“ಭಗವಂತನು ಹೇಳುತ್ತಾನೆ, ಮಯಾಧ್ಯಕ್ಷೇಣ. ಮಯಾಧ್ಯಕ್ಷೇಣ ಎಂದರೆ 'ನನ್ನ ಅಧೀಕ್ಷಣದ ಅಡಿಯಲ್ಲಿ. ನನ್ನ ಅಧೀಕ್ಷಣದ ಅಡಿಯಲ್ಲಿ'. ಆದ್ದರಿಂದ ಭೌತಿಕ ಪ್ರಕೃತಿಯು ಅದರ ಹಿಂದೆ ಕೈ, ಭಗವಂತನ ಕೈ, ಇಲ್ಲದೆ ಅಂತಹ ಅದ್ಭುತ ಸಂಗತಿಗಳನ್ನು ಪ್ರದರ್ಶಿಸಲು ಸಾಧ್ಯವಿಲ್ಲ. ಅದನ್ನು ಒಪ್ಪಿಕೊಳ್ಳಬೇಕು. ನೀವು ನೋಡಲಾಗುವುದಿಲ್ಲ. ಭೌತಿಕ ವಸ್ತುಗಳು ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವ ಉದಾಹರಣೆಯನ್ನು ನೀಡಿಲು ನಿಮಗೆ ಸಾಧ್ಯವಿಲ್ಲ. ನಿಮ್ಮ ಅನುಭವದಲ್ಲಿ ನಿಮಗೆ ಅಂತಹ ಉದಾಹರಣೆಗಳಿಲ್ಲ. ಭೌತವಸ್ತುವು ಜಡವಾಗಿದೆ. ಆಧ್ಯಾತ್ಮಿಕ ಸ್ಪರ್ಶವಿಲ್ಲದೆ, ಸಕ್ರಿಯವಾಗುವ ಸಾಧ್ಯತೆಯಿಲ್ಲ. ಭೌತವಸ್ತುವು ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ."
|