KN/660412 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಹಾಗಾದರೆ ಶ್ರೀ ಕೃಷ್ಣ ಇಲ್ಲಿ ಏನು ಹೇಳುತ್ತಿದ್ದಾನೆ? ಆ ಕರ್ಮ-ಜಮ್, ಕರ್ಮ-ಜಮ್ (ಭ.ಗೀ 2.51), ಪ್ರತಿಯೊಂದೂ, ‘ನೀವು ನಿರ್ವಹಿಸುತ್ತಿರುವ ನಿಮ್ಮ ಯಾವುದೇ ಕೆಲಸವು ಭವಿಷ್ಯದ ಸಂತೋಷ ಅಥವಾ ದುಃಖಕ್ಕೆ ಸ್ವಲ್ಪ ಪ್ರತಿಕ್ರಿಯೆಯನ್ನು ಸೃಷ್ಟಿಸುತ್ತಿದೆ. ಆದರೆ ನೀವು ಬುದ್ಧಿವಂತಿಕೆಯಿಂದ ವರ್ತಿಸಿದರೆ, ಸರ್ವೋಚ್ಚ ಪ್ರಜ್ಞೆಯ ಸಹಯೋಗದೊಂದಿಗೆ, ಆಗ ನೀವು ಈ ಜನ್ಮ, ಮೃತ್ಯು, ಜರಾ, ಮತ್ತು ವ್ಯಾಧಿಗಳ ಬಂಧನದಿಂದ ಮುಕ್ತರಾಗುತ್ತೀರಿ, ಮತ್ತು ನಿಮ್ಮ ಮುಂದಿನ ಜನ್ಮದಲ್ಲಿ... ಇದು ತರಬೇತಿ ಅವಧಿಯಾಗಿದೆ. ಈ ಜೀವನವು ತರಬೇತಿ ಅವಧಿಯಾಗಿದ್ದು, ನೀವು ಸಂಪೂರ್ಣವಾಗಿ ತರಬೇತಿ ಪಡೆದ ತಕ್ಷಣ, ಮುಂದಿನ ಫಲಿತಾಂಶವೆಂದರೆ ಈ ದೇಹತ್ಯಾಗದ ನಂತರ ನೀವು ನನ್ನ ರಾಜ್ಯಕ್ಕೆ ಬರುತ್ತೀರಿ.' ತ್ಯಕ್ತ್ವಾ ದೇಹಂ ಪುನಾರ್ ಜನ್ಮ ನೈತಿ ಮಾಮ್ ಎತಿ ಕೌಂತೇಯ (ಭ.ಗೀ 4.9). ಆದ್ದರಿಂದ ಇದು ಸಂಪೂರ್ಣ ಪ್ರಕ್ರಿಯೆ."
660412 - ಉಪನ್ಯಾಸ BG 02.51-55 - ನ್ಯೂ ಯಾರ್ಕ್