KN/661220 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನನ್ನ ಜೀವನದ ಆರಂಭದಿಂದಲೂ ನನ್ನಲ್ಲಿ ಕೆಲವು ಕೆಟ್ಟ ಗುಣಗಳಿವೆ ಎಂದು ಭಾವಿಸೋಣ, ಆದರೆ ನಾನು ಅರ್ಥಮಾಡಿಕೊಂಡಿದ್ದೇನೆ: ‘ಕೃಷ್ಣ ಪ್ರಜ್ಞೆಯು ತುಂಬಾ ಚೆನ್ನಾಗಿದೆ. ನಾನು ಅದನ್ನು ಪಾಲಿಸುತ್ತೇನೆ.’ ಹಾಗಾಗಿ ನಾನು ಪ್ರಯತ್ನಿಸುತ್ತಿದ್ದೇನೆ, ನಾನು ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಅದೇ ಸಮಯದಲ್ಲಿ, ನಾನು ಏನನ್ನಾದರೂ ಅಭ್ಯಾಸ ಮಾಡಿಕೊಂಡಿರುವುದರಿಂದ, ಅದನ್ನು ಬಿಟ್ಟುಕೊಡಲು ಸಾಧ್ಯವಿಲ್ಲ. ನನ್ನ ಅಭ್ಯಾಸವು ಒಳ್ಳೆಯದಲ್ಲ ಎಂದು ನನಗೆ ತಿಳಿದಿದ್ದರೂ, ಅಭ್ಯಾಸವು ಮೂಲ ಸ್ವಭಾವವಾಗಿದೆ. ನಾನು ಅದನ್ನು ಬಿಟ್ಟುಕೊಡಲು ಸಾಧ್ಯವಿಲ್ಲ. ಆದ್ದರಿಂದ ಪ್ರಭು ಕೃಷ್ಣನು ಶಿಫಾರಸು ಮಾಡುತ್ತಾನೆ – ‘ಆದರೂ ಅವನು ಒಳ್ಳೆಯವನು. ಅವನು ಸಾಧು ಅಲ್ಲ, ಅಥವಾ ಅವನು ಪ್ರಾಮಾಣಿಕನಲ್ಲ, ಅವನು ಧಾರ್ಮಿಕನಲ್ಲ ಎಂದು ಟೀಕಿಸುವ ಪ್ರಶ್ನೆಯೇ ಇಲ್ಲ. ಅವನು ಕೃಷ್ಣ ಪ್ರಜ್ಞಾವಂತ ಎಂಬುವ ಕೇವಲ ಆ ಒಂದು ಅರ್ಹತೆ, ಮತ್ತು ಅವನು ಪ್ರಾಮಾಣಿಕವಾಗಿ ವರ್ತಿಸುತ್ತಿದ್ದಾನೆ, ಆದರೆ ಕೆಲವು ಬಾರಿ ವಿಫಲವಾಗುತ್ತಿದ್ದಾನೆ, ಆದರೂ ಅವನನ್ನು ಸಾಧು ಎಂದು ಸ್ವೀಕರಿಸಬೇಕು.’ ಸಾಧು ಎಂದರೆ ಪ್ರಾಮಾಣಿಕ, ಧಾರ್ಮಿಕ, ಧರ್ಮನಿಷ್ಠ.”
661220 - ಉಪನ್ಯಾಸ BG 09.29-32 - ನ್ಯೂ ಯಾರ್ಕ್