KN/Prabhupada 1076 - ಮರಣಕಾಲದಲ್ಲಿ ನಾವು ಇಲ್ಲಿಯೇ ಉಳಿಯಬಹುದು ಅಥವಾ ಆಧ್ಯಾತ್ಮಿಕ ಜಗತ್ತಿಗೆ ಮರಳಬಹುದು

Revision as of 14:46, 24 May 2015 by Visnu Murti (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 1076 - in all Languages Category:KN-Quotes - 1966 Category:KN-Quotes - L...")
(diff) ← Older revision | Latest revision (diff) | Newer revision → (diff)


Invalid source, must be from amazon or causelessmery.com

660219-20 - Lecture BG Introduction - New York

ಬೇರೆ ಬೇರೆ ಭಾವಗಳಿವೆ. ಆಗಲೇ ಹೇಳಿದಂತೆ ಈ ಐಹಿಕ ಪ್ರಕೃತಿ ಕೂಡ ಒಂದು ಭಾವ. ಐಹಿಕ ನಿಸರ್ಗವು ಭಗವಂತನ ಶಕ್ತಿಗಳಲ್ಲಿ ಒಂದರ ಅಭಿವ್ಯಕ್ತಿ. ವಿಷ್ಣು ಪುರಾಣದಲ್ಲಿ (6.7.61) ಭಗವಂತನ ಸಂಪೂರ್ಣ ಶಕ್ತಿಗಳನ್ನು ನಿರೂಪಿಸಲಾಗಿದೆ. ವಿಷ್ಣು ಶಕ್ತಿಃ ಪರಾಪ್ರೋಕ್ತಾ ಕ್ಷೇತ್ರಜ್ಞಾಖ್ಯಾ ತಥಾ ಪರಾ ಅವಿದ್ಯಾಕರ್ಮಸಂಜ್ಞಾ ಅನ್ಯಾ ತೃತಿಯಾ ಶಕ್ಥಿರಿಶ್ಯಥೆ ಭಗವಂತನ ಎಲ್ಲಾ ಶಕ್ತಿಗಳೂ, ಪರಾಸ್ಯ ಶಕ್ತೀರ್ ವಿವಿಧೈವ ಶ್ರೂಯತೆ (ಚೈ ಚ ಮಧ್ಯ 13.65 ಭಾವಾರ್ಥ) ಭಗವಂತನಿಗೆ ನಮ್ಮ ಕಲ್ಪನೆಗೆ ನಿಲುಕದ ವಿವಿಧ ಮತ್ತು ಅಸಂಖ್ಯಾತ ಶಕ್ತಿಗಳಿವೆ. ಆದರೆ ಎಲ್ಲಾ ತಿಳಿದ ಋಷಿಗಳು ಮತ್ತು ಮುಕ್ತಾತ್ಮರು ಅವುಗಳನ್ನು ಅಧ್ಯಯನ ಮಾಡಿ ಅದನ್ನು ಮೂರು ಭಾಗಗಳಾಗಿ ವಿಂಗಡಿಸಿದ್ದಾರೆ. ಎಲ್ಲಾ ಶಕ್ತಿಗಳೂ ವಿಷ್ಣು ಶಕ್ತಿಗಳೇ. ಎಂದರೆ ವಿಷ್ಣುವಿನ ಬೇರೆ ಬೇರೆ ಶಕ್ತಿಗಳು. ಆ ಶಕ್ತಿ ಪರಾ, ಆಧ್ಯಾತ್ಮಿಕ ಮತ್ತು ಕ್ಷೇತ್ರಜ್ಞಾಕ್ಯ ತಥಾ ಪರಾ, ಜೀವಿಗಳು ಕ್ಷೇತ್ರಜ್ಞ ಜೀವಿಗಳು ಉತ್ತಮ ಶಕ್ತಿಗೆ ಸೇರಿದವರು. ಭಗವದ್ಗೀತೆಯಲ್ಲೂ ಇದನ್ನು ಖಚಿತಪಡಿಸಿದೆ. ಮತ್ತು ಐಹಿಕ ಶಕ್ತಿ ತೃತೀಯ ಕರ್ಮ ಸಂಜ್ಞಾನ್ಯ (ಚೈ ಚ ಮಧ್ಯ 6.154) ಬೇರೆ ಶಕ್ತಿಗಳು ತಾಮಸ ಗುಣದಲ್ಲಿವೆ. ಅದುವೇ ಭೌತಿಕ ಶಕ್ತಿ. ಆದ್ದರಿಂದ ಮರಣಕಾಲದಲ್ಲಿ ನಾವು ಭೌತಿಕ ಶಕ್ತಿ (ಭೌತಿಕ ಪ್ರಕೃತಿ)ಯಲ್ಲಿ ಉಳಿಯಬಹುದು ಅಥವಾ ಆಧ್ಯಾತ್ಮಿಕ ಪ್ರಪಂಚಕ್ಕೆ ಹೋಗಬಹುದು. ಆದ್ದರಿಂದ ಭಗವದ್ಗೀತೆಯಲ್ಲಿ ಹೀಗೆ ಹೇಳಿದೆ. ಯಂ ಯಂ ವಾಪಿ ಸ್ಮರನ್ ಭಾವಂ ತ್ಯಜತಿ ಅಂತೇ ಕಲೇವರಂ ತಂ ತಮೇವೈತಿ ಕೌಂತೇಯ ಸದಾ ತದ್ ಭಾವ ಭಾವಿತಃ (ಭ ಗೀತೆ 8.6) ಐಹಿಕ ಶಕ್ತಿ ಅಥವಾ ಆಧ್ಯಾತ್ಮಿಕ ಶಕ್ತಿ ಎರಡರಲ್ಲಿ ಒಂದನ್ನು ಕುರಿತು ಯೋಚಿಸುವುದು ನಮ್ಮ ಅಭ್ಯಾಸ. ನಮ್ಮ ಯೋಚನೆಯನ್ನು ವರ್ಗಾಯಿಸುವುದು ಹೇಗೆ? ಭೌತಿಕ ಯೋಚನೆಯನ್ನು ಆಧ್ಯಾತ್ಮಿಕ ಯೋಚನೆಯಾಗಿ ವರ್ಗಾಯಿಸುವುದು ಹೇಗೆ? ಆಧ್ಯಾತ್ಮಿಕ ಶಕ್ತಿಯ ಯೋಚನೆ ಮಾಡುವುದಕ್ಕೆ ವೈದಿಕ ಸಾಹಿತ್ಯಗಳಿವೆ. ಐಹಿಕ ಶಕ್ತಿಯ ಯೋಚನೆ ಮಾಡುವುದಕ್ಕೆ ಬೇಕಾದಷ್ಟು ಬರಹಗಳಿವೆ ವೃತ್ತಪತ್ರಿಕೆಗಳು, ನಿಯತಕಾಲಿಕೆಗಳು, ಕಾದಂಬರಿಗಳು ಇತ್ಯಾದಿ. ಹೀಗೆ ನಮ್ಮ ಯೋಚನೆ ಯಾವಾಗಲೂ ಈ ಕೃತಿಗಳಲ್ಲಿವೆ. ಅದೇ ರೀತಿ ನಾವು ನಮ್ಮ ಯೋಚನೆಯನ್ನು ಅಧ್ಯಾತ್ಮಿಕಗೊಳಿಸಬೇಕೆಂದರೆ ಓದುವುದನ್ನು ವೈದಿಕ ಸಾಹಿತ್ಯಕ್ಕೆ ವರ್ಗಾಯಿಸಬೇಕು. ಅದಕ್ಕಾಗಿಯೇ ಸಾಧುಗಳು ಪುರಾಣಗಳಂತಹ ಅನೇಕ ವೈದಿಕ ಬರಹಗಳನ್ನು ರಚಿಸಿದ್ದಾರೆ. ಪುರಾಣಗಳು ಕಟ್ಟುಕತೆಗಳಲ್ಲ, ಅವು ಚಾರಿತ್ರಿಕ ದಾಖಲೆಗಳು. ಚೈತನ್ಯ ಚರಿತಾಮೃತದಲ್ಲಿ ಈ ಕೆಳಗಿನ ಶ್ಲೋಕವಿದೆ. ಅನಾದಿ ಬಾಹಿರ್ಮುಖ ಜೀವ ಕೃಷ್ಣ ಭೂಲಿ ಗೆಲ, ಆತೈವ ಕೃಷ್ಣ ವೇದ ಪುರಾಣ ಕರಿಲಾ (ಚೈ ಚ ಮಧ್ಯ 20.122) ವಿಸ್ಮೃತಿಗೊಂಡ ಜೀವಿಗಳು ಅಥವಾ ಬದ್ಧಾತ್ಮರು ಭಗವಂತನೊಡನೆ ತಮ್ಮ ಸಂಭಂಧವನ್ನು ಮರೆತಿರುತ್ತಾರೆ. ಮತ್ತು ಐಹಿಕ ಚಟುವಟಿಕೆಗಳನ್ನು ಕುರಿತು ಯೋಚನೆ ಮಾಡುವುದರಲ್ಲಿ ಮಗ್ನರಾಗಿರುತ್ತಾರೆ. ಅವರ ಯೋಚನಾಶಕ್ತಿಯನ್ನು ಆಧ್ಯಾತ್ಮಿಕತೆಗೆ ಏರಿಸಲು ಕೃಷ್ಣ ದ್ವೈಪಾಯನ ವ್ಯಾಸರು ಅನೇಕ ಕೃತಿಗಳನ್ನು ರಚಿಸಿದರು. ವೈದಿಕ ಸಾಹಿತ್ಯವೆಂದರೆ ಮೊದಲು ಅವರು ವೇದಗಳನ್ನು ನಾಲ್ಕು ಭಾಗ ಮಾಡಿದರು. ನಂತರ ಅವುಗಳನ್ನು ಪುರಾಣಗಳಲ್ಲಿ ವಿವರಿಸಿದರು. ನಂತರ ಸ್ತ್ರೀ, ಶೂದ್ರ, ವೈಶ್ಯರಂತಹ ಅಸಮರ್ಥರಿಗಾಗಿ ಮಹಾಭಾರತವನ್ನು ಮಾಡಿದರು. ಮಹಾಭಾರತದಲ್ಲಿ ಭಗವದ್ಗೀತೆಯನ್ನು ಅಳವಡಿಸಿದರು. ಅನಂತರ ವೈದಿಕ ಸಾಹಿತ್ಯವನ್ನೆಲ್ಲಾ ವೇದಾಂತ ಸೂತ್ರದಲ್ಲಿ ಅಳವಡಿಸಿದರು. ಮುಂದಿನ ಮಾರ್ಗದರ್ಶನಕ್ಕಾಗಿ ವೇದಾಂತ ಸೂತ್ರಕ್ಕೆ ಶ್ರೀಮದ್ ಭಾಗವತದ ರೂಪದಲ್ಲಿ ಭಾಷ್ಯೆಯನ್ನು ಬರೆದರು.