KN/660809 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಧರ್ಮಗ್ರಂಥಗಳಲ್ಲಿ, ನಾವು ನೋಡಬಹುದು, ದೇವರ ರಾಜ್ಯವನ್ನು ವೈಕುಂಠ ಎಂದು ಕರೆಯಲಾಗಿದೆ. ವೈಕುಂಠ ಎಂದರೆ ವಿಗತ-ಕುಂಠ ಯತ್ರ. ಕುಂಠ ಎಂದರೆ ಆತಂಕಗಳು. ಯಾವುದೇ ಆತಂಕಗಳಿಲ್ಲದ ಸ್ಥಳವನ್ನು ವೈಕುಂಠ ಎಂದು ಕರೆಯಲಾಗುತ್ತದೆ. ಕೃಷ್ಣ ಹೇಳುತ್ತಾನೆ, ನಾಹಮ್ ತಿಷ್ಠಾಮಿ ವೈಕುಂಠೆ ಯೋಗಿನಾಮ್ ಹೃದಯೇಷು ಚ: “ನನ್ನ ಪ್ರೀತಿಯ ನಾರದ, ನಾನು ವೈಕುಂಠದಲ್ಲಿ, ದೇವರ ರಾಜ್ಯದಲ್ಲಿ ಮಾತ್ರ, ಅಥವಾ ಯೋಗಿಗಳ ಹೃದಯದಲ್ಲಿ ಮಾತ್ರ ಇರುತ್ತೇನೆ ಎಂದು ಭಾವಿಸಬೇಡಿ. ಇಲ್ಲ. "ತತ್ ತತ್ ತಿಷ್ಠಾಮಿ ನಾರದ ಯತ್ರ ಗಾಯಂತಿ ಮದ್-ಭಕ್ತಾಃ: - ನನ್ನ ಭಕ್ತರು ಎಲ್ಲೆಲ್ಲಿ ನನ್ನ ವೈಭವವನ್ನು ಹಾಡುತ್ತಾರೋ, ಅಥವಾ ಜಪಿಸುತ್ತಾರೋ, ಅಲ್ಲಿ ನಾನು ನಿಲ್ಲುತ್ತೇನೆ. ನಾನು ಅಲ್ಲಿಗೆ ಹೋಗುತ್ತೇನೆ."

660809 - ಉಪನ್ಯಾಸ BG 04.20-24 - ನ್ಯೂ ಯಾರ್ಕ್