KN/Prabhupada 0008 - ಕೃಷ್ಣ "ನಾನು ಎಲ್ಲರ ತಂದೆ" ಎನ್ನುತ್ತಾನೆ
Janmastami Lord Sri Krsna's Appearance Day Lecture -- London, August 21, 1973
ಆದ್ದರಿಂದ, ಕನಿಷ್ಠ ಭಾರತದಲ್ಲಿ, ಎಲ್ಲಾ ಮಹಾನ್ ವ್ಯಕ್ತಿಗಳು, ಸಂತರು, ಋಷಿಗಳು, ಮತ್ತು ಆಚಾರ್ಯರು, ಅವರು ಈ ಆಧ್ಯಾತ್ಮ ಜ್ಞಾನವನ್ನು ಬಹಳ ಚೆನ್ನಾಗಿ ಮತ್ತು ಪೂರ್ಣವಾಗಿ ಬೆಳಸಿದ್ದಾರೆ. ಆದರೆ ನಾವು ಅದರ ಲಾಭ ಪಡೆಯುತ್ತಿಲ್ಲ. ಈ ಶಾಸ್ತ್ರಗಳು ಮತ್ತು ನಿರ್ದೇಶನಗಳನ್ನು ಕೇವಲ ಭಾರತೀಯರಿಗೆ ಅಥವಾ ಹಿಂದುಗಳು ಅಥವಾ ಬ್ರಾಹ್ಮಣರಿಗಾಗಿ ಮಾತ್ರವಲ್ಲ. ಇಲ್ಲ, ಇದು ಎಲ್ಲರಿಗೂ ಸೇರಿದೆ ಏಕೆಂದರೆ ಕೃಷ್ಣನು ಹೇಳುತ್ತಾನೆ:
- ಸರ್ವ-ಯೋನಿಷು ಕೌಂತೇಯ
- ಸಂಭವಂತಿ ಮೂರ್ತಯಃ ಯಾಃ
- ತಾಸಾಮ್ ಮಹದ್ ಬ್ರಹ್ಮ ಯೋನಿರ್
- ಅಹಂ ಬೀಜ-ಪ್ರದಃ ಪಿತಾ
- (ಭ.ಗೀ 14.4)
ಕೃಷ್ಣನು ಹೇಳುತ್ತಾನೆ, "ಪ್ರತಿಯೊಬ್ಬರಿಗೂ ನಾನೇ ತಂದೆ." ಆದ್ದರಿಂದ, ಅವನು ನಮ್ಮನು ಶಾಂತಿಯುತವಾಗಿ ಮತ್ತು ಸಂತೋಷವಾಗಿರಿಸಲು ಬಹಳ ಕಾತುರನಾಗಿದ್ದಾನೆ. ಹೇಗೆ ಒಬ್ಬ ತಂದೆ ಅವನ ಮಗ ಸುಖವಾಗಿ ಮತ್ತು ಸಂತೋಷವಾಗಿರುವುದನ್ನು ನೋಡಲು ಬಯಸುತ್ತಾನೋ, ಅದೇ ರೀತಿ ಕೃಷ್ಣನು ಸಹ ಪ್ರತಿಯೊಬ್ಬರನು ಸುಖ ಮತ್ತು ಸಂತೋಷದಿಂದ ಇರುವುದನ್ನು ನೋಡಲು ಬಯಸುತ್ತಾನೆ. ಆದ್ದರಿಂದ, ಕೆಲವು ಸಮಯ ಅವನು ಅವತರಿಸುತ್ತಾನೆ. ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ ಭವತಿ (ಭ.ಗೀ 4.7), ಇದೇ ಕೃಷ್ಣನ ಆಗಮನದ ಉದ್ದೇಶ. ಆದ್ದರಿಂದ, ಯಾರು ಆ ಕೃಷ್ಣನ ಸೇವಕರೊ, ಕೃಷ್ಣನ ಭಕ್ತರೊ, ಅವರು ಕೃಷ್ಣನ ಧರ್ಮಪ್ರಚಾರವನ್ನು ಸ್ವೀಕರಿಸಬೇಕು. ಅವರು ಕೃಷ್ಣನ ಧರ್ಮಪ್ರಚಾರ ಕಾರ್ಯವನ್ನು ತೆಗೆದುಕೊಳ್ಳಬೇಕು. ಇದೇ ಚೈತನ್ಯ ಮಹಾಪ್ರಭುಗಳ ಆದೇಶ:
- ಆಮಾರ ಅಜ್ಞಾನ ಗುರು ಹಣಾ ಎಯಿ ದೇಶ
- ಯಾರೆ ದೇಖ ತಾರೆ ಕಹ ಕೃಷ್ಣ-ಉಪದೇಶ
- (ಚೈ.ಚ ಮಧ್ಯ 7.128)
ಕೃಷ್ಣ-ಉಪದೇಶ. ಕೃಷ್ಣನ ಭಗವದ್ಗೀತೆಯಲ್ಲಿ ಏನು ಹೇಳಿರುವನೊ ಅದನ್ನು ಬೋಧಿಸಲು ಪ್ರಯತ್ನಿಸಿ. ಇದೇ ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಚೈತನ್ಯ ಮಹಾಪ್ರಭುಗಳು ಹೇಳುತ್ತಾರೆ:
