"ಕೃಷ್ಣ ಪ್ರಜ್ಞೆಯಲ್ಲಿರುವ ವ್ಯಕ್ತಿಗೆ ಉತ್ತಮ ಫಲಿತಾಂಶಕ್ಕೆ ಆಗಲಿ, ಅಥವಾ ಕೆಟ್ಟ ಫಲಿತಾಂಶಕ್ಕೆ ಆಗಲಿ, ಮೋಹವಿರಬಾರದು ಏಕೆಂದರೆ ನಾನು ಉತ್ತಮ ಫಲಿತಾಂಶವನ್ನು ಬಯಸಿದರೂ ಅದು ನನ್ನ ಮೋಹವಾಗುತ್ತದೆ. ಮತ್ತು ಕೆಟ್ಟ ಫಲಿತಾಂಶವಿದ್ದರೆ, ನಮಗೆ ಯಾವುದೇ ಮೋಹವಿಲ್ಲ, ಆದರೆ ಕೆಲವೊಮ್ಮೆ ನಾವು ದುಃಖಿಸುತ್ತೇವೆ. ಅದು ನಮ್ಮ ಮೋಹ. ಅದು ನಮ್ಮ ಮೋಹ. ಆದ್ದರಿಂದ ಒಬ್ಬರು ಉತ್ತಮ ಫಲಿತಾಂಶ, ಮತ್ತು ಕೆಟ್ಟ ಫಲಿತಾಂಶ, ಎರಡನ್ನೂ ಮೀರಿಸಬೇಕಾಗುತ್ತದೆ. ಅದನ್ನು ಹೇಗೆ ಮಾಡಬಹುದು? ಇದನ್ನು ಮಾಡಬಹುದು. ನೀವು ದೊಡ್ಡ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವಂತೆಯೇ. ನೀವು ಮಾರಾಟಗಾರರೆಂದು ಭಾವಿಸೋಣ. ನೀವು ಆ ದೊಡ್ಡ ಸಂಸ್ಥೆಯ ಪರವಾಗಿ ಕೆಲಸ ಮಾಡುತ್ತಿದ್ದೀರಿ. ಈಗ, ನೀವು ಒಂದು ಮಿಲಿಯನ್ ಡಾಲರ್ ಲಾಭಗಳಿಸಿದರೆ ನಿಮಗೆ ಯಾವುದೇ ಮೋಹವಿಲ್ಲ, ಏಕೆಂದರೆ 'ಈ ಲಾಭವು ಮಾಲೀಕರಿಗೆ ಹೋಗುತ್ತದೆ', ಎಂದು ನಿಮಗೆ ತಿಳಿದಿದೆ. ನೀಮಗೆ ಯಾವುದೇ ಮೋಹವಿಲ್ಲ. ಅದೇ ರೀತಿ, ಸ್ವಲ್ಪ ನಷ್ಟವಾದ್ದರೆ, 'ನನಗೂ ನಷ್ಟಕ್ಕೂ ಯಾವುದೇ ಸಂಬಂಧವಿಲ್ಲ. ಅದು ಮಾಲೀಕರಿಗೆ ಹೋಗುತ್ತದೆ', ಎಂಬುದು ಕೂಡ ನಿಮಗೆ ತಿಳಿದಿದೆ. ಅದೇ ರೀತಿ, ನಾವು ಕೃಷ್ಣನಿಗೋಸ್ಕರ ಕೆಲಸ ಮಾಡಿದರೆ ಕೆಲಸದ ಫಲಿತಾಂಶದ ಮೋಹವನ್ನು ತ್ಯಜಿಸಬಹುದು."
|