"ನಾವು ನಿಂತಿರುವ ಈ ಜಗತ್ತು, ಈ ವೇದಿಕೆ, ಇದನ್ನೂ ಸಹ ನಾಶಮಾಡಲಾಗುವುದು. ಅದು ಈ ಭೌತಿಕ ಪ್ರಕೃತಿಯ ನಿಯಮ. ಯಾವುದೂ ಉಳಿಯುವುದಿಲ್ಲ. ಏನೂ ಮುಂದುವರಿಯುವುದಿಲ್ಲ. ಎಲ್ಲವೂ ಕೊನೆಯಾಗುತ್ತದೆ. ನಮ್ಮಂತಹ… ಈ ದೇಹವೂ ಕೂಡ ನಾಶವಾಗುತ್ತದೆ. ಈಗ ನನಗೆ ಈ ಸುಂದರವಾದ ದೇಹ ಸಿಕ್ಕಿದೆ. ಎಪ್ಪತ್ತು ವರ್ಷಗಳು, ನನ್ನ ವಯಸ್ಸು, ಎಪ್ಪತ್ತು ವರ್ಷಗಳ ಹಿಂದೆ, ದೇಹಕ್ಕೆ ಅಸ್ತಿತ್ವವಿರಲಿಲ್ಲ, ಮತ್ತು ಹೇಳುವುದಾದರೆ, ಐದು ಅಥವಾ ಹತ್ತು ವರ್ಷಗಳ ನಂತರ ದೇಹಕ್ಕೆ ಅಸ್ತಿತ್ವವಿರುವುದಿಲ್ಲ, ಆದ್ದರಿಂದ ಎಪ್ಪತ್ತು ಅಥವಾ ಎಂಭತ್ತು ವರ್ಷಗಳವರೆಗೆ ದೇಹದ ಈ ಅಭಿವ್ಯಕ್ತಿ. ಹಾಗಾದರೆ ಈ ಭೌತಿಕ ಪ್ರಪಂಚದ ಹಾದಿಯಲ್ಲಿ ಈ ಅಭಿವ್ಯಕ್ತಿ ಏನು, ಅನೇಕ ವಿಷಯಗಳು ಬರುತ್ತಿವೆ? ಸಾಗರದಲ್ಲಿ ಗುಳ್ಳೆಯಂತೆ."
|