"ಆಧುನಿಕ ನಾಗರಿಕತೆಯು ಕಾರ್ಯತಃ... ಅವರು ತಪ್ಪಿಸಿಕೊಳ್ಳುತ್ತಿದ್ದಾರೆ, ನಿಜವಾದ ನೋವುಗಳಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಅವರು ತಾತ್ಕಾಲಿಕ ನೋವುಗಳಲ್ಲಿ ನಿರತರಾಗಿದ್ದಾರೆ. ಆದರೆ ವೈದಿಕ ವ್ಯವಸ್ಥೆಯು ವೈದಿಕ ಜ್ಞಾನವಾಗಿದೆ. ಅವುಗಳು ಯಾತನೆಗಳನ್ನು ಕೊನೆಗೊಳಿಸಲು ಉದ್ದೇಶಿಸಿವೆ.., ಶಾಶ್ವತವಾಗಿ, ನೋವುಗಳನ್ನು ಶಾಶ್ವತವಾಗಿ. ನೋಡಿದಿರ? ಮಾನವ ಜೀವನದ ಉದ್ದೇಶವೇ ಅದು, ಎಲ್ಲಾ ದುಃಖಗಳ ಸಮಾಪ್ತಿ. ಖಂಡಿತವಾಗಿ, ನಾವು ಎಲ್ಲಾ ರೀತಿಯ ದುಃಖಗಳನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ವ್ಯವಹಾರ, ನಮ್ಮ ಉದ್ಯೋಗ, ನಮ್ಮ ಶಿಕ್ಷಣ, ನಮ್ಮ ಜ್ಞಾನದ ಪ್ರಗತಿ-ಎಲ್ಲವೂ ದುಃಖವನ್ನು ಕೊನೆಗೊಳಿಸಲು. ಆದರೆ ಆ ಸಂಕಟ ತಾತ್ಕಾಲಿಕ, ತಾತ್ಕಾಲಿಕ. ಆದರೆ ನಾವು ಸಂಕಟಗಳನ್ನು ಶಾಶ್ವತವಾಗಿ ಕೊನೆಗೊಳಿಸಬೇಕು. ದುಃಖ... ಆ ರೀತಿಯ ಜ್ಞಾನವನ್ನು ಅತೀಂದ್ರಿಯ ಜ್ಞಾನ ಎಂದು ಕರೆಯಲಾಗುತ್ತದೆ. "
|