- ಭಾರತ-ಭೂಮಿತೆ ಮನುಷ್ಯ ಜನ್ಮ ಹೈಲ ಯಾರ
- ಜನ್ಮ ಸಾರ್ಥಕ ಕರಿ ಪರ-ಉಪಕಾರ
- (ಚೈ.ಚ ಆದಿ 9.41)
ಆದ್ದರಿಂದ, ಭಾರತೀಯರು ಪರೋಪಕಾರಕ್ಕಾಗಿಯೇ ಮಿಸಲು. ಭಾರತೀಯರು ಇತರರ ದುರ್ಬಳಕೆ ಮಾಡುವುದ್ದಕೋಸ್ಕರವಲ್ಲ. ಇದು ಭಾರತೀಯರ ವ್ಯವಹಾರವಲ್ಲ. ಭಾರತದ ಇತಿಹಾಸವು ಯಾವಗಲು ಪರೋಪಕಾರಕ್ಕಾಗಿಯೆ. ಹಿಂದಿನ ಕಾಲದಲ್ಲಿ, ಪ್ರಪಂಚದ ಎಲ್ಲಾ ಭಾಗಗಳಿಂದಲೂ ಆಧ್ಯಾತ್ಮಿಕ ಜೀವನದ ಬಗ್ಗೆ ಅರಿಯಲು ಭಾರತಕ್ಕೆ ಬರುತ್ತಿದ್ದರು. ಯೇಸು ಕ್ರಿಸ್ತನು ಸಹ ಅಲ್ಲಿಗೆ ಹೋಗಿದ್ದರು. ಮತ್ತು ಚೈನದಿಂದ ಮತ್ತು ಇತರ ದೇಶಗಳಿಂದ ಬಂದರು. ಇದು ಇತಿಹಾಸ. ನಾವು ನಮ್ಮ ಈ ಆಸ್ತಿಯನ್ನು ಮರೆಯುತ್ತಿದ್ದೇವೆ. ನಾವು ಎಷ್ಟು ಕಲ್ಲೆದೆಯಾಗಿದ್ದೇವೆ. ಎಂಥಾ ಅದ್ಭುತ ಚಳುವಳಿ, ಕೃಷ್ಣ ಪ್ರಜ್ಞೆ, ಪ್ರಪಂಚದಾದ್ಯಂತ ನಡೆಯುತ್ತಿದೆ, ಆದರೆ ನಮ್ಮ ಭಾರತೀಯರು ಕಲ್ಲೆದೆಯವರು, ನಮ್ಮ ಸರ್ಕಾರವು ಕಲ್ಲೆದೆಯಾಗಿದೆ. ಅವರು ಇದನ್ನು ಸ್ವೀಕರಿಸುವುದಿಲ್ಲ. ಇದು ನಮ್ಮ ದೌರ್ಭಾಗ್ಯ. ಆದರೆ ಇದು ಚೈತನ್ಯ ಮಹಾಪ್ರಭುಗಳ ಧ್ಯೇಯ. ಅವರು ಹೇಳುತ್ತಾರೆ ಯಾವುದೆ ಭಾರತೀಯ, ಭಾರತ-ಭೂಮಿತೆ ಮನುಶ್ಯ ಜನ್ಮ, ಅವನು ಒಂದು ವೇಳೆ ಮಾನವನಾದ್ದರೆ, ಅವನು ಈ ವೈದಿಕ ಸಾಹಿತ್ಯದ ಪ್ರಯೋಜನವನ್ನು ತೆಗೆದುಕೊಳ್ಳುತ್ತಾ ಅವನ ಜೀವನ ಸಾರ್ಥಕ ಮಾಡಿಕೊಳ್ಳಬೇಕು, ಮತ್ತು ಈ ಜ್ಞಾನವನ್ನು ಪ್ರಪಂಚದೆಲ್ಲೆಡೆ ಪ್ರಚಾರ ಮಾಡಬೇಕು. ಇದೇ ಪರೋಪಕಾರ. ಆದ್ದರಿಂದ, ಭಾರತ ಮಾಡಬಹುದು. ಅವರು ನಿಜವಾಗಿಯು ನಮ್ಮನ್ನು ಶ್ಲಾಘಿಸುತ್ತಿದ್ದಾರೆ. ಈ ಯುರೋಪಿಯನ್ನರು, ಅಮೆರಿಕನ್ ಯುವಕರು, ಅವರು ಎಷ್ಟು ಮಹಾನ್ ಎಂದು ಶ್ಲಾಘನೆ ಮಾಡುತ್ತಿದ್ದಾರೆ... ಹೇಗೆ ಅವರು ಈ ಚಳುವಳಿಯಿಂದ ಲಾಭ ಪಡೆಯುತ್ತೆದ್ದಾರೆ ಎಂದು ನನಗೆ ದಿನವು ಡಜನ್‌ಗಟ್ಟಲೆ ಪತ್ರಗಳು ಬರುತ್ತವೆ. ವಾಸ್ತವವಾಗಿ, ಇದು ಸತ್ಯ. ಇದು ಸತ್ತ ಮನುಷ್ಯನಿಗೆ ಜೀವ ಕೊಡುತ್ತಿದೆ. ಆದ್ದರಿಂದ, ನಾನು ವಿಶೇಷವಾಗಿ ಭಾರತೀಯರನ್ನು ಮನವಿ ಮಾಡುತೇನೆ, ವಿಶೇಷವಾಗಿ ಹಿಸ್ ಎಕ್ಸಲೆನ್ಸಿ, ದಯವಿಟ್ಟು ಈ ಚಳುವಳಿಗೆ ಸಹಕರಿಸಿ, ಹಾಗು ನಿಮ್ಮ ಮತ್ತು ಇತರರ ಜೀವನವನ್ನು ಸಾರ್ಥಕಗೊಳಿಸಿರಿ. ಇದೇ ಕೃಷ್ಣನ ದೇಯ್ಯ, ಕೃಷ್ಣನ ಆಗಮನದ ಕಾರಣ. ನಿಮಗೆ ಬಹಳ ಧನ್ಯವಾದಗಳು.