KN/681021c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸಿಯಾಟಲ್

Revision as of 00:09, 5 November 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನನ್ನ ಗೃಹಸ್ಥ ಜೀವನದಲ್ಲಿ, ನಾನು ನನ್ನ ಹೆಂಡತಿ ಮತ್ತು ಮಕ್ಕಳ ಮಧ್ಯದಲ್ಲಿದ್ದಾಗ, ಕೆಲವೊಮ್ಮೆ ನಾನು ನನ್ನ ಆಧ್ಯಾತ್ಮಿಕ ಗುರುಗಳ ಕನಸು ಕಾಣುತ್ತಿದ್ದೆ, ಅವನು ನನ್ನನ್ನು ಕರೆಯುತ್ತಿದ್ದಾರೆ, ಮತ್ತು ನಾನು ಅವರನ್ನು ಹಿಂಬಾಲಿಸುತ್ತಿದ್ದೇನೆ. ನನ್ನ ಕನಸು ಮುಗಿದಾಗ, ನಾನು ಯೋಚಿಸುತ್ತಿದ್ದೆ - ನಾನು ಸ್ವಲ್ಪ ಗಾಬರಿಗೊಂಡೆ 'ಓಹ್, ಗುರು ಮಹಾರಾಜರು ನಾನು ಸನ್ಯಾಸಿಯಾಗಬೇಕೆಂದು ಬಯಸುತ್ತತ್ತಾರೆ, ನಾನು ಸನ್ಯಾಸವನ್ನು ಹೇಗೆ ಸ್ವೀಕರಿಸಲು ಸಾಧ್ಯ ?' ಆ ಸಮಯದಲ್ಲಿ, ನಾನು ನನ್ನ ಕುಟುಂಬವನ್ನು ತ್ಯಜಿಸಬೇಕು ಮತ್ತು ಯಾಚಕ ಆಗಬೇಕು ಎಂದು ನನಗೆ ತುಂಬಾ ತೃಪ್ತಿಯಿರಲಿಲ್ಲ. ಆ ಸಮಯದಲ್ಲಿ, ಅದೊಂದು ಭಯಾನಕ ಭಾವನೆ. ಕೆಲವೊಮ್ಮೆ ನಾನು 'ಇಲ್ಲ, ನಾನು ಸನ್ಯಾಸವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ' ಎಂದು ಯೋಚಿಸುತ್ತಿದ್ದೆ. ಮತ್ತೆ ಮತ್ತೆ ನಾನು ಅದೇ ಕನಸನ್ನು ನೋಡಿದೆ. ಆದ್ದರಿಂದ ಈ ರೀತಿಯಾಗಿ ನಾನು ಅದೃಷ್ಟಶಾಲಿಯಾಗಿದ್ದೆ. ನನ್ನ ಗುರು ಮಹಾರಾಜರು ಈ ಭೌತಿಕ ಜೀವನದಿಂದ ನನ್ನನ್ನು ಹೊರಗೆಳೆದರು. ನಾನು ಏನನ್ನೂ ಕಳೆದುಕೊಂಡಿಲ್ಲ. ಅವರು ನನ್ನ ಮೇಲೆ ತುಂಬಾ ಕರುಣಾಮಯಿ. ನಾನು ಗಳಿಸಿದೆ. ನಾನು ಮೂರು ಮಕ್ಕಳನ್ನು ಬಿಟ್ಟಿದ್ದೇನೆ, ನನಗೀಗ ಮುನ್ನೂರು ಮಕ್ಕಳು ಸಿಕ್ಕಿದ್ದಾರೆ. ಹಾಗಾಗಿ ನಾನು ನಷ್ಟ ಹೊಂದಿದವನಲ್ಲ. ಇದು ವಸ್ತು ಪರಿಕಲ್ಪನೆ. ಕೃಷ್ಣನನ್ನು ಸ್ವೀಕರಿಸುವ ಮೂಲಕ ನಾವು ನಷ್ಟ ಹೊಂದುತ್ತೇವೆ ಎಂದು ನಾವು ಭಾವಿಸುತ್ತೇವೆ. ಯಾರೂ ನಷ್ಟ ಹೊಂದುವುದಿಲ್ಲ."
681021 - ಉಪನ್ಯಾಸ ಭಕ್ತಿಪ್ರಜ್ಞ ಕೇಶವ ಮಹಾರಾಜರ ತಿರೋಭಾವ ಜಯಂತಿ - ಸಿಯಾಟಲ್