಜುನನು ಕೃಷ್ಣನೊಂದಿಗೆ ಗೆಳೆಯತನದ ಸಂಬಂದದಲ್ಲಿ ಭಕ್ತನಾಗಿದ್ದನು. ಭಗವಂತನು ಗೆಳೆಯನಾಗಬಹುದು. ಈ ಗೆಳೆತನಕ್ಕೂ ಪ್ರಾಪಂಚಿಕ ಜಗತ್ತಿನಲ್ಲಿ ಕಾಣುವ ಗೆಳೆತನಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇದು ಆಧ್ಯಾತ್ಮಿಕ ಗೆಳೆಯತನ. ಎಲ್ಲರಿಗೂ ಲಭ್ಯವಾಗುವಂತಹುದಲ್ಲ. ಪ್ರತಿಯೊಬ್ಬರಿಗೂ ಭಗವಂತನ ಜೊತೆ ಪ್ರತ್ಯೇಕ ಸಂಬಂಧವಿದೆ. ಭಕ್ತಿಸೇವೆಯ ಪರಿಪೂರ್ಣತೆಯು ಈ ಸಂಬಂಧವನ್ನು ಪ್ರಚೋದಿಸುತ್ತದೆ. ನಮ್ಮ ಬದುಕಿನ ಇಂದಿನ ಸ್ಥಿತಿಯಲ್ಲಿ ನಾವು ಭಗವಂತನನ್ನು ಮರೆತಿದ್ದೇವೆ, ಅಷ್ಟೇ ಎಲ್ಲ, ಭಗವಂತನೊಡನೆ ನಮ್ಮ ನಿರಂತರವಾದ ಸಂಬಂಧವನ್ನೂ ಮರೆತಿದ್ದೇವೆ. ಕೋಟ್ಯಾನುಕೋಟಿ ಜೀವಿಗಳಲ್ಲಿ ಪ್ರತಿಯೊಂದು ಜೀವಿಗೂ ಭಗವಂತನೊಡನೆ ಒಂದು ನಿರಂತರವಾದ ವಿಶಿಷ್ಟ ಸಂಬಂಧವಿರುತ್ತದೆ. ಇದಕ್ಕೆ ಸ್ವರೂಪ ಎಂದು ಹೆಸರು. ಭಕ್ತಿಸೇವೆಯಿಂದ ಸ್ವರೂಪವನ್ನು ಮತ್ತೆ ಪಡೆಯಬಹುದು. ಈ ಘಟ್ಟಕ್ಕೆ ಸ್ವರೂಪಸಿದ್ಧಿ (ನಮ್ಮ ನಿಜವಾದ ಸ್ವರೂಪದ ಪರಿಪೂರ್ಣತೆ) ಎನ್ನುತ್ತಾರೆ. ಅರ್ಜುನನು ಕೃಷ್ಣನೊಡನೆ ಸ್ನೇಹದ ಭಾವದಲ್ಲಿ ಭಕ್ತನಾಗಿದ್ದನು. ಭಗವದ್ಗೀತೆಯನ್ನು ಅರ್ಜುನನಿಗೆ ಉಪದೇಶಿಸಿದ್ದು. ಅರ್ಜುನನು ಭಗವದ್ಗೀತೆಯನ್ನು ಹೇಗೆ ಸ್ವೀಕರಿಸಿದನು ಎನ್ನುವುದನ್ನು ಗಮನಿಸಬೇಕು. ಅದನ್ನು ಭಗವದ್ಗೀತೆಯ 10ನೇ ಅಧ್ಯಾಯದಲ್ಲಿ ವರ್ಣಿಸಿದೆ. ಅರ್ಜುನ ಉವಾಚ ಪರಂ ಬ್ರಹ್ಮ ಪರಂ ಧಾಮ ಪವಿತ್ರಂ ಪರಮಂ ಭವಾನ್ ಪುರುಷಂ ಶಾಶ್ವತಂ ದಿವ್ಯಂ ಆದಿದೇವಂ ಅಜಮ್ ವಿಭುಂ ಆಹೂಸ್ತ್ವಾಂ ಋಷಯಃ ಸರ್ವೇ ದೇವರ್ಷೀರ್ ನಾರದಸ್ ತಥಾ ಅಸಿತೋ ದೇವಲೋ ವ್ಯಾಸಃ ಸ್ವಯಂ ಚೈವ ಬ್ರವಿಶಿ ಮೇ ಸರ್ವಂ ಏತದ್ರತಂ ಮನ್ಯೇ ಯನ್ಮಾಂ ವದಸಿ ಕೇಶವ ನಾ ಹಿ ತೇ ಭಗವಾನ್ ವ್ಯಕ್ತಿಂ ವಿದೂರ್ ದೇವಾ ನ ದಾನಾವಾಃ (ಭ ಗೀತೆ 10.12-10.14) ಭಗವದ್ಗೀತೆಯನ್ನು ದೇವೋತ್ತಮ ಪರಮ ಪುರುಷನಿಂದ ಕೇಳಿದ ನಂತರ ಅರ್ಜುನನು ಹೀಗೆ ಹೇಳಿದನು. ಅರ್ಜುನನು ಕೃಷ್ಣನನ್ನು ಪರಮ ಬ್ರಹ್ಮನೆಂದು ಒಪ್ಪಿಕೊಂಡನು. ಬ್ರಹ್ಮನ್, ಪ್ರತಿ ಜೀವಿಯು ಬ್ರಹ್ಮನ್, ಆದರೆ ಪರಮ ಜೀವಿಯು ಅಥವಾ ದೇವೋತ್ತಮ ಪರಮ ಪುರುಷನು ಪರಮ ಬ್ರಹ್ಮ, ಪರಮ ಜೀವಿ ಪರಂ ಧಾಮ ಎಂದರೆ ಅವನು ಎಲ್ಲದರ ಕಟ್ಟಕಡೆಯ ಆಶ್ರಯ. ಪವಿತ್ರಂ ಎಂದರೆ ಪರಿಶುಧ್ಧ, ಐಹಿಕ ಸೋಂಕಿಲ್ಲದವನು. ಪುರುಷಂ ಎಂದರೆ ಪರಮ ಭೋಕ್ತಾರನು. ಶಾಶ್ವತಂ ಎಂದರೆ ಮೊದಲಿನಿಂದ, ಅಂದರೆ ಅವನೇ ಮೂಲ ಪುರುಷ. ದಿವ್ಯಂ ಎಂದರೆ ಆಧ್ಯಾತ್ಮಿಕ, ದೇವಂ ಎಂದರೆ ದೇವೋತ್ತಮ ಪರಮ ಪುರುಷ. ಅಜಂ, ಹುಟ್ಟಿಲ್ಲದವನು. ವಿಭುಂ, ಸರ್ವೋತ್ತಮನು. ಕೃಷ್ಣನು ಗೆಳೆಯನಾದ್ದರಿಂದ ಅರ್ಜುನನು ಅವನನ್ನು ಹೊಗಳಲು ಇದನ್ನೆಲ್ಲಾ ಹೇಳಿದ ಎಂದು ಯಾರಾದರೂ ಭಾವಿಸಬಹುದು. ಆದರೆ ಭಗವದ್ಗೀತೆಯನ್ನು ಓದುವವರ ಮನಸ್ಸಿನಲ್ಲಿ ಮೂಡಬಹುದಾದ ಈ ಬಗೆಯ ಸಂದೇಹವನ್ನು ಹೊಡೆದೋಡಿಸಲು ಅರ್ಜುನ ಅವನ ಹೊಗಳಿಕೆಯನ್ನು ಅಧಿಕೃತವಾಗಿ ಸ್ಥಾಪಿಸುತ್ತಾನೆ. ಶ್ರೀ ಕೃಷ್ಣನನ್ನು ದೇವೋತ್ತಮ ಪರಮ ಪುರುಷನೆಂದು ತಾನು (ಅರ್ಜುನ) ಮಾತ್ರವಲ್ಲದೆ ನಾರದ, ಅಸಿತಾ, ದೇವಲ, ಮತ್ತು ವ್ಯಾಸದೇವರಂತಹ ಅಧಿಕೃತರೂ ಒಪ್ಪುತ್ತಾರೆ ಎಂದು ಹೇಳುತ್ತಾನೆ. ಇವರೆಲ್ಲರೂ ವೈದಿಕ ಜ್ಞಾನವನ್ನು ಹಂಚುವ ಮಹಾನ್ ವ್ಯಕ್ತಿಗಳು. ಇವರನ್ನು ಎಲ್ಲಾ ಆಚಾರ್ಯರೂ ಸ್ವೀಕರಿಸುತ್ತಾರೆ. ಆದುದರಿಂದ ಅರ್ಜುನನು ಕೃಷ್ಣನಿಗೆ ನೀನು ಈವರೆಗೆ ಹೇಳಿದುದೆಲ್ಲಾ ಪರಿಪೂರ್ಣ ಎಂದು ತಾನು ಸ್ವೀಕರಿಸುವುದಾಗಿ ಹೇಳುತ್ತಾನೆ.