"ಆತ್ಮವು ಕೃಷ್ಣನ ನಿರ್ಮಾಣ. ಆದ್ದರಿಂದ ಅಂತಿಮವಾಗಿ, ಅವನು ನಮ್ಮ ಅತ್ಯಂತ ಪ್ರೀತಿಯ ಸ್ನೇಹಿತ. ನಾವು ಯಾರನ್ನೋ ಪ್ರೀತಿಸಲು ಪ್ರಯತ್ನಿಸುತ್ತಿದ್ದೇವೆ. ಆ ಯಾರಾದರೋ ಕೃಷ್ಣನ ವಿಕೃತ ಪ್ರತಿಬಿಂಬ. ವಾಸ್ತವವಾಗಿ ... ಮಗುವಿನಂತೆಯೇ. ಮಗು ತಾಯಿಯ ಸ್ತನವನ್ನು ಹುಡುಕುತ್ತಿದೆ, ಮತ್ತು ಅದು ಅಳುತ್ತಿದೆ. ಯಾರಾದರೂ ಮಗುವನ್ನು ತೆಗೆದುಕೊಂಡರೆ, ಅವನಿಗೆ ತೃಪ್ತಿ ಇಲ್ಲ. ಏಕೆಂದರೆ "ನನಗೆ ನನ್ನ ತಾಯಿಯನ್ನು ಬೇಕು" ಎಂದು ವ್ಯಕ್ತಪಡಿಸಲು ಸಾಧ್ಯವಿಲ್ಲ. ಅದೇ ರೀತಿ, ನಾವು ಕೃಷ್ಣನನ್ನು ಪ್ರೀತಿಸಲು ಹಾತೊರೆಯುತ್ತಿದೇವೆ,ವಿಕೃತ ರೀತಿಯ್ಲಲಿ. ಆದರೆ ನಮಗೆ ಕೃಷ್ಣನ ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವುದರಿಂದ, ನಾವು ಕೃಷ್ಣನ ಜೊತೆಯ ಸಂಬಂಧವನ್ನು ಮರೆತಿದ್ದೇವೆ, ಆದ್ದರಿಂದ ನಾವು ಈ ದೇಹ, ಆ ದೇಹ ಎಂದು ಪ್ರೀತಿಸುತ್ತಿದ್ದೇವೆ. "
|