“ಸತ್ಯ ಯುಗದಲ್ಲಿ ಧ್ಯಾನದ ಮೂಲಕ ಪಡೆದ ಅದೇ ಸಾಧನೆಯನ್ನು ಮುಂದಿನ ಯುಗದಲ್ಲಿ ಯಜ್ಞಗಳಿಂದ, ಮತ್ತು ಅದರ ಮುಂದಿನ ಯುಗದಲ್ಲಿ ದೇವಾಲಯದಲ್ಲಿ ಆರಾಧನೆಯಿಂದ ಸಾಧಿಸಲಾಯಿತು. ಪ್ರಸ್ತುತ ಯುಗದಲ್ಲಿ ಆ ಯಶಸ್ಸನ್ನು, ಆ ಪರಿಪೂರ್ಣತೆಯನ್ನು , ಆಧ್ಯಾತ್ಮಿಕ ಪರಿಪೂರ್ಣತೆನ್ನು ಹರಿ ಕೀರ್ತನೆಯಿಂದ – ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ, ಹರೇ ಹರೇ / ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ ಹರೇ - ಎಂದು ಜಪಿಸುವ ಮೂಲಕ ಸಾಧಿಸಲು ಶಿಫಾರಸು ಮಾಡಲಾಗಿದೆ. ಹರೇ ಕೃಷ್ಣ ಜಪಿಸಲು ಯಾವುದೇ ಪೂರ್ವ ಅರ್ಹತೆಯ ಅಗತ್ಯವಿಲ್ಲ. ಯಾರಾದರೂ, ಮತ್ತು ಎಲ್ಲರೂ, ಸೇರಬಹುದು, ಮತ್ತು ಇದನ್ನು ಜಪಿರುವುದರಿಂದ, ನಿರಂತರ ಪಠಣದ ಪರಿಣಾಮವಾಗಿ ಮನಸ್ಸಿನ ಕನ್ನಡಿಯ ಮೇಲಿನ ಧೂಳನ್ನು ಶುದ್ಧೀಕರಿಸಲು ಅವನಿಗೆ ಸಹಾಯ ಮಾಡುತ್ತದೆ.”
|