KN/760612 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಡೆಟ್ರಾಯಿಟ್

Revision as of 05:00, 5 August 2021 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಕೃಷ್ಣ ಕಪ್ಪು, ಆದರೂ ನಾವು ಆತನನ್ನು ಆರಾಧಿಸುತ್ತೇವೆ. (ನಗು) ನೀವು ನಮ್ಮ ಮೂರ್ತಿಯನ್ನು ನೋಡಿದ್ದೀರಾ? ಹೌದು. ಕೃಷ್ಣ ನಿಮ್ಮ ಸಮುದಾಯದವನು. (ಪ್ರಭುಪಾದರು ನಗುತ್ತಾರೆ) ಕಪ್ಪು ಅಥವಾ ಬಿಳಿ ಪ್ರಶ್ನೆಯೇ ಇಲ್ಲ. ಕೃಷ್ಣ ಪ್ರಜ್ಞೆಯು ಚರ್ಮದ ಬಣಕ್ಕೆ ಅತೀತವಾಗಿದೆ – ಆತ್ಮಕ್ಕೆ ಸಂಬಂಧಿತವಾಗಿದೆ. ಅವನು ಕಪ್ಪು, ಅಥವಾ ಬಿಳಿ, ಅಥವಾ ಹಳದಿ ಬಣ್ಣದವನೆ ಎಂಬುದು ಮುಖ್ಯವಲ್ಲ. ದೇಹಿನೋ ಅಸ್ಮಿನ್‌ ಯಥಾ ದೇಹೇ (ಭ.ಗೀ 2.13). ಇದು ಪ್ರಥಮ ಪಾಠ - ದೇಹವನ್ನು ಗ್ರಹಿಸಬೇಡಿ, ದೇಹದೊಳಗಿನ ಚೈತನ್ಯವನ್ನು ಗ್ರಹಿಸಿ. ಅದು ಮುಖ್ಯ. ಅದನ್ನು ನಾವು ಅರ್ಥಮಾಡಿಕೊಳ್ಳಬೇಕು. ನಾವು ಆ ಆಧ್ಯಾತ್ಮಿಕ ಮಟ್ಟದಿಂದ ಮಾತನಾಡುತ್ತಿದ್ದೇವೆ. ಆದ್ದರಿಂದ, ಕೆಲವೊಮ್ಮೆ ಇದು ಸ್ವಲ್ಪ ಕಷ್ಟಕರವಾಗಿರುತ್ತದೆ, ಏಕೆಂದರೆ ಜನರು ದೇಹಾತ್ಮಾಭಿಮಾನದಲ್ಲಿ ಹೆಚ್ಚು ಲೀನರಾಗುತ್ತಾರೆ. ಆದರೆ ಎಲ್ಲಿ ದೇಹಾತ್ಮಾಭಿಮಾನವಿಲ್ಲವೊ, ಆ ಮಟ್ಟದಿಂದ ನಮ್ಮ ತತ್ತ್ವವು ಪ್ರಾರಂಭವಾಗುತ್ತದೆ."
760612 - ಸಂಭಾಷಣೆ with Congressman Jackie Vaughn - ಡೆಟ್ರಾಯಿಟ್