"ಇಡೀ ಭೌತಿಕ ಸ್ವಭಾವವು ಪ್ರಕೃತಿಯ ತ್ರಿಗುಣಗಳ ಪ್ರಭಾವದಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ: ಸತ್ವ, ರಜಸ್, ಮತ್ತು ತಮಸ್. ನೀವು ಇಡೀ ಮಾನವ ಜನಾಂಗವನ್ನು ಒಂದಾಗಿ ವರ್ಗೀಕರಿಸಲು ಸಾಧ್ಯವಿಲ್ಲ. ನಾವು ಭೌತಿಕ ಜಗತ್ತಿನಲ್ಲಿರುವವರೆಗು, ಎಲ್ಲರನ್ನೂ ಒಂದೇ ಮಟ್ಟಕ್ಕೆ ತರಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಪ್ರಕೃತಿಯ ವಿಭಿನ್ನ ಗುಣಗಳ ಪ್ರಭಾವದಡಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ಅದು ಸಾಧ್ಯವಿಲ್ಲ. ಆದ್ದರಿಂದ ವಿಭಜನೆ, ಸಹಜ ವಿಭಜನೆ ಇರಬೇಕು. ಈ ವಿಷಯವನ್ನು ನಾವು ಚರ್ಚಿಸಿದ್ದೇವೆ. ಆದರೆ ನಾವು ಈ ಭೌತಿಕ ಮಟ್ಟವನ್ನು ಮೀರಿದಾಗ ಏಕತೆ ಇರುತ್ತದೆ. ಯಾವ ವಿಭಜನೆಯೂ ಇಲ್ಲ. ಆಗ ಹೇಗೆ ಮೀರುವುದು? ಆ ಅಲೌಕಿಕ ಸ್ವಭಾವವೆ ಕೃಷ್ಣ ಪ್ರಜ್ಞೆ. ನಾವು ಕೃಷ್ಣ ಪ್ರಜ್ಞೆಯಲ್ಲಿ ಸಂಪೂರ್ಣವಾಗಿ ಲೀನವಾದ ತಕ್ಷಣ, ನಾವು ಪ್ರಕೃತಿಯ ಈ ಭೌತಿಕ ಗುಣಗಳಿಗೆ ಅತೀಂದ್ರಿಯರಾಗುತ್ತೇವೆ."
|