"ನಾವು ಪ್ರಸ್ತುತ ಕ್ಷಣದಲ್ಲಿ, ನಮ್ಮ ಭೌತಿಕ ಸ್ಥಿತಿಯಲ್ಲಿ, ನಾವು ವಿಚಾರಗಳನ್ನು ತಯಾರಿಸುತ್ತಿದ್ದೇವೆ, ಮತ್ತು ಏನನ್ನಾದರೂ ಸೃಷ್ಟಿಸುವುದು, ಮತ್ತು ಅದನ್ನು ತಿರಸ್ಕರಿಸುವುದು, ಮನಸ್ಸಿನ ವ್ಯವಹಾರವಾಗಿರುವುದರಿಂದ ನಾವು ಗೊಂದಲಕ್ಕೊಳಗಾಗಿದ್ದೇವೆ. ಮನಸ್ಸು ಏನನ್ನಾದರೂ ಯೋಚಿಸುತ್ತದೆ, 'ಹೌದು, ನಾನು ಇದನ್ನು ಮಾಡುತ್ತೇನೆ ', ಮತ್ತೆ ' ಓಹ್, ಇದನ್ನು ಮಾಡದಿರುವುದು ಉತ್ತಮ ', ಎಂದು ನಿರ್ಧರಿಸುತ್ತದೆ. ಇದನ್ನು ಸಂಕಲ್ಪ-ವಿಕಲ್ಪ ಎಂದು ಕರೆಯಲಾಗುತ್ತದೆ, ನಿರ್ಧರಿಸುವುದು ಮತ್ತು ತಿರಸ್ಕರಿಸುವುದು. ಇದು ಐಹಿಕ ಮಟ್ಟದಲ್ಲಿನ ನಮ್ಮ ಅಸ್ಥಿರ ಸ್ಥಿತಿಯ ಕಾರಣದಿಂದ. ಆದರೆ ನಾವು ಸರ್ವೋಚ್ಚ ಪ್ರಜ್ಞೆಯ ಪ್ರಕಾರ ಕಾರ್ಯನಿರ್ವಹಿಸಲು ನಿರ್ಧರಿಸಿದಾಗ, ಆ ಹಂತದಲ್ಲಿ, 'ನಾನು ಅದನ್ನು ಮಾಡುತ್ತೇನೆ', ಅಥವಾ 'ನಾನು ಅದನ್ನು ಮಾಡಬಾರದು', ಎಂಬ ದ್ವಂದ್ವತೆ ಇಲ್ಲ. ಇಲ್ಲ. ಒಂದೇ ಒಂದು ವಿಷಯವಿದೆ, 'ನಾನು ಅದನ್ನು ಮಾಡುತ್ತೇನೆ. ನಾನು ಅದನ್ನು ಮಾಡುತ್ತೇನೆ ಏಕೆಂದರೆ ಅದು ಉನ್ನತ ಪ್ರಜ್ಞೆಯಿಂದ ಅನುಮೋದಿಸಲಾಗಿದೆ.’ ಇಡೀ ಭಗವದ್ಗೀತೆ ಜೀವನದ ಈ ತತ್ವವನ್ನು ಆಧರಿಸಿದೆ."
|