KN/Prabhupada 1065 - ಎಲ್ಲಕ್ಕಿಂತ ಮೊದಲು ನಾನು ಈ ದೇಹವಲ್ಲ ಎಂದು ತಿಳಿಯಬೇಕು

Revision as of 15:50, 22 June 2015 by Visnu Murti (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 1065 - in all Languages Category:KN-Quotes - 1966 Category:KN-Quotes - L...")
(diff) ← Older revision | Latest revision (diff) | Newer revision → (diff)


Invalid source, must be from amazon or causelessmery.com

660219-20 - Lecture BG Introduction - New York

ಈಗ ನಾವು ಭೌತಿಕದಿಂದ ಕಲುಷಿತರಾಗಿದ್ದೇವೆ, ಇದನ್ನು ಬದ್ಧ ಸ್ಥಿತಿ ಎನ್ನುತ್ತಾರೆ. ಮತ್ತು ಮಿಥ್ಯಾಹಾಂಕಾರ, ಹುಸಿಯಾದ ಪ್ರಜ್ಞೆ, ಈ ಹುಸಿಯಾದ ಪ್ರಜ್ಞೆ ನಾನು ಈ ಭೌತಿಕ ಪ್ರಕೃತಿಯ ಉತ್ಪತ್ತಿ ಎಂಬ ಅನಿಸಿಕೆಯಿಂದ ಪ್ರದರ್ಶಿತವಾಗುತ್ತದೆ. ಇದು ಮಿಥ್ಯ ಅಹಂಕಾರ. ಯಸ್ಯಾತ್ಮ ಬುದ್ಧೀರ್ ಕುನಪೇ ತ್ರೀದಾತುಕೆ (ಶ್ರೀ ಮದ್ ಭಾ 10.84.13) ಯಸ್ಯಾತ್ಮ ಬುದ್ಧೀರ್ ಕುನಪೇ ತ್ರೀದಾತುಕೆ, ಯಾರು ದೇಹದ ಪ್ರಜ್ಞೆಯಲ್ಲಿ ತಲ್ಲೀನರಾಗಿದ್ದಾರೋ, ಅರ್ಜುನನು ದೇಹದ ಪ್ರಜ್ಞೆಯನ್ನು ಪ್ರತಿನಿಧಿಸಿದ್ದರಿಂದ ಇಡೀ ಭಗವದ್ಗೀತೆಯ ಉಪದೇಶವಾಯಿತು. ನಾವು ದೇಹದ ಕಲ್ಪನೆಯಿಂದ ಸ್ವತಂತ್ರರಾಗಬೇಕು. ಇದು ಮುಕ್ತರಾಗ ಬಯಸುವ ಅಧ್ಯಾತ್ಮಿಕವಾದಿಗಳ ಮೊದಲ ಕಾರ್ಯವಾಗಿರುತ್ತದೆ. ಅವನು ಎಲ್ಲಕ್ಕಿಂತ ಮೊದಲು ನಾನು ಈ ಭೌತಿಕ ದೇಹವಲ್ಲ ಎಂದು ತಿಳಿಯಬೇಕು. ನಾವು ಈ ಭೌತಿಕ ಪ್ರಜ್ಞೆಯಿಂದ ಬಿಡುಗಡೆ ಹೊಂದಿದಾಗ ಅದನ್ನು ಮುಕ್ತಿ ಎನ್ನುತ್ತಾರೆ. ಮುಕ್ತಿ ಎಂದರೆ ಭೌತಿಕ ಪ್ರಜ್ಞೆಯಿಂದ ಸ್ವತಂತ್ರವಾಗಿರುವುದು. ಶ್ರೀಮದ್ ಭಾಗವತದಲ್ಲಿ ಮುಕ್ತಿಯ ವ್ಯಾಖ್ಯಾನವಿದೆ. ಮುಕ್ತಿರ್ ಹಿತ್ವಾನ್ಯಥಾರೂಪಂ ಸ್ವರೂಪೇಣ ವ್ಯವಸ್ಥಿತಿಃ (ಶ್ರೀ ಮದ್ ಭಾ 2.10.6) ಮುಕ್ತಿ ಎಂದರೆ ಭೌತಿಕ ಪ್ರಪಂಚದ ಕಲುಷಿತವಾದ ಪ್ರಜ್ಞೆಯಿಂದ ಬಿಡುಗಡೆ ಹೊಂದುವುದು. ಮತ್ತು ಶುದ್ಧವಾದ ಪ್ರಜ್ಞೆಯಲ್ಲಿ ನೆಲೆಸುವುದು. ಈ ಶುದ್ಧ ಪ್ರಜ್ಞೆಯನ್ನು ಜಾಗೃತಗೊಳಿಸುವುದೇ ಇಡೀ ಭಗವದ್ಗೀತೆಯ ಉದ್ದೇಶ. ಆದ್ದರಿಂದ ಭಗವದ್ಗೀತೆಯ ಕೊನೆಯ ಘಟ್ಟದಲ್ಲಿ ಕೃಷ್ಣ ಅರ್ಜುನನಿಗೆ ನೀನು ಈಗ ಶುದ್ಧ ಪ್ರಜ್ಞೆಯಲ್ಲಿದ್ದೆಯೇ ಎಂದು ಕೇಳುವುದನ್ನು ಗಮನಿಸಬಹುದು. ಅರ್ಜುನನು ಶುದ್ಧ ಪ್ರಜ್ಞೆಯಲ್ಲಿ ಇದ್ದನಾ? ಶುದ್ಧ ಪ್ರಜ್ಞೆ ಎಂದರೆ ಭಗವಂತನ ನಿರ್ದೇಶನದಂತೆ ನಡೆಯುವುದು. ಇದು ಶುದ್ಧ ಪ್ರಜ್ಞೆಯ ಸಾರ ಸರ್ವಸ್ವ. ನಾವು ಭಗವಂತನ ವಿಭಿನ್ನ ಅಂಶಗಳಾದುದರಿಂದ ಪ್ರಜ್ಞೆ ಇದ್ದೇ ಇದೆ. ಆದರೆ ಭೌತಿಕ ಗುಣಗಳಿಂದ ಪ್ರಭಾವಿತರಾಗುವ ಸಾಧ್ಯತೆ ಇದೆ. ಆದರೆ ಭಗವಂತ ಪರಮ ಪುರುಷ, ಅವನು ಎಂದಿಗೂ ಪ್ರಭಾವಿತನಾಗುವುದಿಲ್ಲ. ಇದೇ ಭಗವಂತನಿಗೂ ಜೀವಿಗೂ ಇರುವ ವ್ಯತ್ಯಾಸ. ಈ ಪ್ರಜ್ಞೆ ಎಂದರೇನು? ನಾನು ಎಂಬುವ ಪ್ರಜ್ಞೆ, ನಾನು ಯಾರು? ಕಲುಷಿತ ಪ್ರಜ್ಞೆಯಲ್ಲಿ ನಾನು ಎಂದರೆ ನನ್ನ ಕಣ್ಣಿಗೆ ಕಾಣುವುದಕ್ಕೆಲ್ಲ ನಾನೇ ಪ್ರಭು. ನಾನೇ ಭೋಗಿಸುವವನು,ಇದು ಅಶುದ್ಧ ಪ್ರಜ್ಞೆ. ಇಡೀ ಭೌತಿಕ ಪ್ರಪಂಚದಲ್ಲಿ ಪ್ರತಿಯೊಬ್ಬ ಜೀವಿಯೂ ನಾನೇ ಪ್ರಭು, ನಾನೇ ಸೃಷ್ಟಿಕರ್ತ ಎಂದು ಯೋಚಿಸುತ್ತಾನೆ. ಭೌತಿಕ ಪ್ರಜ್ಞೆಗೆ ಎರಡು ಮಾನಸಿಕ ಭಾಗಗಳುಂಟು. 1. ನಾನೇ ಸೃಷ್ಟಿಕರ್ತ, 2. ನಾನೇ ಭೋಗಿಸುವವನು. ಭಗವಂತ ನಿಜವಾದ ಸೃಷ್ಟಿಕರ್ತ ಹಾಗೂ ಭೋಗಿಸುವವನು. ಜೀವಿಗಳು ಭಗವಂತನ ವಿಭಿನ್ನ ಅಂಶಗಳಾದುದರಿಂದ ಅವನು ಸೃಷ್ಟಿಕರ್ತನೂ ಅಲ್ಲ, ಭೋಗಿಸುವವನು ಅಲ್ಲ, ಅವನು ಸಹಕರಿಸುವವನು ಮಾತ್ರ. ಉದಾಹರಣೆಗೆ ಒಂದು ಯಂತ್ರದ ಭಾಗವೂ ಇಡೀ ಯಂತ್ರದೊಂದಿಗೆ ಸಹಕರಿಸುತ್ತದೆ. ಅಥವಾ ನಾವು ನಮ್ಮ ದೇಹದ ರಚನೆಯನ್ನು ನೋಡಿದರೂ, ನಮ್ಮ ದೇಹದಲ್ಲಿ ಕೈಗಳು, ಕಾಲುಗಳು, ಕಣ್ಣುಗಳು ಎಲ್ಲವೂ ಒಟ್ಟಿಗೆ ಕೆಲಸ ಮಾಡುತ್ತಿದೆ. ಆದರೆ ದೇಹದ ಈ ಭಾಗಗಳೆಲ್ಲ ಭೋಗಿಸುವವರಲ್ಲ, ಭೋಗಿಸುವುದು ಹೊಟ್ಟೆ ಮಾತ್ರ. ಕಾಲುಗಳು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಚಲಿಸುತ್ತವೆ, ಕೈಗಳು ಆಹಾರವನ್ನು ತಯಾರು ಮಾಡುತ್ತದೆ, ಹಲ್ಲುಗಳು ಜಗಿಯುತ್ತವೆ, ಹೀಗೆ ದೇಹದ ಎಲ್ಲಾ ಭಾಗಗಳು ಹೊಟ್ಟೆಯನ್ನು ತೃಪ್ತಿಪಡಿಸುವುದರಲ್ಲಿ ಮಗ್ನವಾಗಿವೆ. ಏಕೆಂದರೆ ಹೊಟ್ಟೆ ಈ ದೇಹದ ರಚನೆಯಲ್ಲಿ ಬಹು ಮುಖ್ಯ ಭಾಗ. ಎಲ್ಲವನ್ನೂ ಹೊಟ್ಟೆಗೆ ಕೊಡಬೇಕು. ಪ್ರಾನೋಪಹಾರಾಚ್ ಚ ಯಥೇಂದ್ರಿಯಾಣಾಂ (ಶ್ರೀ ಮದ್ ಭಾ 4.31.14). ಮರವನ್ನು ಹಸುರಾಗಿ ಬೇರಿಗೆ ನೀರು ಹಾಕುವುದರಿಂದ ಕಾಣಬಹುದು. ನಾವು ಆರೋಗ್ಯವಾಗಿರಬಹುದು, ದೇಹದ ಭಾಗಗಳಾದ ಕೈಗಳು, ಕಾಲುಗಳು, ಕಣ್ಣುಗಳು, ಕಿವಿಗಳು, ಬೆರಳುಗಳು ಎಲ್ಲವೂ ಹೊಟ್ಟೆಯ ಜೊತೆ ಸಹಕರಿಸಿದರೆ ಆರೋಗ್ಯವಾಗಿರಬಹುದು. ಅದೇ ರೀತಿ ಪರಮ ಪುರುಷ ಭಗವಂತ ಭೋಕ್ತಾರ. ಅವನೇ ಸೃಷ್ಟಿಕರ್ತ ಮತ್ತು ಭೋಕ್ತಾರ. ಭಗವಂತನ ಶಕ್ತಿಯ ಉತ್ಪತ್ತಿಗಳಾದ ನಾವು ಅಧೀನರಾದ ಜೀವಿಗಳು ಅವನ ಜೊತೆ ಸಹಕರಿಸಬೇಕು, ಅದು ನಮಗೆ ಸಹಾಯ ಮಾಡುತ್ತದೆ. ಉದಾಹರಣೆಗೆ ಒಳ್ಳೆಯ ಆಹಾರಪದಾರ್ಥವನ್ನು ಬೆರಳು ತೆಗೆದುಕೊಳ್ಳುತ್ತದೆ. ಬೆರಳು ನಾನು ಯಾಕೆ ಹೊಟ್ಟೆಗೆ ಕೊಡಬೇಕು? ನಾನೇ ಆನಂದಿಸುತ್ತೇನೆ ಎಂದು ಯೋಚಿಸಿದರೆ ಅದು ತಪ್ಪು. ಬೆರಳು ಆನಂದಿಸಲಾಗುವುದಿಲ್ಲ. ಬೆರಳು ಆನಂದದ ಫಲವನ್ನು ಇಚ್ಚಿಸಿದರೆ, ಅದು ಆಹಾರವನ್ನು ಹೊಟ್ಟೆಗೆ ಹಾಕಬೇಕು.