"ಜ್ಞಾನವಿಲ್ಲದೆ ಒಬ್ಬನ್ನು ನಿರ್ಲಿಪ್ತನಾಗಲು ಸಾಧ್ಯವಿಲ್ಲ. ಮತ್ತೆ ಆ ಜ್ಞಾನ ಯಾವುದು? ಜ್ಞಾನವು 'ನಾನು ಈ ಭೌತದ್ರವ್ಯ ಅಲ್ಲ; ನಾನು ಆತ್ಮ.' ಆದ್ದರಿಂದ... ಆದರೆ ಈ ಜ್ಞಾನವು... "ನಾನು ಈ ದೇಹವಲ್ಲ, ನಾನು ಆತ್ಮ", ಎಂದು ಹೇಳುವುದು ತುಂಬಾ ಸುಲಭವಾದ ಸಂಗತಿಯಾಗಿದೆ, ಆದರೆ ವಾಸ್ತವವಾಗಿ ಪರಿಪೂರ್ಣ ಜ್ಞಾನವನ್ನು ಹೊಂದಿರುವುದು ಒಂದು ದೊಡ್ಡ ಕೆಲಸ. ಅದು ಅಷ್ಟು ಸುಲಭವಲ್ಲ. ಆ ಸರ್ವೋಚ್ಚ ಜ್ಞಾನವನ್ನು ಪಡೆದುಕೊಳ್ಳಲು, ನಾನು ಹೇಳಬೇಕೆಂದರೆ, ಅತೀಂದ್ರಿಯವಾದಿಗಳು, ಅವರು ಜನ್ಮಜನ್ಮಾಂತರಗಳಿಂದ ನಿರ್ಲಿಪ್ತರಾಗಲು ಪ್ರಯತ್ನಿಸುತ್ತಿದ್ದರು. ಆದರೆ ಸುಲಭವಾದ ಪ್ರಕ್ರಿಯೆ ಎಂದರೆ ಭಕ್ತಿ ಸೇವೆಯಲ್ಲಿ ತೊಡಗಿರುವುದು. ಶ್ರೀಮದ್ ಭಾಗವತಂನಲ್ಲಿ ನೀಡಲಾಗಿರುವ ಸೂತ್ರವು ಅದುವೇ. ವಾಸುದೇವೆ ಭಗವತಿ (ಶ್ರೀ.ಭಾ 1.2.7). ವಾಸುದೇವೆ ಭಗವತಿ, 'ದೇವೋತ್ತಮ ಪರಮ ಪುರುಷ, ಕೃಷ್ಣ.' ವಾಸುದೇವನೆ ಕೃಷ್ಣನು."
|