KN/Prabhupada 1060 - ಯಾರು ಭಗವದ್ಗೀತೆಯನ್ನು ವಿನಯಭಾವದಿಂದ ಸ್ವೀಕರಿಸುವುದಿಲ್ಲವೋ
660219-20 - Lecture BG Introduction - New York
ಸರ್ವಂ ಏತದ್ರತಂ ಮನ್ಯೇ (ಭ ಗೀತೇ 10.14) ನೀನು ಹೇಳುವುದನ್ನೆಲ್ಲಾ ನಾನು ಸತ್ಯವೆಂದು ಸ್ವೀಕರಿಸುತ್ತೇನೆ. ಮತ್ತು ನಿನ್ನ ಪರಮ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳುವುದು ಬಹು ಕಷ್ಟ. ದೇವತೆಗಳೂ ಕೂಡ ನಿನ್ನನ್ನು ಅರಿಯಲಾರರು. ದೇವತೆಗಳೂ ಕೂಡ ನಿನ್ನನ್ನು ಅರಿಯಲಾರರು. ಇದರ ಅರ್ಥ ದೇವೋತ್ತಮ ಪರಮ ಪುರುಷನನ್ನು ಮನುಷ್ಯರಿಗಿಂತ ಉತ್ತಮರಾದ ದೇವತೆಗಳೂ ಕೂಡ ಅರ್ಥಮಾಡಿಕೊಳ್ಳಲಾರರು. ಇನ್ನು ಭಕ್ತನಾಗದೆ ಕೃಷ್ಣನನ್ನು ಮಾನವನು ಹೇಗೆ ಅರ್ಥಮಾಡಿಕೊಳ್ಳಬಲ್ಲ? ಆದ್ದರಿಂದ ಭಗವದ್ಗೀತೆಯನ್ನು ಕೃಷ್ಣನ ಭಕ್ತನ ಭಾವದಲ್ಲಿ ಸ್ವೀಕರಿಸಬೇಕು. ಯಾರೂ ನಾನು ಕೃಷ್ಣನಿಗೆ ಸಮವೆಂದು ಯೋಚಿಸಬಾರದು. ಅಥವಾ ಕೃಷ್ಣನನ್ನು ಸಾಮಾನ್ಯ ವ್ಯಕ್ತಿ ಎಂದಾಗಲೀ ಅಥವಾ ಬಹುಶ್ರೇಷ್ಟ ವ್ಯಕ್ತಿ ಎಂದಾಗಲಿ ಯೋಚಿಸಬಾರದು. ಇಲ್ಲ. ಶ್ರೀ ಕೃಷ್ಣ ದೇವೋತ್ತಮ ಪರಮ ಪುರುಷ. ಭಗವದ್ಗೀತೆಯಲ್ಲಿ ಹೇಳಿರುವಂತೆ ಅಥವಾ ಭಗವದ್ಗೀತೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ಅರ್ಜುನನು ಹೇಳುವಂತೆ ನಾವು ತಾತ್ವಿಕವಾಗಿಯಾದರೂ ಶ್ರೀ ಕೃಷ್ಣನನ್ನು ದೇವೋತ್ತಮ ಪರಮ ಪುರುಷನೆಂದು ಅಂಗೀಕರಿಸಬೇಕು. ಆಗ ಆ ವಿನಯ ಭಾವದಿಂದ, ಯಾರು ಭಗವದ್ಗೀತೆಯನ್ನು ವಿನಯಭಾವದಿಂದ ಸ್ವೀಕರಿಸುವುದಿಲ್ಲವೋ, ಕೇಳಿಸಿಕೊಳ್ಳುವುದಿಲ್ಲವೋ, ಅವರು ಭಗವದ್ಗೀತೆಯನ್ನು ಅರ್ಥ ಮಾಡುವುದು ತುಂಬಾ ಕಷ್ಟ ಏಕೆಂದರೆ ಅದೊಂದು ಮಹಾ ರಹಸ್ಯ. ಭಗವದ್ಗೀತೆ ಎಂದರೇನು ಎಂದು ನಾವು ಸಮೀಕ್ಷಿಸಬಹುದು. ಭಗವದ್ಗೀತ ಇರುವುದು ಮನುಷ್ಯರ ಭೌತಿಕ ಅಸ್ತಿತ್ವದ ಅಜ್ಞಾನವನ್ನು ಹೋಗಲಾಡಿಸಲು. ಕುರುಕ್ಷೇತ್ರ ಯುಧ್ದದಲ್ಲಿ ಹೋರಾಡುವ ಬಗ್ಗೆ ಅರ್ಜುನನು ಕಷ್ಟದಲ್ಲಿದ್ದಂತೆ ಪ್ರತಿಯೊಬ್ಬನೂ ಹಲವಾರು ಕಷ್ಟದಲ್ಲಿರುತ್ತಾನೆ. ಅರ್ಜುನನು ಕೃಷ್ಣನಿಗೆ ಶರಣಾಗತನಾದನು, ಆದ್ದರಿಂದ ಗೀತೆಯ ಉಪದೇಶವಾಯಿತು. ಅರ್ಜುನನು ಮಾತ್ರವೇ ಅಲ್ಲ, ನಮ್ಮಲ್ಲಿ ಪ್ರತಿಯೊಬ್ಬರೂ ಐಹಿಕ ಆಸ್ತಿತ್ವದಿಂದಾಗಿ ಆತಂಕದಿಂದ ತುಂಬಿಹೋಗಿದ್ದೇವೆ. ಅಸತ್ ಗೃಹಾತ್, ನಮ್ಮ ಅಸ್ತಿತ್ವ ಅಸ್ತಿತ್ವರಹಿತ ವಾತಾವರಣದಲ್ಲಿದೆ. ಆದರೆ ನಾವು ಅಸ್ತಿತ್ವರಹಿತರಲ್ಲ. ನಮ್ಮ ಅಸ್ತಿತ್ವ ಶಾಶ್ವತವಾದದ್ದು, ಆದರೂ ಹೇಗೋ ಏನೋ ನಾವು ಅಸತ್ ನಲ್ಲಿದ್ದೇವೆ. ಅಸತ್ ಎಂದರೆ ಯಾವುದು ಆಸ್ತಿತ್ವದಲ್ಲಿಲ್ಲವೋ ಅದು. ಅಸಂಖ್ಯಾತ ಮನುಷ್ಯರಲ್ಲಿ ಯಾರು ತಮ್ಮ ಸ್ಥಿತಿಯನ್ನು ಕುರಿತು ಪ್ರಶ್ನಿಸುವರೋ; ನಾನು ಯಾರು, ನಾನು ಈ ತೊಡಕಿನ ಸ್ಥಿತಿಯಲ್ಲಿರುವುದಕ್ಕೆ ಕಾರಣವೇನು ಮುಂತಾಗಿ ಕೇಳುತ್ತಾನೋ, ವ್ಯಕ್ತಿಯು ಸಂಕಟವನ್ನು ಕುರಿತು ಪ್ರಶ್ನಿಸುವ ಹಂತಕ್ಕೆ ಬರದಿದ್ದರೆ, ನನಗೆ ಈ ಕಷ್ಟಗಳೆಲ್ಲ ಬೇಡ ನಾನು ಕಷ್ಟಗಳ ಪರಿಹಾರ ಹುಡುಕುವುದಕ್ಕೆ ಪ್ರಯತ್ನಿಸಿದ್ದೇನೆ, ಆದರೆ ಸೋತಿದ್ದೇನೆ ಒಬ್ಬ ವ್ಯಕ್ತಿಯು ಈ ಸ್ಥಿತಿಯಲ್ಲಿರದಿದ್ದರೆ ಅವನನ್ನು ಪರಿಪೂರ್ಣ ಮನುಷ್ಯ ಎಂದು ಪರಿಗಣಿಸಲಾಗುವುದಿಲ್ಲ. ಇಂತಹ ಪ್ರಶ್ನೆಗಳು ಮನಸ್ಸಿನಲ್ಲಿ ಜಾಗೃತವಾದಾಗ ಮಾನವೀಯತೆ ಪ್ರಾರಂಭವಾಗುತ್ತದೆ. ಬ್ರಹ್ಮಸೂತ್ರದಲ್ಲಿ ಇದನ್ನು ಬ್ರಹ್ಮಜಿಜ್ಞಾಸಾ ಎನ್ನುತ್ತಾರೆ, ಅಥಾತೋ ಬ್ರಹ್ಮ ಜಿಜ್ಞಾಸಾ ಯಾವಾತನ ಮನಸ್ಸಿನಲ್ಲಿ ಈ ರೀತಿಯ ಪ್ರಶ್ನೆಗಳು ಮೂಡುವುದಿಲ್ಲವೋ ಅವನ ಎಲ್ಲಾ ಕಾರ್ಯಗಳು ವಿಫಲವೆಂದೇ ಭಾವಿಸಬೇಕು. ಆದುದರಿಂದ ಯಾರ ಮನಸ್ಸಿನಲ್ಲಿ ಈ ರೀತಿಯ ಪ್ರಶ್ನೆಗಳು ಜಾಗೃತವಾಗಿದೆಯೋ, ನಾನು ಯಾರು?, ನಾನು ಏಕೆ ಕಷ್ಟ ಪಡುತ್ತಿದ್ದೇನೆ? ನಾನು ಎಲ್ಲಿಂದ ಬಂದಿದ್ದೇನೆ? ಸತ್ತ ನಂತರ ಎಲ್ಲಿಗೆ ಹೋಗುತ್ತೇನೆ? ಯಾವಾಗ ಈ ಪ್ರಶ್ನೆಗಳು ಮನುಷ್ಯನ ಮನಸ್ಸಿನಲ್ಲಿ ಮೂಡುತ್ತವೆಯೋ ಆಗ ಅವನು ಭಗವದ್ಗೀತೆಯನ್ನು ಅರ್ಥ ಮಾಡಿಕೊಳ್ಳಲು ಯೋಗ್ಯ ವಿದ್ಯಾರ್ಥಿಯಾಗುತ್ತಾನೆ. ಮತ್ತು ಅವನು ಶ್ರದ್ಧಾವಾನ್ ಆಗಿರಬೇಕು. ಅಂತಹವನಿಗೆ ದೇವೋತ್ತಮ ಪರಮ ಪುರುಷನ ಮೇಲೆ ಧೃಡವಾದ ಗೌರವವಿರಬೇಕು. ಅರ್ಜುನನು ಇಂತಹ ವಿದ್ಯಾರ್ಥಿ.