KN/Prabhupada 1079 - ಆಧ್ಯಾತ್ಮಿಕ ಕೃತಿಯಾದ ಭಗವದ್ಗೀತೆಯನ್ನು ಅತ್ಯಂತ ಎಚ್ಚರಿಕೆಯಿಂದ ಓದಬೇಕು: Difference between revisions

(Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 1079 - in all Languages Category:KN-Quotes - 1966 Category:KN-Quotes - L...")
 
(Vanibot #0023: VideoLocalizer - changed YouTube player to show hard-coded subtitles version)
 
Line 10: Line 10:
[[Category:Kannada Language]]
[[Category:Kannada Language]]
<!-- END CATEGORY LIST -->
<!-- END CATEGORY LIST -->
<!-- BEGIN NAVIGATION BAR -- DO NOT EDIT OR REMOVE -->
{{1080 videos navigation - All Languages|Kannada|KN/Prabhupada 1078 - ಮನಸ್ಸು ಮತ್ತು ಬುದ್ಧಿಯನ್ನು 24ಗಂಟೆಗಳೂ ಭಗವಂತನ ವಿಚಾರದಲ್ಲಿ ಲೀನಮಾಡುವುದು|1078|KN/Prabhupada 1080 - ಕೃಷ್ಣನೊಬ್ಬನೇ ದೇವರು. ಕೃಷ್ಣ ಪಂಥೀಯ ದೇವರಲ್ಲ|1080}}
<!-- END NAVIGATION BAR -->
<!-- BEGIN ORIGINAL VANIQUOTES PAGE LINK-->
<!-- BEGIN ORIGINAL VANIQUOTES PAGE LINK-->
<div class="center">
<div class="center">
Line 18: Line 21:


<!-- BEGIN VIDEO LINK -->
<!-- BEGIN VIDEO LINK -->
{{youtube_right|4TS_6xy7bcY|ಆಧ್ಯಾತ್ಮಿಕ ಕೃತಿಯಾದ ಭಗವದ್ಗೀತೆಯನ್ನು ಅತ್ಯಂತ ಎಚ್ಚರಿಕೆಯಿಂದ ಓದಬೇಕು<br />- Prabhupāda 1079}}
{{youtube_right|GjZ6F-IQBmM|ಆಧ್ಯಾತ್ಮಿಕ ಕೃತಿಯಾದ ಭಗವದ್ಗೀತೆಯನ್ನು ಅತ್ಯಂತ ಎಚ್ಚರಿಕೆಯಿಂದ ಓದಬೇಕು<br />- Prabhupāda 1079}}
<!-- END VIDEO LINK -->
<!-- END VIDEO LINK -->


<!-- BEGIN AUDIO LINK -->
<!-- BEGIN AUDIO LINK -->
<mp3player>File:660220BG-NEW_YORK_clip23.mp3</mp3player>
<mp3player>https://s3.amazonaws.com/vanipedia/clip/660220BG-NEW_YORK_clip23.mp3</mp3player>
<!-- END AUDIO LINK -->
<!-- END AUDIO LINK -->



