KN/Prabhupada 0078 - ಕೇವಲ ಶೃದ್ಧೆಯಿಂದ ಆಲಿಸಲು ಪ್ರಯತ್ನಿಸು

Revision as of 21:26, 3 February 2021 by Vanibot (talk | contribs) (Vanibot #0023: VideoLocalizer - changed YouTube player to show hard-coded subtitles version)
(diff) ← Older revision | Latest revision (diff) | Newer revision → (diff)


Lecture on SB 1.2.16 -- Los Angeles, August 19, 1972

ಶುಶ್ರುಷೋಃ ಶೃದ್ಧಾನಸ್ಯ ವಾಸುದೇವ ಕಥಾ ರುಚಿಃ ಹಿಂದಿನ ಶ್ಲೋಕದಲ್ಲಿ, ಯದ್ ಅನುಧ್ಯಾಸಿನಾ ಯುಕ್ತಾಃ (ಶ್ರೀ.ಭಾ 1.2.15), ಎಂದು ವಿವರಿಸಲಾಗಿದೆ. ಎಂದಿಗು ಧ್ಯಾನದಲ್ಲಿ ತಲ್ಲೀನನಾಗಿರಬೇಕು. ಅದುವೇ ಒಂದು ಖಡ್ಗ. ನೀನು ಈ ಕೃಷ್ಣ ಪ್ರಜ್ಞೆಯ ಖಡ್ಗವನ್ನು ಎತ್ತಿಕೊಳ್ಳಬೇಕು. ಆಗ ನೀನು ಮುಕ್ತನಾಗುವೆ. ಗಂಟನ್ನು ಈ ಖಡ್ಗ ಕತ್ತರಿಸುತ್ತದೆ. ಆದರೆ ಈ ಖಡ್ಗವನ್ನು ಪಡೆಯುವುದು ಹೇಗೆ? ಆ ಪ್ರಕ್ರಿಯೆಯನ್ನು ಇಲ್ಲಿ ವಿವರಿಸಲಾಗಿದೆ - ಕೇವಲ ಶೃದ್ಧೆಯಿಂದ ನೀನು ಆಲಿಸಲು ಪ್ರಯತ್ನಿಸು. ಆಗ ನಿನಗೆ ಖಡ್ಗ ಸಿಗುತ್ತದೆ. ಅಷ್ಟೆ. ವಾಸ್ತವಿಕವಾಗಿ, ನಮ್ಮ ಈ ಕೃಷ್ಣ ಪ್ರಜ್ಞೆ ಆಂದೋಲನವು ಹರಡುತ್ತಿದೆ. ಕೇವಲ ಆಲಿಸುವದರ ಮೂಲಕ, ಒಬ್ಬರ ನಂತರ ಒಬ್ಬರು ಈ ಖಡ್ಗವನ್ನು ಪಡೆಯುತ್ತಿದ್ದೇವೆ. ನಾನು ಈ ಆಂದೋಲನವನ್ನು ನ್ಯೂ ಯಾರ್ಕ್ ನಲ್ಲಿ ಶುರುಮಾಡಿದೆ. ನಿಮ್ಮೆಲ್ಲರಿಗೂ ಇದು ತಿಳಿದಿದೆ. ನನ್ನ ಹತ್ತಿರ ನಿಜವಾಗಿಯು ಯಾವುದೇ ಖಡ್ಗವಿರಲಿಲ್ಲ. ಕೆಲವು ಧರ್ಮತತ್ವಗಳ ಹಾಗೆ. ಅವರು ಧರ್ಮಗ್ರಂಥಗಳನ್ನು ಒಂದು ಕೈಯಲ್ಲಿ ಹಾಗು ಖಡ್ಗವನ್ನು ಇನ್ನೊಂದು ಕೈಯಲ್ಲಿ ಹಿಡಿದು ಹೇಳುತ್ತಾರೆ: “ಈ ಧರ್ಮಗ್ರಂಥವನ್ನು ಸ್ವೀಕರಿಸು, ಇಲ್ಲವೆ ನಿನ್ನ ಶಿರಚ್ಛೇದ ಮಾಡುತ್ತೇನೆ.” ಇದು ಒಂದು ರೀತಿಯ ಧರ್ಮಬೋಧನೆ. ಆದರೆ ನನ್ನ ಹತ್ತಿರ ಇದ್ದಂತ ಖಡ್ಗ ಆ ರೀತಿಯ ಖಡ್ಗವಲ್ಲ. ಈ ಖಡ್ಗ – ಜನರಿಗೆ ಆಲಿಸುವ ಅವಕಾಶ ಕೊಡುವುದು. ಅಷ್ಟೇ.

