KN/Prabhupada 0068 - ಪ್ರತಿಯೊಬ್ಬರೂ ಕರ್ಮವನ್ನು ಮಾಡಬೇಕು

Revision as of 21:25, 3 February 2021 by Vanibot (talk | contribs) (Vanibot #0023: VideoLocalizer - changed YouTube player to show hard-coded subtitles version)
(diff) ← Older revision | Latest revision (diff) | Newer revision → (diff)


Lecture on SB 6.1.45 -- Laguna Beach, July 26, 1975

ನಿತಾಯ್: ಯಾವುದೇ ವ್ಯಕ್ತಿಯು ತನ್ನ ಈ ಜೀವನದಲ್ಲಿ ವಿವಿಧ ಕಾರ್ಯಗಳಿಗೆ - ಧಾರ್ಮಿಕ ಅಥವಾ ಅಧಾರ್ಮಿಕ - ಅನುಸಾರವಾಗಿ ಮುಂದಿನ ಜನ್ಮದಲ್ಲಿ ಅದೇ ವ್ಯಕ್ತಿ, ಅದೇ ಪ್ರಮಾಣಕ್ಕೆ, ಅದೇ ರೀತಿಯ ಕರ್ಮಫಲವನ್ನು ಭೋಗಿಸಬೇಕು.

ಪ್ರಭುಪಾದ:

ಯೇನ ಯವಾನ್ ಯಥಾಧರ್ಮೋ
ಧರ್ಮೋ ವೇಹ ಸಮೀಹಿತಃ
ಸ ಏವ ತತ್-ಫಲಂ ಭುಂಕ್ತೇ
ತಥಾ ತಾವದ್-ಅಮುತ್ರ ವೈ
(ಶ್ರೀ. ಭಾ 6.1.45)

ಹಿಂದಿನ ಶ್ಲೋಕದಲ್ಲಿ ನಾವು ಚರ್ಚಿಸಿದಂತೆ ದೇಹವಾನ್ ನಾ ಹಿ ಅಕರ್ಮ-ಕ್ರತ್ ಯಾರಿಗೆ ಈ ಭೌತಿಕ ದೇಹವು ದೊರಕಿದೆಯೋ ಅವರು ಕರ್ಮ ಮಾಡಬೇಕು. ಎಲ್ಲರು ಕರ್ಮ ಮಾಡಬೇಕು. ಆಧ್ಯಾತ್ಮಿಕ ದೇಹದಲ್ಲೂ ಕರ್ಮ ಮಾಡಬೇಕು. ಭೌತಿಕ ದೇಹದಲ್ಲು ಕರ್ಮ ಮಾಡಬೇಕು. ಏಕೆಂದರೆ ಕರ್ಮದ ತತ್ವ ಆತ್ಮ – ಆತ್ಮವು ಚೇತನ ಶಕ್ತಿ – ಆದ್ದರಿಂದ ಕಾರ್ಯ ನಿರತವಾಗಿರುತ್ತದೆ. ಸಜೀವ ದೇಹವೆಂದರೆ ಚಲನೆಯಿರುತ್ತದೆ. ಕರ್ಮಗಳಿವೆ. ಅವನು ನಿಶ್ಕ್ರಿಯನಾಗಿ ಕೂರುವಂತಿಲ್ಲ. ಭಗವದ್ಗೀತೆಯಲ್ಲಿ ಹೇಳಲಾಗಿದೆ, - “ಒಂದು ಕ್ಷಣವು ಕೂಡ ನಿಶ್ಕ್ರಿಯನಾಗಿ ಇರಲಾಗುವುದಿಲ್ಲ.” ಅದು ಜೀವಿಯ ಲಕ್ಷಣ. ಆದ್ದರಿಂದ ಪ್ರತ್ಯೇಕ ದೇಹದ ಅನುಗುಣವಾಗಿ ಕರ್ಮ ನಡೆಯುತ್ತಿದೆ. ನಾಯಿಯು ಓಡುತ್ತಿದೆ, ಮನುಷ್ಯನೂ ಓಡುತ್ತಿದ್ದಾನೆ. ಆದರೆ ಮನುಷ್ಯನು ಮೋಟಾರ್ ಕಾರಿನಲ್ಲಿ ಓಡಾಡುವುದರಿಂದ ತಾನು ಬಹಳ ಸಭ್ಯನೆಂದು ತಿಳಿದುಕೊಂಡಿದ್ದಾನೆ. ಇಬ್ಬರೂ ಓಡುತ್ತಿದ್ದಾರೆ, ಅದರೆ ಮನುಷ್ಯ ತನಗೆ ದೊರಕಿರುವ ಪ್ರತ್ಯೇಕ ದೇಹ ಮಾದರಿಯಿಂದ ಗಾಡಿ ಅಥವ ಸೈಕಲ್ ತಯಾರಿಸಿ ಅದರಲ್ಲಿ ಓಡಾಡುತ್ತಾನೆ. “ನಾನು ನಾಯಿಗಿಂತ ವೇಗವಾಗಿ ಚಲಿಸುತ್ತಿದ್ದೇನೆ. ಆದ್ದರಿಂದ ನಾನು ಸಭ್ಯ” ಎಂದು ಅವನು ಆಲೋಚಿಸುತ್ತಿದ್ದಾನೆ. ಇದು ಆಧುನಿಕ ಮನಸ್ಥಿತಿ. ಅವನಿಗೆ ಓಡುವುದರಲ್ಲಿ ವ್ಯತ್ಯಾಸವೆನೆಂದು ತಿಳಿಯದು… ಐವತ್ತು ಮೈಲಿ ವೇಗದಲ್ಲಿ, ಐದು ಮೈಲಿ ವೇಗದಲ್ಲಿ, ಐದು ಸಾವಿರ ಮೈಲಿ ವೇಗದಲ್ಲಿ ಅಥವ ಐವತ್ತು ಲಕ್ಷ ಮೈಲಿ ವೇಗದಲ್ಲಿ. ಬ್ರಹ್ಮಾಂಡ ಅಪಾರ. ನೀನು ಎಷ್ಟೆ ವೇಗವನ್ನು ತಿಳಿದರು ಅದು ಸಾಕಾಗದು. ಇನ್ನು ಸಾಕಾಗದು.

