ನಿನಗೆ ಸಲ್ಪ ಸ್ವತಂತ್ರವಿದೆ. ಏಕೆಂದರೆ ನೀನು ಯಾವ ಪರಮಪುರುಷನ ಭಾಗಾಂಶವೋ ಆ ಪರಮಪುರುಷನಿಗೆ ಸಂಪೂರ್ಣ ಸ್ವತಂತ್ರವಿದೆ. ಆದ್ದರಿಂದ ಆ ಸ್ವತಂತ್ರ ಗುಣವು ನಿನ್ನಲ್ಲೂ ಇದೆ. ಚಿನ್ನದ ತರಹ; ಚಿನ್ನದ ಕಣವೂ ಚಿನ್ನವೇ. ಅಂತೆಯೇ, ನೀನು ಕೃಷ್ಣನ ಕಣವಾಗಿರುವ ಕಾರಣ, ಅವನ ಎಲ್ಲಾ ಗುಣಗಳೂ ನಿನ್ನಲ್ಲಿದೆ, ಆದರೆ ಅತಿಸೂಕ್ಷ್ಮ ಪ್ರಮಾಣದಲ್ಲಿ. ಕೃಷ್ಣನ ಹಾಗೆ..., ಭಗವಂತನು ಸಂಪೂರ್ಣವಾಗಿ ಸ್ವತಂತ್ರ, ಆದ್ದರಿಂದ ನೀನೂ ಸ್ವತಂತ್ರನಾಗಿರಲು ಬಯಸುವೆ. ಎಂದಿಗೂ ಸ್ವತಂತ್ರನಾಗಿರುವುದೆ ನಿನ್ನ ಪ್ರವೃತ್ತಿ. ಆದರೆ ನೀನು ಬದ್ಧನಾಗಿರುವೆ. ನೀನು ಬದ್ಧನಾಗಿರುವೆ. ನೀನು ಆಧ್ಯಾತ್ಮಿಕ ಜೀವನವನ್ನು ಪುನಃ ಪಡೆದಾಗ, ಕೃಷ್ಣನಷ್ಟೆ ಸ್ವತಂತ್ರನಾಗುವೆ.
|