“ಪರಮ ಪ್ರಭು ಎಲ್ಲದರಲ್ಲೂ ಅಭಿವ್ಯಕ್ತವಾಗಿರುವನು, ನೀವು ನೋಡುವ ವಸ್ತು, ಅಥವಾ ಚೇತನ, ಅಥವಾ ಯಾವುದಾದರೂ, ಭೌತಿಕ, ರಾಸಾಯನಿಕ - ನೀವು ಹೆಸರಿಸಬಹುದಾದ ಯಾವುದೇ ವಸ್ತುಗಳು – ಹಲವಾರು ವಸ್ತುಗಳಿವೆ. ಆದರೆ ಅವು ದೇವರಿಂದ ಬೇರ್ಪಟ್ಟಿಲ್ಲ. ದೇವರು ಎಲ್ಲೆಡೆ ಸಂಪರ್ಕ ಹೊಂದಿದ್ದಾನೆ. ಈಶಾವಾಸ್ಯಂ ಇದಂ ಸರ್ವಂ (ಶ್ರೀ.ಈಶೋ 1). ನಮ್ಮ ಭಗವದ್ಗೀತೆಯಲ್ಲಿ ಹೇಳಿರುವ ಹಾಗೆ ಯೇನ ಸರ್ವಂ ಇದಂ ತತಂ : 'ದೇಹದಾದ್ಯಂತವಿರುವ ವಸ್ತುವು ಯಾವುದೋ, ಅದೇ ನೀನು’ ಎಂದು ಶುರು ಮಾಡಿರುವೆವು. ಆದ್ದರಿಂದ ಇದು ಪ್ರತ್ಯೇಕ ಪ್ರಜ್ಞೆ : 'ನಾನು ದೇಹದಾದ್ಯಂತ ಇರುವೆನು’. ಅದೇ ರೀತಿ, ಪರಮ ಪ್ರಜ್ಞೆ, ಅವನು ಬ್ರಹ್ಮಾಂಡದಾದ್ಯಂತ, ಎಲ್ಲೆಡೆ ಇದ್ದಾನೆ. ಇದು ದೇವರ ಶಕ್ತಿಯ ಒಂದು ಸಣ್ಣ ಅಭಿವ್ಯಕ್ತಿ, ಬಹಳ ಚಿಕ್ಕದು."
|