“ನಾನು ಸಭ್ಯ, ಏಕೆಂದರೆ ನಾಯಿಗಿಂತ ಹೆಚ್ಚು ವೇಗದಿಂದ ಚಲಿಸಬಲ್ಲೆ”, ಎಂದುಕೊಂಡರೆ ಅದು ಜೀವನವಲ್ಲ.

ಪಂತಾಸ್ ತು ಕೋಟಿ-ಶತ-ವತ್ಸರ-ಸಂಪ್ರಗಮ್ಯೊ
ವಾಯೋರ್ ಅತಾಪಿ ಮನಸೊ ಮುನಿ-ಪುಂಗವಾನಾಮ್
ಸೋ ಅಪಿ ಅಸ್ತಿ ಯತ್-ಪ್ರಪದ-ಸೀಮ್ನಿ ಅವಿಚಿಂತ್ಯ ತತ್ವೆ
ಗೋವಿಂದಮ್ ಆದಿ ಪುರುಶಾಮ್ ತಮ್ ಅಹಮ್ ಭಜಾಮಿ
(ಬ್ರಹ್ಮ ಸಂಹಿತ 5.34)

ನಮ್ಮ ವೇಗ… ಏಕೆ ಬೇಕು ವೇಗ? ನಾವು ಒಂದು ನಿರ್ಧಿಷ್ಟ ಗಮ್ಯಸ್ಥಾನಕ್ಕೆ ಹೋಗಬೇಕೆಂದಿದ್ದರೆ ಅದುವೇ ನಮ್ಮ ವೇಗಕ್ಕೆ ಕಾರಣ. ನಿಜವಾದ ಗಮ್ಯಸ್ಥಾನವೆಂದರೆ ಅದು ಗೋವಿಂದ, ವಿಷ್ಣು. ನ ತೇ ವಿದುಹು ಸ್ವಾರ್ಥ-ಗತಿಮ್ ಹಿ ವಿಷ್ಣು. ಅವರು ವಿವಿಧ ವೇಗಗಳಲ್ಲಿ ಚಲಿಸುತ್ತಿದ್ದಾರೆ , ಆದರೆ ಗಮ್ಯವೇನೆಂದು ತಿಳಿಯದು. ನಮ್ಮ ದೇಶದ ಮಹಾನ್ ಕವಿ ಆದಂತಹ ರಬೀಂದ್ರನಾಥ್ ಟಾಗೋರವರು ಒಂದು ಲೇಖನದಲ್ಲಿ ಬರೆದ್ದಿದ್ದಾರೆ – ನಾನು ಓದಿದ್ದೆ – ಅವರು ಲಂಡನ್ ನಲ್ಲಿ ಇರಬೇಕಾದರೆ. ನಿಮ್ಮ ದೇಶದಲ್ಲಿ, ಪಶ್ಚಿಮ ದೇಶಗಳಲ್ಲಿ, ಮೋಟಾರ್ ಕಾರುಗಳು ಹಾಗು…ಅತಿ ವೇಗದಿಂದ ಚಲಿಸುತ್ತವೆ. ರಬೀಂದ್ರನಾಥ್ ಟಾಗೋರವರು ಒಬ್ಬ ಕವಿ. ಅವರು ಯೋಚಿಸಿದರು “ಈ ಆಂಗ್ಲರ ದೇಶ ಇಷ್ಟು ಚಿಕ್ಕದಾಗಿದೆ, ಆದರೆ ಅವರು ಚಲ್ಲಿಸುತ್ತಿರುವ ವೇಗವನ್ನು ನೋಡಿದರೆ ಸಮುದ್ರದಲ್ಲಿ ಬೀಳುತ್ತಾರೆ.” ಅವರು ಹಾಗೆ ಟೀಕಿಸಿದರು. ಏಕೆ ಅವರು ಅಷ್ಟು ವೇಗದಲ್ಲಿ ಓಡುತ್ತಿರುವುದು? ಅಂತೆಯೇ ನಾವು ಕೂಡ ನರಕಕ್ಕೆ ಅತಿ ವೇಗದಿಂದ ಓಡುತ್ತಿದ್ದೇವೆ. ಇದು ನಮ್ಮ ಸ್ಥಿತಿ, ಏಕೆಂದರೆ ನಮಗೆ ಗಮ್ಯ ಯಾವುದೆಂದು ತಿಳಿಯದು. ನನಗೆ ಗಮ್ಯ ಯಾವುದೆಂದು ತಿಳಿಯದೆ ಅತಿ ವೇಗದಿಂದ ಕಾರನ್ನು ಚಲಿಸಿದರೆ ಅದರ ಪರಿಣಾಮವೇನಾಗುತ್ತದೆ? ದುರಂತವೆ ಪರಿಣಾಮ. ನಾವು ಏಕೆ ಓಡುತ್ತಿದ್ದೇವೆಯೆಂದು ತಿಳಿದಿರಬೇಕು. ನದಿಯು ಪ್ರವಾಹವಾಗಿ ಹರಿಯುತ್ತದೆ, ಅದರೆ ಅದರ ಗಮ್ಯಸ್ಥಾನ ಸಮುದ್ರವು. ನದಿಯು ಸಮುದ್ರವನ್ನು ಸೇರುತ್ತಲೆ ಇನ್ನು ಗಮ್ಯವಿರುವುದಿಲ್ಲ. ಅಂತೆಯೇ ನಮ್ಮ ಗಮ್ಯವು ಯಾವುದೆಂದು ನಮಗೆ ತಿಳಿದಿರಬೇಕು ನಮ್ಮ ಗಮ್ಯವು ವಿಷ್ಣು, ಭಗವಂತ. ನಾವು ಭಗವಂತನ ಅವಿಭಾಜ್ಯ ಅಂಶಗಳು. ನಾವು… ಹೇಗೋ ಈ ಭೌತಿಕ ಜಗತಲ್ಲಿ ಬಿದ್ದೆವು. ಆದ್ದರಿಂದ ನಮ್ಮ ಜೀವನದ ಗಮ್ಯವು ಮನೆಗೆ ಹಿಂತಿರುಗುವುದು, ಮರಳಿ ಭಗವದ್ಧಾಮಕ್ಕೆ. ಅದುವೇ ನಮ್ಮ ಗಮ್ಯ. ಬೇರೆ ಯಾವ ಗಮ್ಯವೂ ಇಲ್ಲ. ಆದ್ದರಿಂದ “ನಿನ್ನ ಜೀವನದ ಗುರಿಯನ್ನು ನಿಗದಿಪಡಿಸಿಕೊ” ಎಂದು ನಮ್ಮ ಕೃಷ್ಣ ಪ್ರಜ್ಞೆ ಚಳುವಳಿ ಕಲಿಸುತ್ತಿದೆ. ಜೀವನದ ಗುರಿಯೇನು? ಮನೆಗೆ ಹಿಂತಿರುಗು, ಮರಳಿ ಭಗವದ್ಧಾಮಕ್ಕೆ. ನೀನು ಈ ಕಡೆ, ಅದಕ್ಕೆ ವಿರುದ್ಧವಾದ ದಿಕ್ಕಿನಲ್ಲಿ, ಅಂದರೆ ನರಕದ ಕಡೆ ಹೋಗುತ್ತಿರುವೆ. ಅದು ನಿನ್ನ ಗಮ್ಯವಲ್ಲ. ಈ ಕಡೆ ಹೋಗು, ಮರಳಿ ಭಗವದ್ಧಾಮಕ್ಕೆ. ಅದು ನಮ್ಮ ಪ್ರಚಾರ.