Latest revision as of 04:15, 12 July 2019



660219-20 - Lecture BG Introduction - New York

ಭಗವದ್ಗೀತೆ ಅಥವಾ ಶ್ರೀಮದ್ ಭಾಗವತವನ್ನು ಸಾಕ್ಷಾತ್ಕಾರ ವ್ಯಕ್ತಿಯಿಂದ ಕೇಳಿದರೆ 24 ಗಂಟೆಗಳೂ ಭಗವಂತನ ಚಿಂತನೆಯಲ್ಲಿರುವುದು ಅಭ್ಯಾಸವಾಗುತ್ತದೆ. ಅದು ಅಂತ್ಯಕಾಲದಲ್ಲಿ ಭಗವಂತನ ಸ್ಮರಣೆಗೆ ಕರೆದೊಯ್ಯುತ್ತದೆ. ಆಗ ದೇಹ ತ್ಯಾಗ ಮಾಡಿದ ನಂತರ ಭಗವಂತನ ಸಹವಾಸಕ್ಕೆ ಯೋಗ್ಯವಾದ ಆಧ್ಯಾತ್ಮಿಕ ದೇಹ ದೊರೆಯುತ್ತದೆ. ಆದ್ದರಿಂದ ಭಗವಂತ ಹೇಳುತ್ತಾನೆ - ಅಭ್ಯಾಸ ಯೋಗ ಯುಕ್ತೇನ ಚೇತಸಾ ನಾನ್ಯ ಗಾಮಿನಾ ಪರಮಂ ಪುರುಷಂ ದಿವ್ಯಂ ಯಾತಿ ಪಾರ್ತಾನುಚಿಂತಯನ್ (ಭ ಗೀತೆ 8.8) ಅನುಚಿಂತಯನ್ - ಭಗವಂತನನ್ನು ಸತತವಾಗಿ ಸ್ಮರಿಸುವುದು ಕಠಿಣವಾದ ಮಾರ್ಗವೇನು ಅಲ್ಲ. ಅದನ್ನು ಈ ವಿಷಯದಲ್ಲಿ ಪರಿಣಿತರಾದವರಿಂದ ಕಲಿಯಬೇಕು. ತದ್ ವಿಜ್ಞಾನಾರ್ಥಂ ಸ ಗುರುಮೇವಾಭಿಗಚ್ಚೇತ್ (ಮು ಉಪ 1.2.12). ಈಗಾಗಲೇ ಆಚರಿಸುತ್ತಿರುವವನಿಂದ ಕಲಿಯಬೇಕು. ಇದನ್ನು ಅಭ್ಯಾಸ ಯೋಗ ಯುಕ್ತೇನ ಎನ್ನುತ್ತಾರೆ. ಭಗವಂತನನ್ನು ಸತತವಾಗಿ ಹೇಗೆ ಸ್ಮರಿಸುವುದು ಎಂದು ಅಭ್ಯಾಸ ಮಾಡಬೇಕು. ಚೇತಸಾ ನಾನ್ಯ ಗಾಮಿನಾ, ಮನಸ್ಸು ಸದಾ ಅತ್ತ ಇತ್ತ ಹಾರುತ್ತಲೇ ಇರುತ್ತದೆ. ಆದರೆ ಮನಸ್ಸನ್ನು ಪರಮ ಪುರುಷ ಶ್ರೀ ಕೃಷ್ಣನ ರೂಪದಲ್ಲಿ ಅಥವಾ ನಾಮದ ಧ್ವನಿಯಲ್ಲಿ ಸದಾ ಕೇಂದ್ರೀಕರಿಸುವುದನ್ನು ಅಭ್ಯಾಸಿಸಬೇಕು. ಮನಸ್ಸು ಬಹಳ ಚಂಚಲ, ಅಲ್ಲಿ ಇಲ್ಲಿ ಓಡುತ್ತಿರಬಹದು. ಆದರೆ ನಮ್ಮ ಕಿವಿಯನ್ನು ಶ್ರೀ ಕೃಷ್ಣನ ಶಬ್ದ ತರಂಗದಲ್ಲಿ ಇರಿಸಬೇಕು. ಅದನ್ನು ಅಭ್ಯಾಸಯೋಗ ಎನ್ನುತ್ತಾರೆ. ಚೇತಸಾ ನಾನ್ಯ ಗಾಮಿನಾ, ಪರಮಂ ಪುರುಷಂ ದಿವ್ಯಂ ಆಧ್ಯಾತ್ಮಿಕ ಗಗನದಲ್ಲಿರುವ ಪರಮ ಪುರುಷನನ್ನು ಆಧ್ಯಾತ್ಮಿಕ ಸಾಮ್ರಾಜ್ಯವನ್ನು ಅನು ಚಿಂತಯನ್ - ಸತತವಾಗಿ ಸ್ಮರಿಸಿ ಸೇರಬಹುದು. ಈ ಪ್ರಕ್ರಿಯೆಯ ಮಾರ್ಗಗಳನ್ನು, ಸಾಧನೆಗಳನ್ನು ಭಗವದ್ಗೀತೆಯಲ್ಲಿ ತಿಳಿಸಿದೆ. ಯಾರಿಗೂ ಯಾವ ರೀತಿಯ ಅಡ್ಡಿಯೂ ಇಲ್ಲ. ಒಂದು ಪಂಗಡದ ಜನರು ಮಾತ್ರ ಹೋಗಬಹುದು ಎಂದೇನಿಲ್ಲ. ಕೃಷ್ಣನನ್ನು ಸ್ಮರಿಸುವುದು, ಕೃಷ್ಣನ ಬಗ್ಗೆ ಕೇಳುವುದು ಎಲ್ಲರಿಗೂ ಸಾಧ್ಯ. ಭಗವದ್ಗೀತೆಯಲ್ಲಿ ಮಾಂ ಹಿ ಪಾರ್ಥ ವ್ಯಾಪಾಶ್ರಿತ್ಯ ಯೇಪಿ ಸ್ಯುಃ ಪಾಪಾಯೋನಯಃ ಸ್ತ್ರಿಯೋ ವೈಶ್ಯಾಸ್ತಥಾ ಶೂದ್ರಾಸ್ತೇಪಿ ಯಾಂತಿ ಪರಾಂ ಗತಿಂ (ಭ ಗೀತೆ 9.32) ಕಿಮ್ ಪುನರ್ಬ್ರಾಹ್ಮಣಾಃ ಪುಣ್ಯಾ ಭಕ್ತಾ ರಾಜರ್ಷಯಸ್ತದಾ ಅನಿತ್ಯಾಮಸುಖಂ ಲೋಕಂ ಇಮಂ ಪ್ರಾಪ್ಯ ಭಜಸ್ವ ಮಾಂ (ಭ ಗೀತೆ 9.33) ಎನ್ನುತ್ತಾನೆ. ಕೆಳಸ್ತರದ ಮಾನವನಾಗಲೀ, ಪತಿತ ಸ್ತ್ರಿಯಾಗಲೀ, ವರ್ತಕನಾಗಲೀ, ಅಥವಾ ಶ್ರಮಜೀವಿಯಾಗಿರಲೀ ವರ್ತಕ, ಶ್ರಮಜೀವಿ, ಮತ್ತು ಸ್ತ್ರೀ ಒಂದೇ ವರ್ಗಕ್ಕೆ ಸೇರಿದವರು ಏಕೆಂದರೆ ಅವರ ಬುಧ್ಧಿ ಅಷ್ಟು ಬೆಳವಣಿಗೆಯಾಗಿಲ್ಲ. ಆದರೆ ಭಗವಂತನು ಇವರು ಯಾರೇ ಆಗಿರಲಿ ಅಥವಾ ಇವರಿಗಿಂತ ಕೆಳಸ್ತರದವರಾಗಿರಲಿ, ಮಾಂ ಹಿ ಪಾರ್ಥ ವ್ಯಾಪಾಶ್ರಿತ್ಯ ಯೇಪಿ ಸ್ಯುಃ, ಅವರೇ ಅಲ್ಲ, ಅವರಿಗಿನ ಕೆಳಸ್ತರಾದವರು, ಯಾರೇ ಆಗಿರಲಿ, ಭಕ್ತಿಯೋಗದ ಈ ತತ್ವವನ್ನು ಒಪ್ಪಿಕೊಂಡು