KN/680315b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
ಚಾಣಕ್ಯ ಪಂಡಿತರು ಹೇಳುತ್ತಾರೆ "ಸಮಯ ಎಷ್ಟು ಅಮೂಲ್ಯವಾದುದು ಎಂದರೆ, ನೀವು ಲಕ್ಷಾಂತರ ಚಿನ್ನದ ನಾಣ್ಯಗಳನ್ನು ಪಾವತಿಸಿದರೂ, ನೀವು ಒಂದು ಕ್ಷಣವನ್ನೂ ಹಿಂತೆಗುದುಕೊಳ್ಳಲು ಸಾಧ್ಯವಿಲ್ಲ". ಏನನ್ನು ಕಳೆದುಕೊಂಡೆವೋ ಅವುಗಳು ಒಳ್ಳೆಯದಕ್ಕಾಗಿ ಕಳೆದುಹೋಗುತ್ತವೇ. ನ ಚೆನ್ ನಿರರ್ಥಕಂ ನೀತಿಹಿ: 'ನೀವು ಅಂತಹ ಅಮೂಲ್ಯವಾದ ಸಮಯವನ್ನು ಯಾವುದಕ್ಕೋಸ್ಕರಕ್ಕೋ ಹಾಳು ಮಾಡಿದರೆ, ಯಾವುದೇ ಲಾಭವಿಲ್ಲದೆ ', 'ಚ ನ ಹಾನಿಸ್ ತತೋಧಿಕಾ', 'ನೀವೇ ಊಹಿಸಿಕೊಳ್ಳಿ ನೀವು ಎಷ್ಟನ್ನು ಕಳೆದುಕೊಳ್ಳುತ್ತಿದ್ದೀರಿ, ನೀವು ಎಷ್ಟು ಸೋತಿದ್ದೀರಿ ಎಂದು'. ಯಾವ ವಿಷಯವು, ಲಕ್ಷಾಂತರ ಡಾಲರ್‌ಗಳನ್ನು ಪಾವತಿಸಿದರೂ ನೀವು ಮರಳಿ ಪಡೆಯಲು ಸಾಧ್ಯವಿಲ್ಲವೊ, ಅಂತಹದು ಯಾವ ಕೆಲಸಕ್ಕೂ ಬರದೇ ನಷ್ಟವಾದರೆ, ನೀವೇ ಊಹಿಸಿಕೊಳ್ಳಿ ನೀವು ಎಷ್ಟು ತುಂಬಾ ಕಳೆದುಕೊಂಡಿದ್ದೀರೆಂದು. ಆದ್ದರಿಂದ, ಅದೇ ವಿಷಯವನ್ನು: ಪ್ರಹ್ಲಾದ ಮಹಾರಾಜ ಹೇಳುತ್ತಾರೆ ಧರ್ಮಾನ್ ಭಾಗವತನ್, ಕೃಷ್ಣ ಪ್ರಜ್ಞೆ ಅಥವಾ ದೇವರ ಪ್ರಜ್ಞೆ ಹೊಂದಲು ಎಷ್ಟು ಮುಖ್ಯವೆಂದರೆ, ನಾವು ಒಂದು ಕ್ಷಣದ ಘಳಿಗೆಯನ್ನೂ ಕಳೆದುಕೊಳ್ಳಬಾರದು. ತಕ್ಷಣ ನಾವು ಪ್ರಾರಂಭಿಸುತ್ತೇವೆ. ಏಕೆ? ದುರ್ಲಭಮ್ ಮಾನುಷ ಜನ್ಮ. ಮಾನುಷಮ್ ಜನ್ಮ ( ಶ್ರೀ.ಭಾ ೭.೬.೧). ಈ ಮಾನವ ರೂಪದ ದೇಹವು ಬಹಳ ಅಪರೂಪ ಎಂದು ಅವರು ಹೇಳುತ್ತಾರೆ. ಇದನ್ನು ಅನೇಕ, ಅನೇಕ ಜನನಗಳ ನಂತರ ಪಡೆಯಲಾಗಿದೆ. ಆದ್ದರಿಂದ ಆಧುನಿಕ ನಾಗರಿಕತೆ, ಅವರು ಈ ಮಾನವ ರೂಪದ ಜೀವನದ ಮೌಲ್ಯ ಏನು ಎಂದು ಅರ್ಥ ಮಾಡಿಕೊಳ್ಳುತ್ತಿಲ್ಲ. "
680315 - ಉಪನ್ಯಾಸ ಶ್ರೀ.ಭಾ. ೦೭.೦೬.೦೧ - ಸ್ಯಾನ್ ಫ್ರಾನ್ಸಿಸ್ಕೋ