KN/661127 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಇದರರ್ಥ ನಾವು ಶಾಶ್ವತವಾಗಿ ಕೃಷ್ಣನೊಂದಿಗೆ ಸಂಬಂಧ ಹೊಂದಿದ್ದೇವೆ ಎಂದು. ಈ ಸಂಬಂಧವನ್ನು ಮರೆತು, ನಾವು ಈಗ ನಾವಲ್ಲದ ಈ ಭೌತಿಕ ದೇಹದೊಂದಿಗೆ ಸಂಬಂಧದಲ್ಲಿ ತೊಡಗಿದ್ದೇವೆ. ಆದ್ದರಿಂದ ನಾನು ಕೃಷ್ಣನೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ನನ್ನ ಚಟುವಟಿಕೆಗಳನ್ನು ಪುನಶ್ಚೇತನಗೊಳಿಸಬೇಕಾಗಿದೆ. ಇದನ್ನು ಕೃಷ್ಣ ಪ್ರಜ್ಞೆಯಲ್ಲಿ ಸಕ್ರಿಯವಾಗುವುದು ಎನ್ನಲಾಗುತ್ತದೆ. ಮತ್ತು ಆ ಕೃಷ್ಣ ಪ್ರಜ್ಞೆಯ ಬೆಳವಣಿಗೆಯು ಕೃಷ್ಣನ ಪ್ರೀತಿಯಲ್ಲಿ, ಪೂರ್ಣ ಪ್ರೀತಿಯಲ್ಲಿ, ಕೊನೆಗೊಳ್ಳುತ್ತದೆ. ನಾವು ಆ ಹಂತವನ್ನು ತಲುಪಿದಾಗ, ದೇವರ ಪ್ರೀತಿ, ಕೃಷ್ಣನ ಪ್ರೀತಿ, ಆಗ ನಾವು ಎಲ್ಲರನ್ನೂ ಪ್ರೀತಿಸುತ್ತೇವೆ, ಏಕೆಂದರೆ ಕೃಷ್ಣನೇ ಎಲ್ಲರೂ. ಆ ಕೇಂದ್ರ ಬಿಂದುವಿಗೆ ಬರದೆ, ಜೀವನದ ಭೌತಿಕ ಪರಿಕಲ್ಪನೆ ಆದರಿತ ನಮ್ಮ ಪ್ರೀತಿ - ಸಮಾನತೆ, ಭ್ರಾತೃತ್ವ, ಸಹೋದರತ್ವ - ಇವೆಲ್ಲವೂ ಕೇವಲ ಮೋಸ ಪ್ರಕ್ರಿಯೆ. ಅದು ಸಾಧ್ಯವಿಲ್ಲ."
661127 - ಉಪನ್ಯಾಸ CC Madhya 20.125 - ನ್ಯೂ ಯಾರ್ಕ್