ಭಗವಂತನನ್ನೇ ಬದುಕಿನ ಪರಮ ಶ್ರೇಯಸ್ಸು, ಪರಮ ಗುರಿ ಎಂದು ಸ್ವೀಕರಿಸಿದರೆ ಮಾಂ ಹಿ ಪಾರ್ಥ ವ್ಯಾಪಾಶ್ರಿತ್ಯ ಯೇಪಿ ಸ್ಯುಃ, ತೇಪಿ ಯಾಂತಿ ಪರಾಂ ಗತಿಂ ಪರಮ ಗತಿ, ಆ ಆಧ್ಯಾತ್ಮಿಕ ಸಾಮ್ರಾಜ್ಯವನ್ನು, ಆಧ್ಯಾತ್ಮಿಕ ಗಗನವನ್ನು ಸೇರಬಹುದು. ಈ ತತ್ವಗಳನ್ನು ಅಭ್ಯಾಸಮಾಡಬೇಕು ಅಷ್ಟೇ. ಈ ತತ್ವಗಳನ್ನು ಭಗವದ್ಗೀತೆಯಲ್ಲಿ ಚೆನ್ನಾಗಿ ವಿವರಿಸಿದ್ದಾರೆ. ಈ ತತ್ವಗಳನ್ನು ಅನುಷ್ಟಾನ ಮಾಡುವವನು ತನ್ನ ಬದುಕನ್ನು ಪರಿಪೂರ್ಣ ಮಾಡಿಕೊಳ್ಳಬಹುದು ಮತ್ತು ಎಲ್ಲಾ ತೊಂದರೆಗಳಿಗೂ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ಇದು ಭಗವದ್ಗೀತೆಯ ಸಾರ ಸರ್ವಸ್ವ. ಇದರ ತೀರ್ಮಾನವೇನೆಂದರೆ ಆಧ್ಯಾತ್ಮಿಕ ಕೃತಿಯಾದ ಭಗವದ್ಗೀತೆಯನ್ನು ಅತ್ಯಂತ ಎಚ್ಚರಿಕೆಯಿಂದ ಓದಬೇಕು. ಗೀತಾ ಶಾಸ್ತ್ರಂ ಇದಂ ಪುಣ್ಯಂ ಯಃ ಪಟೇತ್ ಪ್ರಯಾತಃ ಪುಮಾನ್ ಈ ತತ್ವಗಳನ್ನು ಸರಿಯಾಗಿ ಅನುಷ್ಟಾನ ಮಾಡಿದರೆ ಅವನು ಬದುಕಿನ ಎಲ್ಲಾ ದುಃಖ ಮತ್ತು ಆತಂಕಗಳಿಂದ ಮುಕ್ತನಾಗಬಹುದು. ಭಯಶೋಕಾದಿ ವರ್ಜಿತಃ, ಈ ಬದುಕಿನಲ್ಲಿ ಎಲ್ಲಾ ಭಯಗಳಿಂದ ಮುಕ್ತನಾಗಿ ಅವನು ಮುಂದಿನ ಬದುಕು ಆಧ್ಯಾತ್ಮಿಕವಾಗುತ್ತದೆ. ಗೀತಾಧ್ಯಾಯನ ಶೀಲಸ್ಯ ಪ್ರಾಣಾಯಾಮ ಪರಸ್ಯ ಚ ನೈವ ಸಂತಿ ಹಿ ಪಾಪಾನಿ ಪೂರ್ವಜನ್ಮ ಕೃತಾನಿ ಚ ಗೀತೆಯನ್ನು ಓದುವುದರಿಂದ ಇನ್ನೊಂದು ಫಲವೇನೆಂದರೆ ಪ್ರಾಮಾಣಿಕತೆಯಿಂದ ಮತ್ತು ಗಂಭೀರವಾಗಿ ಓದಿದರೆ, ಭಗವಂತನ ಕೃಪೆಯಿಂದ ಅಂತಹವನ ಹಿಂದಿನ ಪಾಪಕರ್ಮಗಳು ಅವನ ಮೇಲೆ ಪರಿಣಾಮ ಬೀರುವುದಿಲ್ಲ.