KN/661122 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
“ನಮ್ಮ ಶಿಕ್ಷಣದ ಪ್ರಗತಿಯ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. ಆದರೆ ನೀವು ವಿವಿಧ ವ್ಯಕ್ತಿಗಳನ್ನು ಪ್ರಶ್ನಿಸಿದರೆ 'ನೀವು ಏನು?' ಎಂದು, ಕೆಲವರು ಮಾತ್ರ ಉತ್ತರಿಸುವರು. ಎಲ್ಲರೂ ಈ ದೇಹದ ಪರಿಕಲ್ಪನೆಯಲ್ಲಿದ್ದಾರೆ. ಆದರೆ ನಾವು ನಿಜವಾಗಿ ಈ ದೇಹವಲ್ಲ. ಈ ಪ್ರಶ್ನೆಯನ್ನು ನಾವು ಹಲವಾರು ಬಾರಿ ಚರ್ಚಿಸಿದ್ದೇವೆ. ಆದ್ದರಿಂದ 'ನಾನು ಈ ದೇಹವಲ್ಲ' ಎಂಬ ಈ ಪರೀಕ್ಷೆಯಲ್ಲಿ ಉತ್ತೀರ್ಣನಾದ ನಂತರ, ಆಗ ಒಬ್ಬನು ನಿಜವಾದ ಜ್ಞಾನಕ್ಕೆ ಬರುತ್ತಾನೆ. ಅದು ನಿಜವಾದ ಜ್ಞಾನ, 'ನಾನು ಏನು' ಎಂಬುದು. ಅದು ಪ್ರಾರಂಭ. ಆದ್ದರಿಂದ ಭಗವಾನ್ ಕೃಷ್ಣ ಈಗ ಯಾವ ಜ್ಞಾನವನ್ನು ನೀಡುತ್ತಿದ್ದಾನೋ, ಅರ್ಜುನನಿಗೆ ಬೋಧನೆ ನೀಡುತ್ತಾ, ಅವನು ಹೇಳುತ್ತಾನೆ, 'ಇದು ರಾಜ-ವಿದ್ಯಾ’. ರಾಜ-ವಿದ್ಯಾ ಎಂದರೆ ಒಬ್ಬನು ತಾನು ಏನು ಎಂದು ತಿಳಿದುಕೊಳ್ಳುವುದು, ಮತ್ತು ಅದಕ್ಕೆ ತಕ್ಕಂತೆ ವರ್ತಿಸುವುದು. ಅದನ್ನು ರಾಜ-ವಿದ್ಯಾ ಎಂದು ಕರೆಯಲಾಗುತ್ತದೆ."
661122 - ಉಪನ್ಯಾಸ BG 09.02 - ನ್ಯೂ ಯಾರ್ಕ್