KN/760105 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನೆಲ್ಲೂರು

Revision as of 05:12, 5 June 2021 by Vanibot (talk | contribs) (Vanibot #0025: NectarDropsConnector - update old navigation bars (prev/next) to reflect new neighboring items)
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
“ನಮ್ಮ ಸಾಮಾನ್ಯ ಜೀವನದಂತೆಯೇ, ನಾವು ಕೆಲವು ಪಾಪಕಾರ್ಯಗಳನ್ನು ಮಾಡಿ, ನ್ಯಾಯಾಲಯದಲ್ಲಿ ʼನ್ಯಾಯಾಧೀಶರೇ, ನನಗೆ ಕಾನೂನು ತಿಳಿದಿರಲಿಲ್ಲ', ಎಂದು ಮನವಿ ಮಾಡಿದರೆ, ಆ ರೀತಿಯ ಮನವಿ ನಮಗೆ ಸಹಾಯ ಮಾಡುವುದಿಲ್ಲ. ಕಾನೂನಿನ ಅಜ್ಞಾನವು ಕ್ಷಮಾರ್ಹವಲ್ಲ. ಆದ್ದರಿಂದ, ಮಾನವ ಜೀವನವು ಪ್ರಾಣಿ ಜೀವನಕ್ಕಿಂತ ಭಿನ್ನವಾಗಿದೆ. ನಾವು ಮಾನವ ಜೀವನದಲ್ಲಿ ಸರ್ವೋಚ್ಚ ಕಾನೂನುಗಳನ್ನು ಪಾಲಿಸದೆ ಬದುಕುತ್ತಿದ್ದರೆ, ಬಳಲುವುದೇ ನಮ್ಮ ವಿಧಿಯಾಗುತ್ತದೆ. ಆದ್ದರಿಂದ, ಮಾನವ ಸಮಾಜದಲ್ಲಿ ಧರ್ಮ ವ್ಯವಸ್ಥೆ ಮತ್ತು ಧರ್ಮಗ್ರಂಥಗಳಿವೆ. ಮಾನವನ ಕರ್ತವ್ಯ ಪ್ರಕೃತಿಯ ನಿಯಮಗಳನ್ನು, ಶಾಸ್ತ್ರಗಳಲ್ಲಿನ ಆದೇಶಗಳನ್ನು ಅರ್ಥಮಾಡಿಕೊಳ್ಳುವುದು, ಮತ್ತು ಅದರ ನಿರ್ದೇಶನಕ್ಕೆ ಅನುಗುಣವಾಗಿ ಬಹಳ ಪ್ರಾಮಾಣಿಕವಾಗಿ ಜೀವಿಸುವುದು.”
760105 - ಉಪನ್ಯಾಸ SB 06.01.06 - ನೆಲ್ಲೂರು