"ರೋಗಪೀಡಿತ ಸ್ಥಿತಿಯಲ್ಲಿ ನಾವು ತೆಗೆದುಕೊಳ್ಳುವ ಆಹಾರ ಪದಾರ್ಥವನ್ನು ನಾವು ಆನಂದಿಸಲು ಸಾಧ್ಯವಿಲ್ಲ. ನಾವು ಆರೋಗ್ಯವಂತರಾಗಿರುವಾಗ ಆಹಾರ ಪದಾರ್ಥಗಳ ರುಚಿಯನ್ನು ಆನಂದಿಸಬಹುದು. ಆದ್ದರಿಂದ ನಾವು ರೋಗವನ್ನು ಗುಣಪಡಿಸಬೇಕು. ನಾವು ಗುಣಪಡಿಸಬೇಕು. ಆದರೆ ಹೇಗೆ ಗುಣಪಡಿಸುವುದು? ಕೃಷ್ಣ ಪ್ರಜ್ಞೆಯ ಅಲೌಕಿಕ ಸ್ಥಾನದಲ್ಲಿ ನೆಲೆಗೊಳ್ಳುವುದು. ಅದುವೇ ಪರಿಹಾರ. ಇಂದ್ರಿಯ ತೃಪ್ತಿಯ ಪ್ರಚೋದನೆಯನ್ನು ಸಹಿಸಬಲ್ಲವರಿಗೆ ಕೃಷ್ಣ ಇಲ್ಲಿ ಸಲಹೆ ನೀಡುತ್ತಾನೆ. ದೇಹವು ಇರುವವರೆಗು, ಇಂದ್ರಿಯ ತೃಪ್ತಿಗಾಗಿ ಪ್ರಚೋದನೆಗಳು ಇರುತ್ತವೆ, ಆದರೆ ಅದನ್ನು ಸಹಿಸಿಕೊಳ್ಳಬಲ್ಲ ರೀತಿಯಲ್ಲಿ ನಾವು ನಮ್ಮ ಜೀವನವನ್ನು ರೂಪಿಸಬೇಕಾಗುತ್ತದೆ. ಸಹಿಸಿಕೊಳ್ಳಬೇಕು. ಅದು ನಮಗೆ ಆಧ್ಯಾತ್ಮಿಕ ಜೀವನದಲ್ಲಿ ಪ್ರಗತಿಯನ್ನು ನೀಡುತ್ತದೆ, ಮತ್ತು ನಾವು ಆಧ್ಯಾತ್ಮಿಕ ಜೀವನದಲ್ಲಿ ನೆಲೆಗೊಂಡಾಗ, ಆ ಆನಂದಕ್ಕೆ ಅಂತ್ಯವಿಲ್ಲ, ಪರಿಮಿತಿಯಿಲ್ಲ. ಅಂತ್ಯವಿಲ್ಲ."
|