ವಾಸುದೇವ ಕಥಾ ರುಚಿಃ. ಅವನಿಗೆ ರುಚಿ ಕಂಡಂತೆಯೆ… ರುಚಿ. ರುಚಿ ಅಂದರೆ ಸವಿಯುವುದು. “ಆಹ್ಹಾ, ಕೃಷ್ಣನು ಬಹಳ ಹಿತವಾಗಿ ಮಾತನಾಡುತ್ತಿದ್ದಾನೆ. ಕೇಳಿಸಿಕೊಳ್ಳುತ್ತೇನೆ.” ಹೀಗೆ ನಿನಗೆ ತಕ್ಷಣ ಖಡ್ಗ ದೊರಕುತ್ತದೆ. ಖಡ್ಗ ನಿನ್ನ ಕೈಯಲ್ಲಿದೆ. ವಾಸುದೇವ ಕಥಾ ರುಚಿಃ. ಆದರೆ ಈ ರುಚಿ ಯಾರಿಗೆ ಸಿಗುತ್ತದೆ? ಇದನ್ನು ಸವಿಯುವುದು ಯಾರು? ನಾನು ಹಲವಾರು ಸಲ ವಿವರಿಸಿರುವಹಾಗೆ, ರುಚಿಯೆಂದರೆ, ಸಕ್ಕರೆಕಲ್ಲಿನ ರುಚಿಯಂತೆ. ಅದು ಸಿಹಿಯೆಂದು ಎಲ್ಲರಿಗು ಗೊತ್ತಿದೆ. ಆದರೆ ಕಾಮಾಲೆ ರೋಗ ಬಂದವನಿಗೆ ನೀವು ತಿನಿಸಿದರೆ ಅದು ಕಹಿ ಎನ್ನುತ್ತಾನೆ. ಕಲ್ಲುಸಕ್ಕರೆ ಸಿಹಿಎಂದು ಎಲ್ಲರುಗು ಗೊತ್ತಿದೆ ಆದರೆ ಯಾರು ಕಾಮಾಲೆರೋಗದಿಂದ ನರಳುತ್ತಿರುವನೋ ಅವನು ಕಲ್ಲುಸಕ್ಕರೆ ತಿಂದೆರ ಬಹಳ ಕಹಿ ಎನಿಸುತ್ತದೆ, ಇದು ಎಲ್ಲರಿಗೂ ತಿಳಿದಿದೆ. ಅದು ನಿಜ.

ಆದ್ದರಿಂದ ಈ ರುಚಿ, ವಾಸುದೇವ ಕಥಾ, ಕೃಷ್ಣ ಕಥಾ, ಕೇಳುವ ರುಚಿ, ಅದು ಭೌತಿಕತೆಯ ರೋಗಿಗೆ ಸವಿಯಲು ಆಗದು. ಈ ರುಚಿಯನ್ನು ಅರಿಯಲು ಪ್ರಾರಂಭಿಕ ಚಟುವಟಿಕೆಗಳಿವೆ. ಏನದು? ಮೊದಲನೆಯದು: “ಓ, ಇದು ಬಹಳ ಚೆನ್ನಾಗಿದೆ”, ಎಂದು ಮೆಚ್ಚುವುದು. ಆದೌ ಶ್ರದ್ಧಾ, ಶ್ರದ್ಧಧಾನ. ಆದ್ದರಿಂದ ಶ್ರದ್ಧಾ, ಆ ಮೆಚ್ಚುಗೆ, ಅದುವೇ ಆರಂಭ. ತದನಂತರ ಸಾಧುಸಂಗ (ಚೈ.ಚ ಮಧ್ಯ 22.83). ನಂತರ ಸಮ್ಮಿಲಿತವಾಗುವುದು: “ಸರಿ, ಈ ಜನರು ಕೃಷ್ಣನನ್ನು ಕರಿತು ಜಪಿಸುತ್ತಿರುವರು ಹಾಗು ಚರ್ಚಿಸುತ್ತಿರುವರು. ನಾನು ಹೋಗಿ ಕುಳಿತು ಇನ್ನಷ್ಟು ಆಲಿಸುತ್ತೇನೆ.” ಇದನ್ನು ಸಾಧುಸಂಗ ಎನ್ನುತ್ತಾರೆ. ಭಕ್ತರೊಡನೆ ಸಹವಾಸ ಮಾಡುವುದು. ಇದು ಎರಡನೇಯ ಘಟ್ಟ. ಮೂರನೇಯ ಘಟ್ಟವು ಭಜನಕ್ರಿಯಾ. ಉತ್ತಮ ಸಹವಾಸ ಪಡೆದಾಗ, ಅವನಿಗೆ ಅನಿಸುತ್ತದೆ, “ಏಕೆ ನಾನು ಶಿಷ್ಯನಾಗಬಾರದು?” ಎಂದು. ಆಗ ನಾವು ಅರ್ಜಿಯನ್ನು ಸ್ವೀಕರಿಸುತ್ತೇವೆ, “ಪ್ರಭುಪಾದ, ನನ್ನನ್ನು ದಯಮಾಡಿ ಶಿಷ್ಯನಾಗಿ ಸ್ವೀಕರಿಸಿ.” ಇದು ಭಜನಕ್ರಿಯೆಯ ಆರಂಭ. ಭಜನಕ್ರಿಯಾ ಅಂದರೆ ಫ್ರಭುವಿನ ಸೇವೆಯಲ್ಲಿ ತೊಡಗಿರುವುದು. ಇದುವೇ ಮೂರನೇಯ ಘಟ್ಟ.