“ಆದ್ದರಿಂದ ಭಕ್ತಿ ಸೇವೆಯಿಂದ, 'ನನ್ನ ಶೋಚನೀಯ ಭೌತಿಕ ಸ್ಥಿತಿಯನ್ನು ಸುಧಾರಿಸಬಹುದು', ಅಥವಾ, 'ನಾನು ಈ ಭೌತಿಕ ಬಲೆಯಿಂದ ಮುಕ್ತನಾಗಬಹುದು' ಎಂದು ಯಾರೂ ನಿರೀಕ್ಷಿಸಬಾರದು. ಅದು ಕೂಡ ಒಂದು ರೀತಿಯ ಇಂದ್ರಿಯ ತೃಪ್ತಿಯಾಗಿದೆ. 'ನಾನು ಈ ಭೌತಿಕ ಬಲೆಯಿಂದ ಮುಕ್ತನಾಗಬೇಕು’, ಎಂದು ಬಯಸಿದರೆ... ಯೋಗಿಗಳು ಮತ್ತು ಜಾನಿಗಳಂತೆಯೇ, ಅವರು ಪ್ರಯತ್ನಿಸುತ್ತಾರೆ. ಅವರು ಈ ಭೌತಿಕ ಬಲೆಯಿಂದ ಮುಕ್ತರಾಗಲು ಪ್ರಯತ್ನಿಸುತ್ತಾರೆ. ಆದರೆ ಭಕ್ತಿ ಸೇವೆಯಲ್ಲಿ ಅಂತಹ ಯಾವುದೇ ಬಯಕೆ ಇಲ್ಲ, ಏಕೆಂದರೆ ಅದು ಶುದ್ಧ ಪ್ರೀತಿ. ಯಾವುದೇ ನಿರೀಕ್ಷೆಯಿಲ್ಲ, 'ನಾನು ಈ ರೀತಿಯಾಗಿ ಲಾಭ ಪಡೆಯುತ್ತೇನೆ', ಎಂದು. ಇಲ್ಲ. ಇದು ಲಾಭದಾಯಕ ವಾಣಿಜ್ಯ ವ್ಯವಹಾರವಲ್ಲ, 'ನಾನು ಏನನ್ನಾದರೂ ಪಡೆಯದಿದ್ದರೆ, ಓಹ್, ನಾನು ಕೃಷ್ಣ ಪ್ರಜ್ಞೆಯಲ್ಲಿ ಭಕ್ತಿ ಸೇವೆಯನ್ನು ಅಭ್ಯಾಸ ಮಾಡುವುದಿಲ್ಲ'. ಲಾಭದ ಪ್ರಶ್ನೆಯೇ ಇಲ್ಲ."
|